
ಶಾಲಿನಿ ರುದ್ರಮುನಿ
ಹುಬ್ಬಳಿಯವರು. ಸಂಗೀತ, ವೀಣೆ, ಸಾಹಿತ್ಯ ಚಿತ್ರಕಲೆಯಲ್ಲಿ ಹವ್ಯಾಸ. ಕಥೆ, ಕವನ, ವಿಮರ್ಶೆ, ಗಜಲ್ ಬರವಣಿಗೆ. ವಿವಿಧ ಸಾಹಿತ್ಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೊರಳು ಬಾಗಿ ತುಟಿಗಿತ್ತ ಮುತ್ತು ಎದೆಯಲಿ ಇಳಿಯುವಾಗ ನಿಂತು ಸಾಗು ದೊರೆ,
ಮೇಲೆ ನಭದಲಿ ಘನಿಕರಿಸಿದ ಮಾಡ ಕರಗಿ ಹಗುರಾಗುವಾಗ ನಿಂತು ಸಾಗು ದೊರೆ,
ಹಸಿದ ಬಾಳಿಗೆ ಪ್ರೀತಿ ಪಕ್ವಾನ್ನ ಪ್ರಸಾದವಾಗಿ ಒಡಲಿಗೆ ತೃಪ್ತ ಭಾವ ತುಂಬಿದೆ
ಸಮಯದ ತಿರುಗುಣಿಲಿ ನೆನಪ ಹಕ್ಕಿಕೇಕೆಹಾಕಿ ಕುಣಿಯುವಾಗ ನಿಂತು ಸಾಗು ದೊರೆ,
ಇಕ್ಕೆಲದ ಹಾದಿಯಲಿ ಬಿಕ್ಕು ಸರಿದು ಹಸಿರ ತಂಪೆಲರು ತನುಮನವ ಸೋಕುತಿದೆ,
ಇರುವ ಗಳಿಗೆಯ ಅರ್ಥವೆಲ್ಲ ವ್ಯರ್ಥವಾಗದೆ ವೃಕ್ಷವಾಗುವಾಗ ನಿಂತು ಸಾಗು ದೊರೆ,

ನೆಲದಿ ಬೇರಿಳಿದ ಹಸಿರುಸಿರಿಗೆ ಹಬ್ಬಿ ಹೂ ತಾನರಳಿ ಪಸರಿಸಿ ಹಣ್ಣಾಗುತಿದೆ,
ಚಿರ ಋಣಿಗೆ ನೆಲಬಾನು ದಿಗಂತದಲಿ ಪರಸ್ಪರ ಶರಣಾಗುವಾಗ ನಿಂತು ಸಾಗು ದೊರೆ,
ಎತ್ತರದ ಬೆಟ್ಟದಸಿರಿಗೂ ಆಳದ ನೀಲಿ ಕಡಲಿಗು ಹೊದ್ದಂತೆ ಬಾಳ ಬಯಲು,
ಶಾರು ದನಿಪದದಲಿ ಜೀವಾತ್ಮ ನೀನಾಗಿ ನಾ ಚಿಗುರೊಡೆಯುವಾಗ ನಿಂತು ಸಾಗು ದೊರೆ…
0 ಪ್ರತಿಕ್ರಿಯೆಗಳು