ವಿಜಯಭಾಸ್ಕರ. ಸೇಡಂ
ನನ್ನ ಓರಗೆಯ ಎಲ್ಲರಂತೆ ಇದ್ದ ನಾನಕ್ ದಿಢೀರನೆ ಬದಲಾಗಿದ್ದು ತೇಜಸ್ವಿಯಿಂದ. ಸುಮ್ಮನೆ ಇದ್ದ ನನ್ನನ್ನು ಅನೇಕಾನೇಕ ಸಂಗತಿಗಳನ್ನು ಹುಡುಕಲು ಪ್ರಚೋದಿಸಿದ ಹಾಗೂ ಸಾಮಾನ್ಯರ ಅಸಾಮಾನ್ಯ ಕಥೆಗಳನ್ನು ಹೆಕ್ಕಲು ತಿಳಿಸಿಕೊಟ್ಟದ್ದು ಇದೇ ತೇಜಸ್ವಿ.
ತೇಜಸ್ವಿ ಲೋಕಕ್ಕೆ ನಾನು ಎಂಟ್ರಿ ಕೊಟ್ಟದ್ದು ‘ಯು ಟ್ಯೂಬ್’ ಮುಖಾಂರ, ನಾನು ಪಿಯುಸಿಯಲ್ಲಿಯೇ ರಂಪಾಟ ಆರಂಭಿಸಿಬಿಟ್ಟಿದ್ದೆ. ಇದಕ್ಕೆ ಅನುಗುಣವಾಗಿ ನನ್ನ ಕಾಲೇಜಿನ ಪ್ರಾಂಶುಪಾಲರಿಗೂ ಧಮ್ಕಿ ಹಾಕಲು ಹೋಗಿದ್ದೆ. ಆ ವೇಳೆಗೆ ತೇಜಸ್ವಿ ಅವರ ಗದ್ಯ ಪಾಠ ನಮ್ಮನ್ನು ಆವರಿಸಿ ಅಮಲಾಗಿ ಪರಿವರ್ತನೆಯಾಯಿತು. ದ್ವಿತೀಯ ಪಿಯುಸಿನಲ್ಲಿ ‘ಕೃಷ್ಣೇಗೌಡರ ಆನೆ’ ಎನ್ನುವ ಗದ್ಯ ಆಗಲೇ ನಮ್ಮ ರಂಪಾಟಕ್ಕೆ ಅಣಿಯಾಗಿ ಓದಿಸಲು ತೊಡಗಿಸಿತು.
ಯಾರಿವರು ತೇಜಸ್ವಿ ಎಂದು ಹುಟ್ಟಿದ ಯಕ್ಷ ಪ್ರಶ್ನೆಗೆ ಉತ್ತರ ಹುಡುಕಲು ಶುರು ಮಾಡಿದೆ. ಲೇಖಕರ ಪರಿಚಯದಲ್ಲಿ ಸಿಕ್ಕ ಮಾಹಿತಿ ನನ್ನ ಹಪಾಹಪಿತನವನ್ನ ನೀಗಿಸಲಿಲ್ಲ. ಗೂಗಲ್ ನಲ್ಲಿ, ವಿಕಿಪೀಡಿಯಾದಲ್ಲಿ ಸಿಕ್ಕ ಸಾಲುಗಳು ತೃಪ್ತಿ ನೀಡಲಿಲ್ಲ. ಆಗ ಮೊರೆಹೊಕ್ಕಿದ್ದು ಯುಟ್ಯೂಬ್ ಗೆ. ಪೂರ್ಣಚಂದ್ರ ತೇಜಸ್ವಿ ಎಂದು ಒತ್ತಿದ ತಕ್ಷಣ ಕಣ್ಣೆದುರು ಬಂದ ಸಾಲು ಸಾಲು ಸಾಕ್ಷ್ಯಚಿತ್ರಗಳ ಮೇಲೆ ಒತ್ತಿದೆ. ಕೊಳಲಿನ ದನಿಯೊಂದಿಗೆ ಶುರುವಾಗಿದ್ದ ಸಾಕ್ಷ್ಯಚಿತ್ರವೊಂದು ಕಣ್ಣಾಲಿಯ ನಡುವೆ ತೇಜಸ್ವಿಯನ್ನು ಗಟ್ಟಿಯಾಗಿ ಕೂರಿಸಿತು. ಅಲ್ಲಿ ಬರುವ ಹಿನ್ನೆಲೆ ಧ್ವನಿ ತೇಜಸ್ವಿ ಅವರನ್ನು ನಮ್ಮೊಳಗೆ ಕಟ್ಟಿಕೊಳ್ಳಲು ಸಹಾಯ ಮಾಡಿತು.
ಸಾಕ್ಷ್ಯಚಿತ್ರದಲ್ಲಿ ಬರುವ ಎಲ್ಲಾ ಮಹನೀಯರು ತೇಜಸ್ವಿ ಅವರಿದ್ದ ಜೀವನಶೈಲಿ, ಓಡಾಡಿದ ಜಾಗ, ನಗಿಸಿದ ಕ್ಷಣ, ಆಡಿದ ಮಾತು ಎಲ್ಲವೂ ಹೇಳುವ ವ್ಯಾಖ್ಯಾನಗಳನ್ನು ನೋಡುತ್ತಾ ಹೋದಂತೆ ಛೇ! ತೇಜಸ್ವಿ ಇಲ್ಲವಲ್ಲ ಅವರಿದ್ದರೆ ನಾವು ಅವರನ್ನು ದೂರದಿಂದಾದರು ನೋಡುತ್ತಿದ್ದೇವು ಎಂದು ಅನಿಸಿ, ಹೊಕ್ಕಿರುವ ತೇಜಸ್ವಿ ಲೋಕದಿಂದ ಸ್ವಲ್ಪ ಹೊರ ಬಂದು ಅವರು ಬರೆದಿರವ ಪುಸ್ತಕಗಳ ಹುಡುಕಾಟದಲ್ಲಿ ತೊಡಗಿದೆ.
ನನಗೆ ಸಿಕ್ಕ ಅವರ ಕಾದಂಬರಿಗಳಲ್ಲಿ ‘ಕರ್ವಾಲೋ’ ಓದಿದೆ. ಓದಿದೆ, ಓದಿದೆ ಎಷ್ಟ್ರರ ಮಟ್ಟಿಗೆ ಓದಿದೆನೆಂದರೆ ನನ್ನ ಪದವಿ ಪರೀಕ್ಷೆ ನಾಳೆ ಇದೆ ಎಂದರೆ ರಾತ್ರಿ ಕರ್ವಾಲೋದ ಮಂದಣ್ಣ, ಕಿವಿ, ಕರ್ವಾಲೋ ಇವರೆಲ್ಲಾ ಆವರಿಸಿಕೊಂಡು ಪರೀಕ್ಷೆಯ ಭಯವೇ ಇಲ್ಲದಂತೆ ಮಾಡಿಬಿಟ್ಟರು.
ಒಂದು ದಿನ ಹೀಗಾಯಿತು ನಾನು ಓದುತ್ತಿದ್ದ ಕಾಲೇಜಿನಲ್ಲಿ ಸಣ್ಣ ಗಲಾಟೆ, ಆ ಗಲಾಟೆಯಲ್ಲಿ ನನ್ನದು ಚಿಕ್ಕ ಪಾತ್ರವಿತ್ತು. ಅದಕ್ಕೆ ಕ್ಲಾಸ್ ರೂಮಿನಲ್ಲೆ ನನಗೆ ಮೇಷ್ಟ್ರು ಸರಿಯಾಗಿ ದಬಾಯಿಸಿದರು. ಒಬ್ಬ ಸಾಹಿತಿಯ ಮಗನಾಗಿ ಗಲಾಟೆ ಮಾಡುತ್ತಿಯಾ. ನೀನಾಡುವ ಭಾಷೆ ನೋಡು, ನಿಮ್ಮ ತಂದೆಯ ಭಾಷಣ ಒಂದು ಬಾರಿ ಕೇಳು ಅವಿವೇಕಿ ಎಂದು ಗುರುಗಳು ಬೈದ್ರು. ನನಗೆ ಮೇಷ್ಟ್ರು ಬೈದ್ರಲ್ಲ ಎಂದು ಕೋಪವಿಲ್ಲ. ನಮ್ಮ ತಂದೆಯ ಹೆಸರು ತೆಗೆದುಕೊಂಡು ಬೈದ್ರಲ್ಲಾ ಎನ್ನುವುದೆ ರೇಗಿಹೊಯಿತು. ತಂದೆಯ ಹೆಸರನ್ನು ಉಳಿಸಿಕೊಂಡು ಅವರಿಗಿಂತ ತಕ್ಕ ಮಟ್ಟಿಗೆ ಬೆಳೆದು ತೋರಿಸಬೇಕು ಎಂದು ಹಠ ಹಿಡಿದೆ. ಆಗ ನನಗೆ ಸಿಕ್ಕವರೆ ಪೂರ್ಣಚಂದ್ರ ತೇಜಸ್ವಿ ಅವರು.
ಸಾಹಿತ್ಯ ಪರಿಷತ್ತಿನ ಮಕ್ಕಳ ಕವಿಗೋಷ್ಠಿಯಲ್ಲಿ ನನಗೆ ಬಹುಮಾನವಾಗಿ ತೇಜಸ್ವಿ ಅವರ ಭಾವಚಿತ್ರ ನೀಡಿದ್ದರು. ಆ ಭಾವಚಿತ್ರದ ಹಿಂದೆ ತೇಜಸ್ವಿ ಅವರ ಪರಿಚಯವಿತ್ತು. ಭಾವಚಿತ್ರದ ಪುಟ್ಟ ಪರಿಚಯದಿಂದ ಆಗ ಪರಿಚಯವಾದ ತೇಜಸ್ವಿ ಅವರು ಇಂದಿಗೂ ನನ್ನಲ್ಲಿ ಜೀವಂತವಾಗಿದ್ದಾರೆ.
…. super anna ji
ಒಬ್ಬರನ್ನು ಮಾರ್ಗದರ್ಶಿ ಎಂದು ನಾವು ಭಾವಿಸಿದಾಗ ನಾವು ಕೂಡಾ ಅವರ ದಾರಿಯನೆ ಆಯ್ಕೆ ಮಾಡಿಕೊಂಡು ಅವರಂತೆಯೇ ನಡೆದುಕೊಳ್ಳಲು ಆದಷ್ಟೂ ಪ್ರಯತ್ನ ಪಡಬೇಕು.
ಆ ಪ್ರಯತ್ನದಲ್ಲಿ ಫಲ ಇದ್ದೆಇರುತೆ.
ವಿಜಯ ನಿನ್ನದಾಗಲಿ ಭಾಸ್ಕರ.
ಇಂತಿ ನಿನ್ನ ಗೆಳೆಯ
ವಿಷ್ಣು ವಿನೋದ ಜಯ ಸಿಂಹ
ಲೇಖನ ಇನ್ನೂ ಸ್ವಲ್ಪ ವಿಸ್ತಾರವಾಗಿರಬೇಕಿತ್ತು.