ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಸರಾದಲ್ಲಿ ಕವಿತೆಯೊಡನೆ ಶಿವಾನಂದ ತಗಡೂರು…

ದಸರಾ ಕವಿಗೋಷ್ಟಿ (ಪ್ರಚುರ ಕವಿ ಗೋಷ್ಟಿ)ಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಲೇಖಕ ಶಿವಾನಂದ ತಗಡೂರು ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಮೈಸೂರು ಅಂದ ತಕ್ಷಣವೇ ನೆನಪಾಗುವುದು ದಿಬ್ಬಣ, ದಸರಾ ಮಹೋತ್ಸವ, ಚಾಮುಂಡಿ ಬೆಟ್ಟ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸಿದ‌ ಮಹಾರಾಜರು. ತಂತ್ರಜ್ಞಾನ ದಿಂದ ಹಿಡಿದು ಜಗತ್ತಿನ ಉದ್ದಗಲಕ್ಕೂ ಮೈಸೂರಿನ ತನ್ನ ಕಂಪನ್ನು‌ ಪಸರಿಸಿದೆ.

ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದವರೇ ಈ ನೆಲದಲ್ಲಿ ಇದ್ದವರು. ದಸರೆಯ ಸಂದರ್ಭದಲ್ಲಿ ಕವಿಗಳನ್ನು‌ ಸೇರಿಸಿರುವುದು ವಿಶೇಷ. ಎಲ್ಲರನ್ನೂ ವೇದಿಕೆಗೆ ತರುವ ಸಮಗ್ರ ಯೋಚನೆಯಿಂದ ಕವಿಗೋಷ್ಟಿಯನ್ನು ರೂಪಿಸಲಾಗಿದೆ.

ಕವಿತೆ ಹುಟ್ಟುವುದೇ ವಿಭಿನ್ನ. ಯಾರನ್ನು ಹೇಳಿಕೇಳಿ ಹುಟ್ಟಲ್ಲ. ಅನುಭವದ ಸಾರದಿಂದ ಹುಟ್ಟಲಿದೆ. ಅನುಭವಗಳ ಧಾರೆಗೆ ಪದ ಪುಂಜಗಳ ಮೆರಗು ನೀಡಿ ಸೃಷ್ಟಿಯಾಗುವುದಾಗಿದೆ.

ಮನದೊಳಗಿನ ಭಾವನೆಗಳಿಗೆ ರೂಪ ಕೊಡುವುದು ಬಹಳ ಮುಖ್ಯ. ಭಾಷೆಯ ಮೇಲೆ ಯಾರಿಗೆ ಹಿಡಿತ ಇರುತ್ತೊ ಅವರಿಗೆ ಮಾತ್ರ ಕವಿತೆಗಳನ್ನು ಬರೆಯಲು ಸಾಧ್ಯ.

ಮನಸ್ಸಿನ ಬೇಗುದಿಗಳನ್ನು ಕೆರಳಿಸುವ ಸಾಲುಗಳಿದ್ದರೆ ಅದು‌ ಕವಿತೆ. ಇತಿಹಾಸದ ಕಾಲಘಟ್ಟದಲ್ಲಿ ಹೋಗಿ ವಿಶ್ಲೇಷಣೆ ಮಾಡುವುದೇ ಕವಿತೆ. ನೋವಿನ ಅಭಿವ್ಯಕ್ತದಲ್ಲಿ ಮೂಡಿಬರುವ ಸಾಲುಗಳು ಕವಿತೆಗಳಾಗಬಹುದು.

ಹೆಚ್.ಎಸ್.ವೆಂಕಟೇಶ್ ಮೂರ್ತಿಯವರು ಸಾವಿನ ಹಾಸಿಗೆಯ ಮೇಲಿದ್ದರು ಅವರೇ ಬರೆದಿದ್ದ ಹಾಡುಗಳನ್ನು ಹಾಡಿಸಿದ್ದರು…

ಕವಿಗಳ ಬರವಣಿಗೆಯಲ್ಲಿ ಹಮ್ಮು ಗಿಮ್ಮು ಇರಲ್ಲ. ಎಲ್ಲಾ ಲೋಕಕ್ಕೂ ಕವಿ ಸಂಚರಿಸುತ್ತಾನೆ. ಈ ನಿಟ್ಟಿನಲ್ಲಿ ತುಂಬಾ ಜನ ಕವಿಗಳು ತಮ್ಮ ಕವನಗಳನ್ನು ಪ್ರಸ್ತುತ ಪರಿಸಲು ಬಂದಿದ್ದೀರಿ..
ಎಲ್ಲರ ಹೃದಯಗಳಲ್ಲಿ ಕವಿತೆಗಳು ಇರುತ್ತವೆ. ಆದರೆ, ಅದಕ್ಕೆ ಸ್ವರೂಪ ಕೊಡುವುದು ಮುಖ್ಯ. ಬಳಿಕ ತಾವೇ ರಚಿಸಿದ ‘ನೆತ್ತರು‌’ ಶೀರ್ಷಿಕೆಯ ಕವನವನ್ನು ವಾಚಿಸಿದರು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 43 ಮಂದಿ ಕವಿಗಳು ತಮ್ಮ ಕವನಗಳನ್ನು ವಾಚಿಸಿದರು…

ಕವಯತ್ರಿ ಡಾ.ಸುಕನ್ಯ ಮಾರುತಿ ಅಧ್ಯಕ್ಷತೆ ವಹಿಸಿದ್ದರು..

ಲೇಖಕ ರಾಜೇಂದ್ರ ಪ್ರಸಾದ್, ದಸರಾ ಕವಿಗೋಷ್ಟಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಡಾ.ಮಹೇಶ್ ದಳಪತಿ, ಮರಿದೇವಯ್ಯ, ಉಪಸಮಿತಿ ಉಪ ವಿಶೇಷಾಧಿಕಾರಿ ಸೋಮಶೇಖರ್, ಕಾರ್ಯದರ್ಶಿಗಳಾದ ಚೇತನ್ ಬಾಬು, ರಾಘವೇಂದ್ರ ಮತ್ತಿತರರಿದ್ದರು..

‍ಲೇಖಕರು Admin

24 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading