ಕಥಾ ಸಂಕಲನದ ಹಸ್ತಪ್ರತಿಗೆ ನೀಡಲಾಗುವ ಪ್ರತಿಷ್ಠಿತ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರ ದಯಾನಂದ ಕವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಸುಧೇಂದ್ರ ತಿಳಿಸಿದ್ದಾರೆ .
‘ಪ್ರಜಾವಾಣಿ’ಯಲ್ಲಿ ಉಪಸಂಪಾದಕರಾಗಿರುವ ದಯಾನಂದ ಅವರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು. ಬೆಂಗಳೂರು ವಿಶ್ವವಿದ್ಯಾಲದಲ್ಲಿ ಸ್ನಾತಕೋತ್ತರ ಪದವಿ ಪಡೆದ ದಯಾನಂದ್ ಸಮಯ ಚಾನಲ್ ನ ಬಾತ್ಮೀದಾರರಾಗಿದ್ದವರು. ಈಗಾಗಲೇ
ಇವರ ಕಥೆಗಳು ಅನೇಕ ಗೌರವಕ್ಕೆ ಪಾತ್ರವಾಗಿದೆ.
ಇವರ ‘ಗ್ರಾಂಟ್’ ಕಥೆ ಇತ್ತೀಚಿಗೆ ತಾನೇ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ರಾಜ್ಯ ಕಥಾ ಪ್ರಶಸ್ತಿಗೆ ಪಾತ್ರವಾಗಿತ್ತು.
ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ಸಾಹಿತಿ ನಾ. ಡಿಸೋಜ ಅವರು ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ೮೦ ಹಸ್ತಪ್ರತಿಗಳು, ಅಂದರೆ ಸುಮಾರು ೬೪೦ ಕತೆಗಳು, ಪ್ರವೇಶ ಕೋರಿ ಬಂದಿದ್ದವು.
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಫೆಬ್ರವರಿ ೧೨ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.





ಅಭಿನಂನೆಗಳು