ನೀ ಬಂದು ನಿಂದಿಲ್ಲಿ ದೀಪ ಹಚ್ಚಾ
ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್ ಲೈಟ್ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ’ಯ ಜೊತೆಗೂ, ಪಟಾಕಿಗೆ ಬಾಂಬ್ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು.
ಹಣತೆಗೆ ಬತ್ತಿ ಹೊಸೆಯುತ್ತಿದ್ದ ಅಜ್ಜಿ ತೀರಿಕೊಂಡಿದ್ದಾರೆ, ಅಮ್ಮನಿಗೆ ಕೊಂಚವೂ ಕುಳಿತುಕೊಳ್ಳಲಾಗುತ್ತಿಲ್ಲ, ಬತ್ತಿ ಹೊಸೆಯಲು. ಕಾರಣ: ಕಾಲುನೋವು. ದೀಪಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಾರಾ, ಒಳ್ಳೆಣ್ಣೆಯಾ- ಈಗಿನ ಸೊಸೆಯರಿಗೆ ಕನ್ಫ್ಯೂಸ್. `ವಾಟ್ಸ್ ದಿ ಆಯಿಲ್ ಯಾರ್’. ಎಣ್ಣೆ ಎರೆದು ತಲೆ ಮೀಸಲು ಮೊಮ್ಮಗ ಕುಳಿತುಕೊಳ್ಳುತ್ತಿಲ್ಲ, ಮಗನಿಗೆ ಪ್ರಾಜೆಕ್ಟ್ ಕೆಲಸ ಇನ್ನೂ ಮುಗಿದಿಲ್ಲ. ಸೊಸೆಗೆ ಇಂಪಾರ್ಟೆಂಟ್ ಮೀಟಿಂಗ್ ಇದೆ.

ಸಂಪೂರ್ಣ ಓದಿಗೆ ಭೇಟಿ ಕೊಡಿ- ಕಳ್ಳ-ಕುಳ್ಳ
+++
ಊರಿಲ್ಲದವರಾಗುತ್ತಿದ್ದೇವೆ…!
ಕತ್ತಲೆ ದೀಪದ ಕುಡಿಯನ್ನು ಕಂಡು ಹೇಳಿತಂತೆ. “ನೋಡು, ನನ್ನ ಆಕಾರದ ಎದುರು ನಿನ್ನದೇನೂ ಇಲ್ಲ. ನಾನು ಮನಸ್ಸು ಮಾಡಿದರೆ ನಿನ್ನನ್ನು ನುಂಗಿ ಬಿಡುವೆ’. ಅದಕ್ಕೆ ದೀಪ ತಾಳ್ಮೆ ಕಳೆದುಕೊಳ್ಳಲಿಲ್ಲ. “ಇರಬಹುದು. ಆದರೆ ನೀನು ನುಂಗುವವರೆಗೂ ನಾನು ಬೆಳಗುತ್ತೇನೆ, ಸಾಕಲ್ಲ’ ಎಂದಿತಂತೆ. ಆ ಆತ್ಮವಿಶ್ವಾಸದ ಬೆಳಕು ನಮ್ಮೊಳಗೆ ಹೊತ್ತಿಕೊಂಡರೆ ಮತ್ತಷ್ಟು ದಿನ ನಮ್ಮೂರುಗಳನ್ನು ಉಳಿಸಿಕೊಳ್ಳಬಹುದೇನೋ…? ಬನ್ನಿ, ಹೋಗುವಾ ನಮ್ಮೂರಿಗೆ…ಮರಳಿ ನಮ್ಮಯ ಗೂಡಿಗೆ..

ಸಂಪೂರ್ಣ ಓದಿಗೆ ಭೇಟಿ ಕೊಡಿ- ಚೆಂಡೆಮದ್ದಳೆ
ತಮಸೋಮಾ ಜೋತಿರ್ಗಮಯ..

0 Comments