ನಾ ಸೋಮೇಶ್ವರ

ಓರ್ವ ಅಧ್ಯಾಪಕಿ. ಶಾಲಾಮಕ್ಕಳು ಬರೆದ ಪ್ರಬಂಧವನ್ನು ತಿದ್ದುತ್ತಿದ್ದರು. ವಿಷಯ “ನೀವೇನಾಗಬಯಸುತ್ತೀರಿ’ ಎಂದಾಗಿತ್ತು. ಒಬ್ಬ ಹುಡುಗ “ನಾನು ಟೆಲಿವಿಷನ್ ಸೆಟ್ ಆಗಬಯಸುತ್ತೇನೆ” ಎಂದು ತನ್ನ ಪ್ರಬಂಧಕ್ಕೆ ಶೀರ್ಷಿಕೆಯನ್ನು ಕೊಟ್ಟಿದ್ದನು. ಅಧ್ಯಾಪಕಿಗೆ ತುಂಬ ಕುತೋಹಲವಾಯಿತು. ಕೂಡಲೇ ಆ ಪ್ರಬಂಧವನ್ನು ಓದಲಾರಂಭಿಸಿದಳು.
“ಓ ದೇವರೆ!ಇಂದು ರಾತ್ರಿ ನನ್ನನ್ನು ಓರ್ವ ಟೆಲಿವಿಷನ್ ಸೆಟ್ ಆಗಿ ಪರಿವರ್ತಿಸು. ನಾನು ಟೆಲಿವಿಶನ್ ಸೆಟ್ ಆಗಲು ತುಂಬಾ ಇಷ್ಟಪಡುತ್ತೇನೆ. ನಮ್ಮ ಮನೆಯ ನಡುಮನೆಯಲ್ಲಿ ಎಲ್ಲಿ ಟಿ.ವಿ ಇರುವುದೋ ಆ ಸ್ಥಳವನ್ನು ನಾನು ಆಕ್ರಮಿಸಬೇಕು. ಆಗ ನಮ್ಮ ಮನೆಯಲ್ಲಿರುವ ಎಲ್ಲರೂ ನನ್ನ ಸುತ್ತಲೂ ಕುಳಿತುಕೊಳ್ಳುತ್ತಾರೆ ಹಾಗೂ ನನ್ನನ್ನೇ ನೋಡುತ್ತಾರೆ. ನಾನು ಮಾತನಾಡುವಾಗ ಎಲ್ಲರೂ ಗಮನವಿಟ್ಟು ಕೇಳುತ್ತಾರೆ. ಯಾರೂ ನಡು ನಡುವೆ ಮಾತನಾಡವುದಿಲ್ಲ. ಪ್ರಶ್ನೆಯನ್ನು ಕೇಳುವುದಿಲ್ಲ. ಮಾತನಾಡದಂತೆ ನನ್ನ ಕಿವಿಯನ್ನು ಹಿಂಡುವುದಿಲ್ಲ. ಟಿ.ವಿ ಆಫ್ ಇರುವಾಗ ಅದರ ಕಾಳಜಿಯನ್ನು ಹೇಗೆ ತೆಗೆದುಕೊಳ್ಳುವರೋ, ಹಾಗೆಯೇ ಮನೆಮಂದಿಯೋ ಸಹಾ ನನ್ನ ಯೋಗಕ್ಷೇಮವದ ಬಗ್ಗೆ ಕಾಳಜಿಯನ್ನು ವಹಿಸುವರು. ಹಾಗಾಗಿ ಈ ರಾತ್ರಿ ನನ್ನನ್ನು ಟೆಲಿವಿಷನ್ ಸೆಟ್ ಆಗಿ ಪರಿವರ್ತಿಸು. ಅಪ್ಪ ಕಚೇರಿಯಿಂದ ಸುಸ್ತಾಗಿ ಬಂದ ಕೂಡಲೇ ಟೆಲ್ಲಿವಿಷನ್ ಸೆಟ್ ಮುಂದೆ ಕೂರುತ್ತಾರೆ. ಅಮ್ಮ ಅಡುಗೆ ಮಾಡೋದನ್ನ ಮರೆತು ಟೆಲಿವಿಷನ್ ಸೆಟ್ ಮುಂದೆ ಕೂರುತಾರೆ. ಅಕ್ಕನಂತೂ ಟಿವಿಯನ್ನು ನೋಡಲು ಅಮ್ಮನ ಜೊತೆಯಲ್ಲಿ ಜಗಳವಾಡುತ್ತಾಳೆ. ಭಾನುವಾರ ಬಂದಿತೆಂದರೆ ಯಾರೂ ಮನೆಯಲ್ಲಿ ಕೆಲಸ ಮಾಡುವುದಿಲ್ಲ. ಎಲ್ಲರೂ ಟಿವಿ ಮುಂದೆ ಕೂರುವರೆ! ಹಾಗಾಗಿ ನಾನು ಟೆಲಿವಿಶನ್ ಸೆಟ್ ಆದರೆ ಎಷ್ಟು ಚೆನ್ನಾಗಿ ಇರುತ್ತದೆ. ನಾನು ಟೆಲಿವಿಷನ್ ಸೆಟ್ ಆದರೆ ಎಲ್ಲರನ್ನೂ ಖ್ಹುಷಿಯಾಗಿಡಬಹುದು. ಎಲ್ಲರೂ ನನ್ನನ್ನು ನೋಡಿ ಸಂತೋಷಪಡುತ್ತಾರೆ. ದೇವರೆ! ನಾನು ನಿನ್ನನ್ನು ಮತ್ತೇನು ಕೇಳುವುದಿಲ್ಲ. ದಯವಿಟ್ಟು ಈ ರಾತ್ರಿ ನನ್ನನ್ನು ಟೆಲಿವಿಷನ್ ಸೆತ ಆಗಿ ಪರಿವರ್ತಿಸುವು” ಎಂದು ಪ್ರಬಂಧವನ್ನು ಮುಗಿಸಿದ್ದನು..
ಅಧ್ಯಾಪಕಿಯ ಪತಿದೇವರು ಆಗ ಬಂದರು. ಅಧ್ಯಾಪಕಿ ಹುಡುಗ ಬರೆದ ಪ್ರಬಂಧವನ್ನು ಓದಲು ನೇಡಿದರು. ಅದನ್ನು ಓದಿದ ಅಧ್ಯಾಪಕಿಯ ಗಂಡ “ಎಷ್ಟು ಕೆಟ್ಟವರಿರಬೇಕಲ್ಲವೆ ಆ ಹುಡುಗನ ಅಪ್ಪ ಅಮ್ಮಂದಿರು” ಎಂದನು.
ಗಂಡನ ಮಾತಿಗೆ ಆ ಅಧ್ಯಾಪಕಿ ಏನು ಉತ್ತರವನ್ನು ಹೇಳಿರಬಹುದು? ದಯವಿಟ್ಟು ಬರೆದು ತಿಳಿಸಿ.







ಯಾಹ್ ಅಲ್ಲಾ…ಗೊತ್ತುಗೆ ಆಗಿಲ್ಲಾ? ನಿಮ್ದುಗೆ ಬೇಟಾಗೆ ಬರ್ದಿರೋದು ಇದು.
Great anti-climax, Hari!!
ಒಮ್ಮತ … ಹ ಹ ಹ ಹ ಹ ಹ 🙂
sir, idu swalpa old story, idu avara magane bareda prabhanda!!!
idu sadyada paristhitiya viparyasa 🙁
bahala hindene kelida kathe!