ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೆ ಅಂಬೇಡ್ಕರ್ ಅರ್ಥವಾಗುವುದು ಹೀಗೆ..

lakshman k p

ಲಕ್ಷ್ಮಣ್ ಕೆ ಪಿ 

ambedkarನನಗೆ ಅಂಬೇಡ್ಕರ್ ಅರ್ಥವಾಗುವುದು ಹೀಗೆ..

ನಾನು ತುಂಬ ಚಿಕ್ಕವನಿದ್ದಾಗ ನಮ್ ಅವ್ವ ಒಂದ್ ಕಥೆ ಹೇಳ್ತಿತ್ತು

‘ಲೋಕ್ವಾದ್ ಲೋಕೆಲ್ಲ ಬರಗಾಲ ಬಂದ್ ಬೆಂದೋಗಿತ್ತು , ತಿನ್ನೋಕ್ ಇಟ್ಟಿಲ್ಲ ಕುಡ್ಯೋಕ್ ನೀರಿಲ್ಲ ಜನ ಅಗುಳು ಕಂಡು ಎಷ್ಟೋ ದಿನ ಆಗಿತ್ತು ಇಂಗ್ ಇರೋವಾಗ ನನ್ನಂತೋಳ್ ಒಬ್ಲು ಹಸಿಕ್ಕೊಂಡು ಕಂಕ್ಲಾಗ್ ಮಗ ಎತ್ಕಂಡು ಅನ್ನಾ ಅನ್ನಾ ಮನೆ ಮನೆ ಬಿಕ್ಷಾ ಎತ್ತುತಿದ್ಲಂತೆ..

..ಯಾರ್ದೊ ಮನೆಗೆ ಒಂದ್ ಮಿದ್ಕೆ ಅನ್ನ ಕೊಟ್ರಂತೆ ಅವ್ಲು ತಾನ್ ತಿಂದಂಗೆ ಎಲ್ಲ ಮಗೀಗೆ ತಿನ್ಸಿಲಂತೆ ಎಷ್ಟೋ ಹೊತ್ತಾದ್ಮೇಲೆ ಅವ್ಳ್ಗೆ ಹಸ್ವು ತಡೆಯಕ್ಕಾಗ್ದೆ ಒಂದ್ ಮರದ್ ಮರೀಗ್ ಹೋಗಿ ಮಗಿನ್ ಹೊಟ್ಟೆಯ ಸಿಗ್ದು ಅಗಳು ತಡಕಾಡಿ ತಿಂತಿದ್ಲಂತೆ..

ಇಂಥಾ ಘೋರವ ಕಂಡು ಮೋಡಗಳ ಒಡಲಲ್ಲಿ ಭರಣಿ ಮಳೆ ಹುಟ್ಟಿತಂತೆ ಲೋಕದ ಬರಗಾಲ ನೀಗಿಸ್ತಂತೆ . ಇಂಥದ್ದೊಂದು ಮಹಾಮಳೆ ಅಂಬೇಡ್ಕರ್. ಕರುಣೆ ಮತ್ತು ಸ್ವಾಭಿಮಾನದ ಮಹಾಮಳೆ…

‍ಲೇಖಕರು Admin

6 May, 2016

3 Comments

  1. nethra

    channagi grahicidiri

  2. lalitha sid

    ಹೌದು.

  3. ಅಂಕ್ನಳ್ಳಿ ಜಯರಾಂ.

    ನಿಜ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading