ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರವಾಡದ ಕಲಾಮಂಡಲದಲ್ಲಿ…

ಕಲಾಮಂಡಳ,ಧಾರವಾಡ ಸಂಸ್ಥೆಯು ಕಳೆದ ಎರಡು ದಶಕಕ್ಕೂ ಮೇಲ್ಪಟ್ಟು ದೃಶ್ಯಕಲೆಯ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರುತ್ತಿರುವ ಸಂಘಟನೆಯಾಗಿದೆ, ದೃಶ್ಯಕಲೆಯ ಹೊಸಮಾಧ್ಯಮಗಳ ಪ್ರಯತ್ನಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ದಿನಾಂಕ 7-3-2015 ರ ಸಂಜೆ 6.30ಕ್ಕೆ ಧಾರವಾಡದ ಸುವರ್ಣಸಾಂಸ್ಕೃತಿಕ ಭವನದಲ್ಲಿ ಅಶೋಕ ಮನ್ಸೂರ ಛಾಯಾಗ್ರಾಹಕರೊಂದಿಗೆ ಸಂವಾದ ಹಾಗೂ ಸ್ಲೈಡಪ್ರದರ್ಶನವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ

ಅಶೋಕ ಮನ್ಸೂರ



ಗ್ರಾಮೀಣ ಪರಿಸರದೊಂದಿಗೆ ಒಡನಾಟ, ತಂದೆಯ ಜೊತೆಯಲ್ಲಿ ಕೃಷಿಚಟುವಟಿಕೆಯಲ್ಲಿ ಬಾಗಿಯಾಗಿರುವ ಅಶೋಕ ಮನ್ಸೂರ 1984ರಲ್ಲಿ ಎಮ್.ಎ.(ಸಮಾಜಶಾಸ್ತ್ರ )ಪದವಿದರರಾದ ಇವರು ಸಾಮಾಜಿಕ ಕಳಕಳಿಯನ್ನು ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡು ಬಂದವರಾಗಿದ್ದಾರೆ. ರೈತ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದು, ರೈತರ ಮತ್ತು ಕೃಷಿಕೂಲಿಕಾರರ ಎಳ್ಗೆಗಾಗಿ ಎರಡು ದಶಕಕ್ಕೂ ಮೇಲ್ಪಟ್ಟು ಹೋರಾಟವನ್ನು ಮಾಡಿದ್ದಾರೆ. ಕಳೆದ ಒಂದು ದಶಕದಿಂದ ತಮ್ಮಲ್ಲಿದ ಸೃಜನಶೀಲ ಚಿಂತನೆಗಳಿಗೆ ಕ್ಯಾಮರಾದ ಮೂಲಕ ಹೊಸ ಆಯಾಮವನ್ನು ಕಂಡುಕೊಂಡವರು. ಪಶ್ಚಿಮ ಘಟ್ಟಗಳನ್ನು ಹಾಗೂ ಹಿಮಾಲಯದ ಅಡಿಯಲ್ಲಿ ಸುತ್ತಾಡಿ ಅಲ್ಲಿಯ ಜನಜೀವನ ಹಾಗೂ ಪರಿಸರವನ್ನು ತಮ್ಮ ಕ್ಯಾಮಾರಾದ ಮೂಲಕ ಚಿತ್ರಣಗಳನ್ನು ಸೆರೆಹಿಡಿದಿರುವ ಇವರು ಬರುವ ದಿನಾಂಕ 7-3-2015ರ ಸಂಜೆ 6.30ಕ್ಕೆ ಧಾರವಾಡದ ಸುವರ್ಣಸಾಂಸ್ಕೃತಿಕ ಭವನದಲ್ಲಿ ಛಾಯಾಚಿತ್ರಗಳ ಸ್ಲೈಡ ಪ್ರದರ್ಶನ ನೀಡಲಿದ್ದಾರೆ. ಅಲ್ಲದೆ ಛಾಯಾಗ್ರಹಣ ದಲ್ಲಿ ಆಸಕ್ತಿ ಇರುವವರಿಗೆ ಹಾಗೂ ಜನಸಾಮಾನ್ಯರಿಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
 

‍ಲೇಖಕರು G

5 March, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading