ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧರ್ಮೇಚ ಕಾಮೇಚ ಅರ್ಥೇಚ ಪೋಸು

chetana2.jpg

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

ಅಲ್ಲಿ ಆಲ್ಬಮ್ಮಿನ ಹಾಳೆಗಳಲ್ಲಿ ನೀ ನಗುತ್ತಿದ್ದಿ. ನನ್ನ ಹಣೆಗೆ ಸಿಂಧೂರ, ಕೊರಳಿಗೆ ಹಾರ. “ಬಲೀ ಕಾ ಬಕ್ರಾ” ಅಂದರೆ ಅದೇ ಅಂತ ಈಗ ಹೊಳೆಯುತ್ತಿದೆ ನನಗೆ. ಅಗೋ ಅಲ್ಲಿ, ಲಾಜಾ ಹೋಮಕ್ಕೆ ಅರಲು ಸುರಿಯುತ್ತಿದ್ದಾನೆ ಅಣ್ಣ. ಈಗ, ಇಲ್ಲಿ? ಉರಿದು ಬೂದಿಯಾಗಿದ್ದೇನೆ ನಾನು, ಅಸ್ತಿತ್ವವೇ ಇಲ್ಲದಂತೆ…

ಎದೆ ತುಂಬಾ ಪ್ರೇಮವಿದೆ ಬಾರೆ ಅಂದವ ನೀನು, ಹನಿಯನ್ನೂ ಕೊಡದೆ ಯಾಕೆ ಸತಾಯಿಸಿಬಿಟ್ಟೆ? ನೀ ಸಿಗದೇ ಸಿಕ್ಕುಬಿಟ್ಟೆ ಅಂದುಕೊಂಡೆ. ಸಿಗುವ ಮೊದಲೇ ಕಳಕೊಂಡೂ ಬಿಟ್ಟೆ!

ಅದ್ಯಾರು ಹೇಳು, ಮಂಟಪದಲ್ಲಿ ಕಳಸಗನ್ನಡಿ ಹಿಡಿದು ನಿಂತವಳು? ಮನೆ ತುಂಬುವ ಮೊದಲೇ ಒಡೆದು ಹಾಕಿದ್ದಳಲ್ಲ! ninunew.jpgಕುಣಿಯಲಾರದೆ ನೆಲ ಡೊಂಕು ಅಂತ ತವರಿಗೆ ಮರಳಿದವಳು. ಅವಳೊಡೆದ ಕನ್ನಡಿ ಮತ್ತೂ ನೂರು ಚೂರಾಯಿತು. ಬಿಕ್ಕಲೂ ಆಗುತ್ತಿಲ್ಲ ನನಗೀಗ. ಒಡೆದು ಹೋಗಿದೆ ಎದೆ ಕೂಡ.

ನನ್ನದೇ ಪ್ರತಿಬಿಂಬಕ್ಕಾಗಿ ತಡಕಾಡುತ್ತಿದ್ದೇನೆ ನಾನು. ಹೇಳು, ಎಷ್ಟೊಂದು ಚೂರುಗಳನ್ನಾಯ್ದು ತೇಪೆ ಹಾಕಲಿ?

ಮತ್ತೂ… ಆಲ್ಬಮ್ಮಿನ ಹಾಳೆಗಳಲ್ಲಿ ಧರ್ಮೇಚ ಕಾಮೇಚ ಅರ್ಥೇಚ ಪೋಸು ಕೊಟ್ಟು ನಗುತ್ತಲೇ ಇದ್ದೀಯ ನೀನು!

‍ಲೇಖಕರು avadhi

2 September, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading