ತೇಜಸ್ವಿ ಜೀಪಿನಲ್ಲಿ ಸವಾರಿ
ಚಿನ್ನಸ್ವಾಮಿ ವಡ್ಡಗೆರೆ
ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು.
ಈಗ ಆ ಜೀಪು ತೇಜಸ್ವಿ ಅವರ ಸಂಬಂಧಿ ಕೃಷಿಋಷಿ ಡಾ। ದೇವಂಗಿ ಪ್ರಪುಲ್ಲ ಚಂದ್ರ ಅವರ ಮಗ ಸವ್ಯಸಾಚಿ ಅವರ ಬಳಿ ಇದೆ.
ಶಿವಮೊಗ್ಗಕ್ಕೆ ಹೋಗಿದ್ದಾಗ ಹೊಸಹಳ್ಳಿಯ “ಕೃಷಿಸಂಪದ” ಕ್ಕೂ ಭೇಟಿ ನೀಡಿ ಮೂರುಗಂಟೆಗಳಿಗೂ ಹೆಚ್ಚು ಕಾಲ ಸವ್ಯಸಾಚಿ ಅವರ ಕೃಷಿ ಅನುಭವಗಳನ್ನು ಕೇಳಿದೆವು.
ತೇಜಸ್ವಿ ಜೀಪಿನಲ್ಲಿ ಕುಳಿತು ರೋಮಾಂಚನವಾಯಿತು. ನನ್ನ ಇಷ್ಟದ ಲೇಖಕ ಬಳಸುತ್ತಿದ್ದ ಜೀಪು ನೋಡಿಯೆ ಹಲವಾರು ನೆನಪುಗಳು ಕಣ್ಣ ಮುಂದೆ ಬಂದವು .
ಮೂಡಿಗೆರೆಯಲ್ಲಿ ಅವರನ್ನು ಭೇಟಿಯಾಗಿದ್ದು, ಮೈಸೂರಿನಲ್ಲಿ ಕಂಡದ್ದು, ಅವರ ಸಾಹಿತ್ಯದಿಂದ ಪ್ರಭಾವಿತನಾಗಿ ಕೃಷಿ ಪ್ರೀತಿ ಬೆಳೆಸಿಕೊಂಡಿದ್ದು ಹೀಗೇ..
ಕೊನೆಗೆ ನಮ್ಮ ಕೃಷಿ ಕುತೂಹಲ ತೇಜಸ್ವಿ ಅವರ ಜೀಪಿನಲ್ಲಿ ಸವಾರಿ ಮಾಡುವತನಕ ಬಂತು. ಶಿಕಾರಿ, ಬೇಟೆ, ಕೃಪಾಕರ ಸೇನಾನಿ ಎಲ್ಲರೂ ಮಾತಿನ ನಡುವೆ ಬಂದುಹೋದರು. ನೂರಾರು ಸಾಧಕರ ಭೇಟಿಯಲ್ಲಿ ಸತ್ಯದ ದರ್ಶನವಾಗಿದೆ. ಒಂದೇ ಜೀವನ ಸಾಲದು ..
0 ಪ್ರತಿಕ್ರಿಯೆಗಳು