-ನರೇಶ್ ಮಯ್ಯ
ಖ್ಯಾತಿಗೋ, ಅಹಂಭಾವಕ್ಕೋ ಇಲ್ಲವೇ ಬರಿಯ ತೋರಿಕೆಯೊಂದನ್ನೇ ಆವಿರ್ಭವಿಸಿಕೊಂಡ ಛದ್ಮವೇಶದಲ್ಲಿ ಸ್ಖಲಿಸಿದ, ಸುಳ್ಳು ಸೃಷ್ಟಿಗಳಲ್ಲವೇ ಅಲ್ಲ; ಸೂಕ್ಷ್ಮಜ್ಞನೊಬ್ಬನ ಸೃಜಿತ ಭಾವಲೋಕ.ತಾನಂಕುರವಾದ ಮಣ್ಣ ಘಮಲಿನಿಂದಲೇ ಇಡೀ ಲೋಕ ತನ್ನತ್ತ ತಿರುಗಿ, ಬೆರಗಾಗುವಂತಹ ದೇದೀಪ್ಯಮಾನವಾದ ಹೊಸ ನಾಟ್ಯ ಲೋಕವನ್ನೇ ನಿಮರ್ಿಸಿದ `ನಟ ನಾರಾಯಣಿ’ ನಮ್ಮ ಕಂಬಾರರು.ನವೋದಯದ ಜ್ಞಾನೋದಯವೊಂದು ಅದಾಗಲೇ ಅಸ್ತಮಿಸಿ, ನವ್ಯದ ಎಲ್ಲ ಪ್ರತಿಭೆಗಳೂ ಪಡುವಣದೆಡೆಗೆ ಮುಖಮಾಡಿದ ಕಾಲವದು. ಅಲ್ಲಿನ ಭಂಡಾರದಿಂದಲೇ ಎಲ್ಲವನ್ನೂ ಬಗೆದು, ಬರಸೆಳೆದು, ನಮ್ಮದೇ ಅಚ್ಚ್ಚಿಗೆ ಹೊಸಪಾಕವೊಂದನ್ನು ಎರೆದು, ವಿಶ್ವ ಮಾನ್ಯತೆಯ ಮಾನದಂಡವನ್ನೇ ಮಣಿಸಿದ, ಸಾಹಿತ್ಯ ಲೋಕದ ಉಸ್ತಾದರ ಜೊತೆ ಜೊತೆಯಲ್ಲೇ ತಮ್ಮ ನಾಟಿ ನಾಜೂಕನ್ನು ಮೆರೆದ ವಿಶಿಷ್ಟ ಮೆರುಗು ಕಂಬಾರರದ್ದು.ಒಂದೆಡೆ ಪಶ್ವಿಮದ ಸರ್ವಸಾರವನ್ನೂ ಹೀರಿ, ನಾವ್ಯಾರಿಗೂ ಹಿಂದಿಲ್ಲ ಎಂದು, ಪ್ರಕಾಂಡ ಪಾಂಡಿತ್ಯವನ್ನೇ ಮೆರೆದ ತಮ್ಮ ಸಹಸಂಗಾತಿಗಳ ಜೊತೆ ಜೊತೆಗೇ ಆ ಎಲ್ಲ ಸ್ಥರಗಳನ್ನೂ ಮೀರಿ ಅವರು ಸೃಷ್ಟಿಸಿದ `ಲೋಕ ಸಂಸ್ಕೃತಿ’ ಯೊಂದು ಆವರೆಗೂ ಭ್ರಮಿಸಿದ್ಧ ಎಲ್ಲ ಪೊರೆಗಳನ್ನು ಕಳಚಿ, ಹೊಸತೆರೆಯನ್ನು ತೆರೆಯುವಂತೆ ಮಾಡಿದ ಪರಿ ಬಲು ಮೋಹಕ.ಕನ್ನಡ ಜನಪದವನ್ನ ಬಲು ಜತನದಿಂದ ಜೊತೆಯಾಗಿರಿಸಿಕೊಂಡು ಇಡೀ ಜಗತ್ತೇ ಜೋಗುಡುವ ಹೊಸ ಲಹರಿಯೊಂದಕ್ಕೆ ಆದಿಯಾದ `ಬಹುರೂಪಿ’ಗೆ ಯಾವ ಜ್ಞಾನ ಪೀಠ…..?ನಾಟಕದ ನಿದರ್ೇಶಕನೊಬ್ಬ ತನ್ನ ರಂಗಕೃತಿಯೊಂದು ಪಡಿಮೂಡಲು ತನ್ನದೇ ತವಕದಲ್ಲಿ ಮುಳುಗಿದ್ದರೆ, ಇತ್ತ ನಾಟಕಕಾರನೊಬ್ಬ ತನ್ನ ಸಾಹಿತ್ಯ ಕೃತಿಯು ರಂಗರೂಪ ತಳೆದು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುವ ರಸ ನಿಮಿಷಕ್ಕಾಗಿ ಕಾದು ತಲ್ಲಣಿಸುತ್ತಿರುತ್ತಾನೆ ಇಲ್ಲವೇ ಪ್ರದರ್ಶನದ ನಂತರ ತನ್ನ ಕಲ್ಪನೆಗಳೆಲ್ಲವೂ ರಂಗದಲ್ಲಿನ ನಾಟ್ಯ ವಿಲಾಸದಲ್ಲಿ ಲೀನವಾಗಿಹೋಯ್ತೆನ್ನುವ ಕಸಿವಿಸಿಯಲ್ಲಿರುತ್ತಾನೆ. ಕಡೆಗೆ ಎಲ್ಲರೂ ಸೇರಿ ತಂತಮ್ಮದೊಂದು `ಪ್ರಯೋಗ’ವನ್ನು ಹಡೆದು ಕೃತಾರ್ಥರಾದಂತೆ ಭಾವಿಸಿ, ತಮ್ಮದೇ ಥಿಯರಿ, ತಮ್ಮದೇ ಇಸಮ್ಮುಗಳೆಂದು ಬೀಗಿ, ಮತ್ತಿನ್ಯಾವುದೋ ಮತ್ತಿಗೆ ಮುತ್ತಿಗೆ ಹಾಕಲು ಹೊರಡುತ್ತಾರೆ; ರಾಜ್ಯ ಸಕರ್ಾರವೋ, ಕೇಂದ್ರ ಸಕರ್ಾರವೋ ಅಥವಾ ಇನ್ಯಾವುದೋ ಪ್ರಸಿದ್ಧ ಸಂಸ್ಥೆಯೊಂದು ತೊಡಿಸುವ `ಭಾರಿ ಗೌರವ’ದ ಗರಿಯೊಂದನ್ನು ಧರಿಸಲು ಶಿರವೊಡ್ಡಿ ಸಾಲಲ್ಲಿ ನಿಲ್ಲುತ್ತಾರೆ; ಕಾಳಿದಾಸ ಸಮ್ಮಾನ, ಕಬೀರ ಸಮ್ಮಾನ, ಆಮಾನ ಈಮಾನ ಎಂದು ಸದಾ ಕನವರಿಸಬಹುದು ಎಲ್ಲರೂ.ಆದರೆ ಇವರೆಲ್ಲರ ಸೃಷ್ಟಿಯನ್ನು ತಾನೇ ತಾನಾಗಿ ಮೈವೆತ್ತಿ ಮೆರೆಸುವ, ಅವರೆಲ್ಲರ ಆಶಯಗಳನ್ನು ಸಾಕಾರಗೊಳಿಸಬಲ್ಲ ಶಕ್ತಿ ಇರುವುದು ನಟೆನೆಂಬ ಅಭಿನೇತ್ರನಿಗೆ ಮಾತ್ರ.ರಂಗವು ನಿರಂತರ ಹೊಳೆವುದು ಅವನಿಂದಲೇ. ಅವರವರದೇ ಆದ ಕಲ್ಪನಾವಿಲಾಸಗಳಿಗೆ ಮನಸೊಡ್ಡಿ, ಎದೆಯೊಡ್ಡಿ ತನ್ನಿಡೀ ಭಾವ ಬತ್ತಳಿಕೆಯನ್ನೇ ಅವರವರ ಸೃಷ್ಟಿಗೆ ಬೇಕಾದಹಾಗೆ ಹರಿಯಬಿಟ್ಟು ಆಮೂಲಕ ಮಾಯಾಲೋಕವೊಂದನ್ನೇ ಬಿಚ್ಚಿಡುವ ಆ ನಟನಿಗೆ ಎಲ್ಲಿಯ ಗರಿ ಯಾವ ಪ್ರಶಸ್ತಿ…..?ಒಂದು ನಾಟಕ ಕೃತಿಯ ಪ್ರತಿಯೊಂದು ಪ್ರದರ್ಶನವೂ ಆಯಾ ಕ್ಷಣದ ಸ್ವತಂತ್ರ ರಂಗದಾಟವಾಗಿ ರಸಿಕರೆದುರು ತೆರೆದಿಡುವ ಆ ನಟಸಾಮ್ರಾಟನಿಗೆ ಯಾವ ಸಮ್ಮಾನ…..?ನಟನಿಲ್ಲದೇ ರಂಗವಿಲ್ಲ. ಆ ರಂಗ ರಂಜನೆಗೆ ಬರೆದ ಕೃತಿಯ ಹಂಗೂ ಬೇಡವಾಗಬಹುದು, ಸೂತ್ರಧಾರನಿಲ್ಲದೆಯೂ ನಡೆಯುತ್ತಲೇ ಇರಬಹುದು ಆಟ ನಿರಂತರ.ರಂಗದ ಮೇಲೆ ಸದಾ ಬೆಳಗುವ ತಾರೆ – ನಟಈ ಇಂಥ ನಟ ಎನ್ನುವ ಕಾರಣಕ್ಕೇ, ಉಳಿದೆಲ್ಲರಿಗಿಂತ ಬಹಳ ಭಿನ್ನವಾಗಿ ಕಾಣುತ್ತಾರೆ ಕಂಬಾರರು. ಅದಕ್ಕಾಗೇ ತುಂಬ ಹತ್ತಿರದವರೆನ್ನಿಸುತ್ತಾರೆ, ಇಷ್ಟವಾಗುತ್ತಾರೆ.
ತಾವು ರಚಿಸಿದ ಪ್ರತಿ ನಾಟಕಗಳ ಹಿಂದೆಯೂ ಈ ನಟನೆಂಬ ಕಂಬಾರರ ಕುಸುರಿ ಬಹುಮುಖ್ಯವಾಗಿ ಕೆಲಸಮಾಡಿದೆ ಎಂಬುದು ನನ್ನ ಭಾವನೆ. ತಾವಾಡಬೇಕೆಂದೇ ಬರೆದ ನಾಟಕಗಳಿರಬೇಕೇನೋ ಎಂದೆನಿಸುವಷ್ಟರಮಟ್ಟಿಗೆ ಭಾಸವಾಗಿಬಿಡುತ್ತವೆ ಅವರ ನಾಟಕಗಳು.ತಮ್ಮದೇ ವಿಚಿತ್ರ-ಆರೋಪಿತ ಆಲೋಚನೆಗಳನ್ನು ತುರುಕಿ, ನಾಟಕ ಕೃತಿಯೊಂದನ್ನು ಬರೆದು ಪ್ರಕಟಿಸಿ, ತನ್ನ ಕೃತಿಯೊಂದನ್ನು ರಂಗಭೂಮಿಗೆ ನೀಡಿದ್ದಾಯಿತೆಂದೂ, ಅಲ್ಲಿಗೆ ತನ್ನ ಕೆಲಸ ಮುಗಿಯಿತೆಂದು ಕೈತೊಳೆದುಕೊಳ್ಳುವಂಥ ಸಾಹಿತಿಯೊಬ್ಬನನ್ನ ಪರಿಪೂರ್ಣ `ನಾಟಕಕಾರ’ನೆಂದು ತಿಳಿಯುವುದು ನನ್ನಂತಹ ನಟನಿಗೆ ಬಹು ಭಾರದ ಹೊರೆ.ಕೃತಿಕಾರನೊಬ್ಬ ಪಾತ್ರಗಳೇ ತಾನಾಗಿ, ರಂಗವೇ ತಾಬರೆವ ಪುಸ್ತಕವೆಂದೆನಿಸಿ, ತನ್ನ ಭಾವ ಚಿತ್ತಾರವೆಂಬ ಲೇಖನಿಯಿಂದ ದೃಶ್ಯ ದೃಶ್ಯಗಳಾಚೆಗೂ ಹರಿವ ಬಗೆ – ಬರೆವ ಸೊಗ ಅನನ್ಯ.ಹಾಡುತ್ತಲೇ, ಅಭಿನಯಿಸುತ್ತಲೇ ತಮ್ಮ ನಾಟಕಗಳನ್ನು, ಕಾವ್ಯಗಳನ್ನ ತಾವೇ ಅಭಿವ್ಯಕ್ತಿಸಬಲ್ಲಂತಹ ಬಲು ಅಪರೂಪದ ಭಾಗವತ – ನಟವರೇಣ್ಯ ಕಂಬಾರರು.ಅದಕ್ಕೇ ಅವರ ನಾಟಕಗಳು, ರಂಗ ಪಠ್ಯವನ್ನೇ ಮೂಲವಾಗಿ ಮೇಳೈಸಿರುವ ಪ್ರದರ್ಶನವೊಂದರ ವಿಸ್ತಾರವಾದ ಟಿಪ್ಪಣಿಯಂತೆ ಕಾಣುತ್ತವೆ. ಅಲ್ಲಿ ನಟನದ್ದೇ ಆಟ ಮೇಳದ್ದೇ ರಂಗವಲ್ಲಿ.ಕೋಟ ಶಿವರಾಮ ಕಾರಂತರು, ಕಂಬಾರರು ತಮ್ಮ ನಾಟಕಗಳನ್ನು ತಾವೇ ಆಡಿಸಿ – ಅಭಿನಯಿಸಲೋಸುಗ ಬರೆದುಕೊಂಡಿರಬಹುದೆಂದು ಅನಿಸುವುದು ಈ ಕಾರಣಕ್ಕೇ. ಅಥವಾ ಬರೆದ ಮೇಲೆ ತಾವೇ ಅಭಿನಯಿಸುವ ಇರಾದೆ ಅವರಿಗೆ ಇರದೇ ಇರಲಾರದು.ಬರವಣಿಗೆ, ಉಪಾಧ್ಯಾಯಿಕೆ, ಮಾತುಗಾರಿಕೆ ಇತ್ಯಾದಿಗಳೆಲ್ಲವನ್ನೂ ಮೀರಿ ಮಿನುಗುವ ಮಿಂಚು `ನಟ’ ಅನ್ನೋ ಕಂಬಾರ. ಆ ಅಂಥಾ ನಟನೇ ಸರ್ವಸಮಗ್ರವನ್ನೂ ತನ್ನೊಳಗೇ ಕಟ್ಟಿಕೊಡುವ, ಆ ಮೂಲಕ ಜೀವಂತವಾದೊಂದು ಹೊಸ ಅನುಭಾವವನ್ನು ನೀಡುವ ನಿರಂತರ ರಸಿಕ – ಭಾವಲೋಕದ ಪಥಿಕ.ಹಳ್ಳಿಯಲ್ಲಾಡುವ ಅಪ್ಪಟ ನುಡಿಗಟ್ಟುಗಳೇ ಹೊಸ ರೂಪಕಗಳಾಗಿ ಎದ್ದು ನಿಲ್ಲುವ, ಅನಾದಿಕಾಲದಿಂದಲೂ ಅಜ್ಜ – ಅಜ್ಜಿಯರು, ಜನಪದರು ಹೇಳುತ್ತಿದ್ದ ಸಣ್ಣ ಸಣ್ಣ ಘಟನೆ – ಕಥಾನಕಗಳೇ, ಆಧುನಿಕವಾದೊಂದು ಆಚರಣೆಗಳಾಗಿ ವಜೃಂಭಿಸುವ ಒಂದು ಕುಶಲಗಾರಿಗೆ ಕಂಬಾರರ ಬಹುತೇಕ ನಾಟಕಗಳಲ್ಲಿ, ಕಾವ್ಯಗಳಲ್ಲಿ, ಮೇಳೈಸುತ್ತವೆ. ಬಹುಶಃ ನಮಗೆ ಇದೀಗ ಬೇಕಿರಬಹುದೆನಿಸುವ ನವ್ಯೋತ್ತರದ ಹೊಸ ಹಾದಿಯ ದೊಂದಿ ಕಂಬಾರರ ನಾಟಕ ಕೃತಿಗಳ ರಂಗ ಸಾಧ್ಯತೆಗಳಲ್ಲಿ ಅಡಗಿರಬಹುದು.ಬರಿಯ ಉಪನ್ಯಾಸಗಳ ಮೂಲಕ, ಚಚರ್ೆ – ವಿಮಷರ್ೆಗಳ ಮೂಲಕವಷ್ಟೇ, ನಾವು ಕಂಬಾರರು ಸೃಷ್ಟಿಸುವ ಆ ಹೊಸ ಹಾದಿಯ ಜಾಡನ್ನು ಹಿಡಿಯುವುದು ಅಸುಲಭಸಾಧ್ಯ.ಯಾವುದನ್ನು ನಾವು `ಆಧುನಿಕ’ವೆಂದು ಭಾವಿಸಿ, ನಮ್ಮದಲ್ಲದ ಒಂದು ಆವಿರ್ಭವಿತ ಹಾದಿಯನ್ನು ಹಿಡಿದಿದ್ದೇವೋ ಆ ಎರವಲು ತಂಬುಲವನ್ನು ಜಗಿಯುವುದನ್ನು ಬಿಟ್ಟು, ಕಂಬಾರರ ನಾಟಕಗಳನ್ನು ಕಥನಗಳನ್ನು ಅಭಿನಯಿಸುವ ಅಭ್ಯಾಸ ಶುರುವಿಡಬೇಕು. ಅದಾಗ ಕಂಬಾರರ ಈ ಆಧುನಿಕ ಸಂಕಥನದ ವಿಶಿಷ್ಟ ವಿನ್ಯಾಸಗಳನ್ನು ನಮ್ಮದೇ ಜನಪದ ಆರಾಧನೆ – ಆಟಗಳ ಮುಖಾಂತರ ಹೆಕ್ಕಿ ತೆಗೆಯಬಹುದು ಎಂದೆನಿಸುತ್ತದೆ.ಯಾವ ಇಸಂನ, ಯಾವ ಹೊರೆಯೂ ಎನಿಸದ, ರಂಜನೆಯ ರಂಗಲ್ಲೇ ಹಲವಾರು ಹೊಸ ರಂಗ ಸಾಧ್ಯತೆಗಳು ಸಿಗುವ ಎಲ್ಲ ಗುಣಗಳೂ ಕಂಬಾರರ ಕೃತಿಗಳಲ್ಲಿ ಭರಪೂರವಾಗಿದೆ.ಅರಿಸ್ಟಾಟಲ್ ಹೇಳುವಂತೆ ಗೋಳಿಡುವ, ಹಿಂಸಾತ್ಮಕ ಟ್ರಾಜಿಡಿಗಳಿಂದಲೇ ಭಾವಶುದ್ಧಿಯಾಗಬೇಕೆಂದೇನೂ ನನಗನ್ನಿಸುವುದಿಲ್ಲ.ಆಡಿ – ಆಡಿಸುತ್ತಲೇ, ಹಾಡ – ಹಾಡುತ್ತಲೇ ಭಾವಶೋಧನೆಯಾಗಬೇಕು. ಅಂಥಹ ಒಂದು ಅಪರೂಪವಾದ ಭಾವ ಶೋಧೀಯ ಗುಣವೊಂದು ಕಂಬಾರರ ನಾಟಕಗಳ ಎಲ್ಲ ಎಳೆಗಳಲ್ಲೂ ಅಡಗಿಕೊಂಡಿದೆ.ಅದಕ್ಕೇ, ಸಾಂಗ್ಯಾ ಬಾಳ್ಯಾದ ಸಖ-ಸಖಿಯರ ಸಂಗತಿ ಹಾಡು ಹಸೆಗಳೆಲ್ಲೇ ಬಹು ಸೂಕ್ಷ್ಮವಾದೊಂದು, ಹಾಗೆಯೇ ವಿಷಣ್ಣವಾದೊಂದು ಆಲೋಚನೆಯನ್ನು ಮನದ ಮೂಲೆಯಲ್ಲಿ ಗಾಢವಾಗಿ ಬಿತ್ತಿ ಬಿಡುವುದು.ಸುರತ – ಸಮ್ಮಿಲನಗಳ ಸುಖವೇ ಕರುಳಕುಡಿ ಬೇಡುವ ಮುಖೇನ, ಮುಂತಲೆಮಾರುಗಳ ಹೊಸ ಯುಗ ಪಲ್ಲಟವನ್ನು ಅಪೇಕ್ಷಿಸುವ ಅವರ `ಜೋಕುಮಾರಸ್ವಾಮಿ’ ಮಗದೊಂದು ಮನ್ವಂತರಕ್ಕೆ ಮುಖಾ ಮುಖಿಯಾಗುವ ತುಡಿತವನ್ನು ತೀಕ್ಷ್ಮವಾಗಿ ಪ್ರತಿಬಿಂಭಿಸುತ್ತದೆ.ಈ ಎಲ್ಲ ಬೆರಗುಗಳನ್ನು ಬಿಡಿಸಿ ನೋಡಬೇಕಾದರೆ, ಅವರ ನಾಟಕಗಳ ಅಭ್ಯಾಸವೇ ದಾರಿ, ಪ್ರದರ್ಶನಗಳೇ ರಹದಾರಿ.ಅವರ ಈ ಬೆರಗುಗಳೇ ಅವರನ್ನು ರಾಷ್ಟ್ರೀಯ ನಾಟಕ ಶಾಲೆಯ ಪೀಠಾಧಿಪತಿಯನ್ನಾಗಿ ಮಾಡಿದ್ದು, ಅದೂ ಎರಡು ಅವಧಿಗೆ.ದಕ್ಷಿಣ ಭಾರತದ ದೈತ್ಯ ರಂಗಪ್ರತಿಭೆಗಳನ್ನು ಎದುರುಗೊಳ್ಳಲಾಗದೇ ಒಳಗೊಳಗೇ `ಮದ್ರಾಸಿ’ಗಳೆಂದು ಹೆದರುತ್ತಿದ್ದ `ಉತ್ತರಭೂಪ’ರನ್ನು, ಅಂತಹ ಮದ್ರಾಸಿಗಳ ನಾಡಿನವರೇ ಆದ ಕಂಬಾರರೇ ಆಳಿದ್ದು ಇತಿಹಾಸ ಅಲ್ಲವೇ.ಕಂಬಾರರು ರಾಷ್ಟ್ರೀಯ ನಾಟಕ ಶಾಲೆಯ ಛೇರ್ಮನ್ ಆಗಿದ್ದು, ಅಷ್ಟು ಸುಲಭದ ಮಾತಲ್ಲ. ಕನ್ನಡ ಕಂಪಿನ ಆ ಕೃಷ್ಣ ಪ್ರತಿಭೆಗೆ ತಲೆಬಾಗಿ ನಿಂತು ಮಣಿದುಹೋಯಿತು ಇಡೀ ರಾಷ್ಟ್ರೀಯ ರಂಗ ಶಾಲೆ.ವಿಶ್ವದಾದ್ಯಂತ ಸಂಚಲನ ಮೂಡಿಸಿದ ಕೆ.ವಿ.ಸುಬ್ಬಣ್ಣನವರ ನೀನಾಸಮ್ ಇಂಥಹುದ್ದೇ ದೇಸೀ ಮೂಲಗಳಿಂದಲ್ಲವೇ ಎಲ್ಲರನ್ನು ತನ್ನತ್ತ ಸೆಳೆದುಕೊಂಡಿದ್ದು. ಅಂತಹ ನೀನಾಸಮ್ನ ಶುರುವಿನ ದಿನಗಳಿಗೆ ಸಾಕ್ಷಿಯಾಗಿದ್ದವರು ಕಂಬಾರರು. ಆತ್ಮೀಯರಾದ ಸುಬ್ಬಣ್ಣನವರ ಆಹ್ವಾನದ ಮೇರೆಗೆ ಹೆಗ್ಗೋಡಿನ ಗರಡಿಯಲ್ಲಿ ಕಂಬಾರರು ಆಡಿಸಿದ ನಾಟಕಗಳು ರಂಗ ಸಂಸ್ಥೆಯೊಂದರ ಸಾಧನೆಗೆ ಇಂಬು ನೀಡಿವೆ.ಇಷ್ಟಾಗಿಯೂ, ಹೆಸರಿರುವ ಹತ್ತಾರು ಪ್ರಶಸ್ತಿಗಳು, ಸಮ್ಮಾನಗಳು ಖ್ಯಾತಿಯ ಹಿಂದೆ ಓಡಿಬಂದು ಹೆಗಲೇರಬಹುದು ಅಥವಾ ಹೆಮ್ಮೆ ತಂದುಕೊಡಬಹುದು. ಆದರೆ ಅದಕ್ಕೂ ಅಮೂಲ್ಯವಾದೊಂದು ಕೀತರ್ಿಯನ್ನು ನಾವು; ಕನ್ನಡ ನಟ ನಟಿಯರು, ನಿದರ್ೇಶಕರು, ರಂಗಕಮರ್ಿಗಳು ತಂದುಕೊಡಬೇಕು. ಅವರ ನಾಟಕಗಳ, ಅವುಗಳ ರಂಗ ಸಾಧ್ಯತೆಗಳ ಮತ್ತಷ್ಟು ಮಗ್ಗಲುಗಳನ್ನು ಹೆಕ್ಕಿತೆಗೆದು, ಹೊಸ ಪ್ರಸ್ತುತಿಯೊಂದನ್ನು ಆವಿಷ್ಕರಿಸಿ ತೋರಲು ಸಾಧ್ಯವಾಗಬೇಕು. ಅದಕ್ಕೆ ಅವರ ನಾಟಕಗಳನ್ನಾಡಬೇಕು.ಆ ಅಂಥ ನಾಟಕದ ಪ್ರತಿಯೊಂದು ಪ್ರದರ್ಶನವೂ ಅವರಿಗೆ ನಾವು ನೀಡುವ ಒಂದೊಂದು ವಿಶಿಷ್ಠ ಪುರಸ್ಕಾರವಾದೀತು.ಲೋಕನಾಟ್ಯವು ಜಾನಪದೀಯವಾಗಿ ತಾನೇತಾನಾಗಿ ಸೃಷ್ಟಿಸಿದ್ದ ಒಂದು ಉತ್ಸವದ ಸಂಭ್ರಮವನ್ನು ಬಲು ಜತನದಿಂದ ಒಡೆದು ಆ ಮೂಲಕ ಮತ್ತೊಂದು ಪ್ರತಿಮೆಯನ್ನು ಕಟ್ಟುವ ಅವರ ಕಾವ್ಯ ಕಥನದ ಪರೀಯೇ ಹೀಗೆ.
ಮರೆತೇನೆಂದರೆ ಮರೆಯಲಿ ಹ್ಯಾಂಗ
ನಿನ್ನಂಗಭಂಗದ ಅನಂಗಸಂಗ……….






mayya wonderful,neenobba nataka nirdeshakanagi,kambarara natakagalannu arthisikonda grahisida reethi ananyavagide. nneeneluva matu nanage bahala istavaytu “avara natakagala,rangasadyategala mattastu maggalugala hekki tegedu hosa prastutiyannu aviskarisi namma indina yuvajanagakke torisibekagide, adu indina agatya hagu anivarytekuda. ninne jayasree hadida kambarara hadu ” oo kurubaranna saddulla sharana,maduve namana,kaapado kurigalana keli thrill ade,olage gadduge mele huliyondu kutaite,talakitti odadiro tamma” heege a hadu aduestu manamuttuva hage ide alva,
d.ravi varma hospet
ಒಳ್ಳೆಯ ಲೇಖನ.
ನರೇಶ್ ಮಯ್ಯ ಅವರ ಬರವಣಿಗೆಯ ಶಕ್ತಿ ತಿಳಿದಂತಾಯಿತು.
ಲೇಖನ ಚೆನ್ನಾಗಿದೆ.
maiyya, it is an enchanting Experience to read the article on kambaar. it shows various new dimentions only an actor can know. as a nenasam backup U assess kambaar in a diffrent angle.
Keep on writting, maiyya. Good Luck.
Thank You sir
maiyya, it is an enchanting Experience to read the article on kambaar. it shows various new dimentions only an actor can know. as a nenasam backup U assess kambaar in a diffrent angle.
Keep on writting, maiyya. Good Luck.
satheesh gn.
ಮಾವೋತ್ಸೆತುಂಗ್ ಬಗ್ಗೆ ಕಂಬಾರರ ಮಾತೇ ಮುಂದುವರೆಸಿದರೆ ಮಯ್ಯ, ನಿಮ್ಮ ಮ್ಮ್ಳಾತಿನ ಸಂಭ್ರಮ ಕಡಿಮೆ ಆದೀತು. ಬೇರೆಯವರ [ಅದರಲ್ಲೂ ನವ್ಯರ] ಕಣ್ಣೊಳಗಿನ ಹಳದಿ ಕಾಣುವ ಅವರಿಗೆ ತಮ್ಮ ಕಣ್ಣಲ್ಲಿನ ಹಳದಿ ಕಾಣಲಿಲ್ಲ!
ನವ್ಯರು ಕನ್ನಡ ಭಾಷೆಯನ್ನು ಪಶ್ಚಿಮಕ್ಕೆ ಹೊಂದಿಸಿದಹಾಗೆ ಕಂಬಾರ ಜಾನಪದವನ್ನ ಪಡುವ್ಅಲಿಗೆ ಮುಖಮಾಡಿದವರಿಗೆ ಅಟವಾ ಪಶ್ಚಿಮಾತ್ತ ಬುದ್ಧಿಗಳಿಗೆ ತಯರಿಸಿ ಕೊಟ್ಟರು. ಬಿ.ವಿ. ಕಾರಂತರು ಕಂಬಾರರನ್ನು ದೇಶವಿಡೀ ಮೆರೆಸಿದರು.ಅದಕ್ಕೆ ಬೇಕಾದ ನಟರನ್ನು ಸೃಷ್ಟಿಸಿದರು. ಅವರ ಪ್ರಯತ್ನದ ಅನುಕರಣೆ ಜಾನಪದವನ್ನು Exotic ಸರಕಾಗಿ ಅಷ್ಟೆ ಮ್ಡಿಾಡ್ತು. ಹೇಳಿ ಮಯ್ಯ ಕಾರಂತರ ನಂತರ ಕಂಬರರ ನಾಟಕಗಳನ್ನ ಅಷ್ಟೆ ಚೆನ್ನಗಿ ಮಾಡಿಸಿದವರು ಯಾರು? ಅಷ್ಟೆ ಅಲ್ಲ ಕಾರಂತರೆ ಕಂಬಾರರ ನಾಟಕನ [ಮಹಾಮಾಯೀ ಎಂದು ನೆನಪು] ಮಾಡಿಸಲು ಚರ್ಚೆ ಮಾಡಲು ಸಹ ಮುಂದಾಗಲಿಲ್ಲ [ಕಂಬಾರರು ಹಸ್ತಪ್ರತಿ ಕೊಟ್ಟಿದ್ದರು ಸಹ]. ಹೋಗಲಿ ನೀವು ಸಹ ಅವರ ನಾಟಕ ತಕ್ಕೊಳ್ಳಲಿಲ್ಲ ಯಾಕೆ? ಕಂಬಾರರು ನಟರಾದದ್ದೂ ಕಾರಂತರು ಮಾಡಿಸಿದಾಗಲೇ. ಮಯ್ಯ ! ನೆನಪಿಡಿ ಕಂಬಾರರು ಹೊಸ ಈಡಿಯಂ ಬಳಸಿದರು ಹೊಸ ಈಡಿಯಂ ಸೃಷ್ಟಿಸಲಿಲ್ಲ. ಹಾಗೆಂದರೆ ಅವರು ಕಳಪೆ ಎಮ್ದು ಅಲ್ಲ. ಅವರು ಏನಾಗಿದ್ದಾರೋ ಅದಕ್ಕೆ ಅವರನ್ನು ಹೊಗಳಿ, ಏನು ಇರಬಹುದೆಂದು ಭಾವಿಸುತ್ತಾರೋ ಅದಕ್ಕಲ್ಲ! ನಿಮ್ಮಂತಹ ನಟ-ನಿರ್ದೇಶಕರು [ಮಾಜಿ ಎಂದಾರು ಯಾರಾದರು] ಸಾಂದ್ರವಾಗಿ ಬರೆಯಲು ಹೊರಟಿದ್ದಕ್ಕೆ ಅಭಿನಂದನೆಗಳು.
Thanks a lot sir.
Hi Naresh,
I have not read any of Dr. Kambar’s book. So, i don’t like to comment on that. But your article is really good when it comes to Kannada writing. Your authority in Kannada language, and skill in presentation are admirable. May we expect more number of articles from you both in print and electronic media..?
sure sir,thanks a lot.
Athmiya mayya,
Nata haagu nirdeshakanagi Buddi inda paraamarshisi tarkada eraka houdu antarangada anisike galondige moodi bandiruva lekana manasige muda needitu. kambaarara natakadalli mukya patradalli abhinayisi adara pulakitavannu anubhaavisiruva nanage santasa tandide. nimma aaseye nannase kooda adu saakaravagali endu haarisuttene. nimma lekhana maale vistrutagollali…subhashayagalondige….ru.na.babu.
ಪ್ರಿಯ ಮಯ್ಯಾಅವರೆ,
ಲೇಖನ ಬಹಳಾ ಚೆನ್ನಾಗಿದೆ…
thank you sir
your article is really good, meaningfull about kambar sir. Your authority in Kannada language, u r presentation are admirable. May we expect keep on more number of articles. Thanks a lot
ನರೇಶ್ ಮಯ್ಯಾ ಮನೋಜ್ಞ ನಟ ಎಂದು ಗೊತ್ತಿತ್ತು. ಬರವಣಿಗೆಯನ್ನೂ ಇಷ್ಟೊಂದು ಅಚ್ಚುಕಟ್ಟಾಗಿ ಅರಗಿಸಿಕೊಂಡು, ಕರಗತ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದ್ದು ಈಗಲೇ… ಮತ್ತೆ ಮತ್ತೆ ಬರೆಯುತ್ತಿರಿ…ಕೊನೆಗೆ ಅಕ್ಷರವೇ ನಿಮ್ಮ ಮಾತು ಕೇಳಲು ಶುರುಮಾಡುತ್ತದೆ…
ಕಂಗ್ರಾಟ್ಸ್ ಎಂಡ್ ಆಲ್ ದಿ ಬೆಸ್ಟ್…
-ವಿನಾಯಕರಾಮ
ಇನ್ನೊಂದು ವಿಚಾರ, ನರೇಶ್ ಅವರು ಮುಂದಿನ ನಮ್ಮ ಸಿನಿಗಂಧ ಪತ್ರಿಕೆಯಲ್ಲಿ ನಟನೆಯ ನಾನಾ ನೋಟಗಳ ಕುರಿತು ಲೇಖನ ಮಾಲೆ ಬರೆಯುತ್ತಿದ್ದಾರೆ. ಈ ಹಿಂದೆ ಮಂಡ್ಯ ರಮೇಶ್ ಬರೆಯುತ್ತಿದ್ದ ನಂತರದ ವರ್ಷನ್ ಮಯ್ಯಾ ಮುಂದುವರೆಸಲಿದ್ದಾರೆ… (www.cinegandha.com/emag)
-ವಿನಾಯಕರಾಮ
ತಿಳಿದವರ ಬರವಣಿಗೆ ನಿಮ್ಮದು ನರೇಶ್ ಮಯ್ಯ .
ನರೇಶ್ ಜಿ.
ನಟಸಾಮ್ರಾಟನಿಗೆ ಯಾವ ಸಮ್ಮಾನ? ನಟನೇ ನಾರಾಯಣನಾಗಿರುವಾಗ! ಎಷ್ಟು ಸುಂದರವಾಗಿ ಕಂಬಾರರು ನಾಟಕಗಳನ್ನ ಬರೆದಿರುವರೋ ಅದಕ್ಕೆ ಒಪ್ಪುವ ಮಾತುಗಳನ್ನು ನಿಮ್ಮ ಬರವಣಿಗೆಯಲ್ಲಿ ಕಂಡು ತುಂಬಾ ಸಂತೋಷವಾಗುತ್ತಿದೆ. ಒಬ್ಬ ನಾಟಕಕಾರ ಇನ್ನೊಬ್ಬ ನಾಟಕಕಾರನನ್ನು ಅಭಿಮಾನದಿಂದ ಹೊಗಳುವ ಪರಿ ನೋಡಿ ಖುಷಿಯಾಗುತ್ತಿದೆ.
ಲೇಖನ ಚೆನ್ನಾಗಿದೆ
well Articulated article but sangya ballya natak kambaravr natakawalla