ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮ್ಮಣ್ಣ ಬೀಗಾರ ಅವರ ʼಪುಟ್ಟಿಯೂ ಹಾರುತ್ತಿದ್ದಳು…ʼ

ತಮ್ಮಣ್ಣ ಬೀಗಾರ

ಬಾಲ್ಯವನ್ನು ಸಂಭ್ರಮಿಸಲು ತೊಡಗಿಸುವ ಸಂಗತಿಗಳನ್ನು ಕತೆಯಾಗಿಸಿರುವ ತಮ್ಮಣ್ಣ ಬೀಗಾರ, ಫೇಸ್‌ಬುಕ್‌ ನಲ್ಲಿ ʻಪುಟ್ಟಿಯೂ ಹಾರುತ್ತಿದ್ದಳು..ʼ ಕೃತಿ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ.

‘ಪುಟ್ಟಿಯೂ ಹಾರುತ್ತಿದ್ದಳು…’ ಮಕ್ಕಳಿಗಾಗಿ ಕಥೆಗಳು.. ಬಾಲ್ಯದೊಂದಿಗೆ ಅನುಸಂಧಾನಕ್ಕೆ ತೊಡಗಿದರೆ… ಅದು ಮತ್ತೆ ಮತ್ತೆ ಅನುಸಂಧಾನಕ್ಕೆ ಕರೆಯುತ್ತಲೇ ಇರುತ್ತದೆ. ಬಾಲ್ಯದ ನೆನಪಿನೊಂದಿಗೆ ಸಂಭ್ರಮಿಸಲು ಹಚ್ಚುವ ಈ ಅನುಸಂಧಾನ ನನ್ನಂಥವರಿಗೆ ಒಂದು ಪ್ರೀತಿಯ ಕೊಡುಗೆಯಾಗಿ ಖುಷಿ ನೀಡುತ್ತದೆ. ಶಾಲೆಗೆ ಹೋಗುವ ಯಾವುದೋ ಸಂದರ್ಭದಲ್ಲಿ ದಾರಿಯಲ್ಲಿ ಕಾಣುವ ಕಾಡು, ಜುಳು ಜುಳು ಹರಿಯುವ ನೀರು, ಬಸ್ ಎಂದು ಹಾರಿಹೋಗುವ ಮಂಗಟ್ಟೆ ನವಿಲಿನಂತಹ ದೊಡ್ಡ ಪಕ್ಷಿಗಳು, ದಿನವೂ ಪಾಠ ಹೇಳುತ್ತ ಗೆಳೆಯರಾಗಿ ಬಿಡುತ್ತಿದ್ದ ಶಿಕ್ಷಕರು, ಏನೇನೋ ಕಥೆ ಹೇಳುತ್ತ ಬೇರೆ ಊರಿಗೋ ಕಾಡಿಗೋ ಮುಂತಾಗಿ ನಾವಿನ್ನೂ ಕಾಣದ ಲೋಕಕ್ಕೆ ಕೊಂಡೊಯ್ಯುತ್ತಿದ್ದ ಅಜ್ಜ ಅಜ್ಜಿಯರು, ಕೊಟ್ಟಿಗೆ ತುಂಬಾ ದನ, ಮನೆ ಮುಂದಿನ ಗಿಡ ಮತ್ತು ಅದಕ್ಕೆ ಬರುವ ಚಿಟ್ಟೆ, ಹಕ್ಕಿಗಳ ಹಾರಾಟ, ಗೆಳೆಯರ ಒಡನಾಟ ಪ್ರೀತಿ, ಯಾರು ಯಾರಿಗೋ ಬರುವ ಸಂಕಟ, ಆಟ ಹೀಗೆ ಮುಗಿಯದ ಚಿತ್ರಗಳು ಕಣ್ಣಮುಂದೆ ಬರುತ್ತಲೇ ಇರುತ್ತವೆ. ಇದರಿಂದಾಗಿ ಬರೆಯುತ್ತಿದ್ದಂತೆ ಮತ್ತೆ ಮತ್ತೆ ಬರೆಯುತ್ತ ಮಕ್ಕಳೊಂದಿಗೆ ಖುಷಿಯಿಂದ ಒಂದಾಗಲು ಸಾಧ್ಯವಾಗುತ್ತದೆ.

ಮೇಲಿನ ವಸ್ತು ಉಳ್ಳ ಹದಿನೈದು ಕಥೆಗಳು ಈ ಪುಸ್ತಕದಲ್ಲಿದೆ. ಮಕ್ಕಳಿಗಾಗಿ ಬಾಲ್ಯದ ಕಣ್ಣೋಟದಿಂದ ಬರೆದುದಾದರೂ ಮಕ್ಕಳು ದೊಡ್ಡವರೆಲ್ಲರೂ ಓದಬಹುದಾಗಿದೆ. ಇದರ ಒಂದೆರಡು ಕಥೆಗಳನ್ನು ಅವಧಿ, ಸಂಗಾತಿ ಮುಂತಾದ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಬಹಳ ಓದುಗರು ಮೆಚ್ಚಿಕೊಂಡಿದ್ದಾರೆ. ಪ್ರತಿಭಾನ್ವಿತ ಕಲಾವಿಧ ಸತೀಶ ಬಾಬು ಒಳಪುಟಗಳಲ್ಲಿ ಅಂದದ ಚಿತ್ರ ಬಿಡಿಸಿದ್ದಾರೆ. ಮುಖ ಪುಟ ಪ್ರಸಿದ್ಧ ಕಲಾವಿದ ಸಂತೋಷ ಸಸಿಹಿತ್ಲು ಅವರದು.

‍ಲೇಖಕರು Admin

14 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading