ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೇವನೂರಿ'ಗೆ ಈಗ ಅದೆಷ್ಟು ಭಕ್ತರು ಮಹಾದೇವಾ!

ದಿಲಾವರ್ ರಾಮದುರ್ಗ
ಈ ನಾಡಿನ ಸಾಕ್ಷಿಪ್ರಜ್ಞೆ, ಲೇಖಕ, ಹೋರಾಟಗಾರ ಭಾನುವಾರ ಗಾಂಧಿ ಭವನದ ಅಂಗಳದ ತುಂಬ ಓಡಾಡಿಕೊಂಡಿದ್ದರು. ಗಾಂಧಿಯಷ್ಟೇ ಸರಳ ಉಡುಗೆಯಲ್ಲಿ ಸೀದಾ ಸಾದಾ ಕಾಣುತ್ತಿದ್ದರು. ಸಮಾನತೆಯ ಕನಸು ಕಾಣುತ್ತ ಎನ್ನುವ ಸಂವಾದ ಕಾರ್ಯಕ್ರಮವದು. ಹಾಗೇ ಅವರ ಪುಸ್ತಕ ಬಿಡುಗಡೆ ಸಮಾರಂಭ. ಅಚ್ಚುಕಟ್ಟಾದ ಭಾವಪೂರ್ಣ ಕಾರ್ಯಕ್ರಮ.
* * *
ಹತ್ತಿಪ್ಪತ್ತು ವರ್ಷಗಳ ಹಿಂದೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆವ ಕೆಲ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ನಾನವರನ್ನು ದೂರದಿಂದಲೇ… ಕುತೂಹಲದಿಂದ ನೋಡುತ್ತಿದ್ದೆ. ಈಗಲೂ ನನ್ನೊಳಗೆ ಅದೇ ಕುತೂಹಲವಿದೆ. ಆಗವರು ಕಾಮತ್ ಹೊಟೆಲ್ ಕಟ್ಟೆಗೋ, ಕಾರಂತ ಕ್ಯಾಂಟಿನ್ ಕಟ್ಟೆಯ ಬಳಿಯೋ ಬಾಯಲ್ಲಿ ಬೀಡಿ ಸಿಕ್ಕಿಸಿಕೊಂಡು ಯಾರಾದರೂ ಗುರ್ತಿಸಿಯಾರು ಎಂದು ಭಯಪಡುತ್ತಿದ್ದವರು. ಗುರುತಿಸಿದವರನ್ನು ಕಂಡರೆ ಮುಜುಗರದಿಂದ ತುಟಿಯರಳಿಸುತ್ತಿದ್ದವರು.
* * *
ನಿನ್ನೆ ಭಾನುವಾರ ನಗುತ್ತಲೇ ಇದ್ದರು. ಬಾಯಲ್ಲಿ ಬೀಡಿಗಿಂತ ಸಿಗರೇಟೇ ಕಾಣಿಸುತ್ತಿತ್ತು. ವೇದಿಕೆಯ ಮೇಲೆ ತುಂಬ ಖುಷಿಯಲ್ಲಿದ್ದರು. ಅವರ ಅಭಿಮಾನಿಗಳು ಬಹುಸಂಖ್ಯೆಯಲ್ಲಿ ಸೇರಿದ್ದರು. ಹಲವರು ಭಕ್ತಿಪರವಶರಾಗಿದ್ದರು.
* * *
ನಾನು ಬೀದಿಗಳಲ್ಲಿ ಒಡಲಾಳದಿಂದ ಚಿಮ್ಮುತ್ತಿದ್ದ ನೋವಿನ ದನಿಗಳ ಆ ಹೋರಾಟದ ಹಾಡುಗಳ ಫೋರ್ಸ್ ಅನ್ನು ಗಾಂಧಿಯಂಗಳದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ. ಕೆಲ ಹಾಡುಗಳು ನೆನಪಾಗಿ ಮೈಕೂದಲು ನಿಮಿರತೊಡಗಿತ್ತು. ಒಳಗೆ ಸಭಾಂಗಣದಲ್ಲಿ ಕೆಲವು ಹಾಡುಗಳು ಮೈಕುಗಳ ಮೂಲಕ ಮುದ ನೀಡಲೆತ್ನಿಸುತ್ತಿದ್ದವು.
* * *
ಹೊರಗೆ, ಮಧ್ಯಾನ್ಹದ ಗೋಷ್ಠಿಗೆ ಸಜ್ಜಾಗಲು ಮೀನು-ಬಾಡು ತಿನ್ನುವ ನಮ್ಮಂಥ ಹಸಿದೊಡಲುಗಳು ಬಿಸಿಬೇಳೆಬಾತ್, ಮೊಸರನ್ನ, ಮೈಸೂರು ಪಾಕ ಮತ್ತೆ ಊಟದ ನಂತರ ತಿನ್ನುವ ಬಾಳೆಹಣ್ಣು ಸವಿದವು.   ಅವರ ‘ಎದೆಗೆ ಬಿದ್ದ ಅಕ್ಷರ’ ಗಳನ್ನು ಓದುಗರು ಮುಗಿಬಿದ್ದು ಆಯ್ದುಕೊಳ್ಳುತ್ತಿದ್ದರು. ಪ್ರಕಾಶಕರ ಮುಖದಲ್ಲಿ ಗೆಲುವಿನ ನಗೆನವಿಲು ಕುಣಿದಾಡುತ್ತಲೇ ಇತ್ತು.
* * *
ಸಂಜೆ ಸಮಾರೋಪದಲ್ಲಿ ಅವಧೂತನಂತೆ, ಅಲ್ಲಮನಂತೆ ಅವರು ಕಾಣಿಸಿಕೊಂಡರು. ಕೆಲವರು ಪ್ರಶ್ನೆ ಕೇಳಿ ಖುಷಿಪಟ್ಟರು. ಕೊಂಡ ಪುಸ್ತಕದ ಮೇಲೆ ಹಸ್ತಾಕ್ಷರ ಪಡೆದು ಸಂಭ್ರಮಿಸಿದರು. ಸಭಾಂಗಣದ ಕೆಳಗೆ, ಹೊರಗೆ ಮತ್ತೆ ಅಭಿಮಾನಿಗಳು ಸುತ್ತುವರೆದರು. ಹಲವರು ಫೋಟೊ ಕ್ಲಿಕ್ಕಿಸಿಕೊಂಡರು.

‍ಲೇಖಕರು avadhi-sandhyarani

5 February, 2013

4 Comments

  1. bhavya l halli

    super i miss that program

  2. Nag

    avaru devanuru alla DEVARU

  3. u s mahesh

    Nag ravare devanuru avarige heege hele avamana maduthideera,daivikarana sariye ? manavatheya prathika mahadeva allave.

  4. GURURAJ KATHRIGUPPE

    Personolities like Devanur,Ananthamurthy,keep our society Alive.I really feel proud for living along with such great people,they always think of humanity,equality,and selfrespect of humanbeing.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading