ಢುಂಢಿ ಕಥಾನಕ ಮತ್ತು ವರ್ತಮಾನದ ತಲ್ಲಣಗಳು!
ಢುಂಢಿ: ಅರಣ್ಯಕನೊಬ್ಬ ಗಣಪತಿಯಾದ ಕಥೆ ವಿವಾದ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಕೃತಿಯ ಕುರಿತು ಪತ್ರಿಕೆ ಗಳಲ್ಲಿ ಬಂದ ವರದಿಯಾದರಿಸಿ ಕೃತಿಯ ಕರ್ತೃ ಯೋಗೇಶ್ ಮಾಸ್ಟರ್ ರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆಯಲ್ಲದೇ ಪ್ರಕರಣ ಇತ್ಯರ್ಥ ಆಗುವವರೆಗೆ ನ್ಯಾಯಾಲಯ “ಡುಂಢಿ” ಕಾದಂಬರಿಯನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕಟಣೆ ಇಲ್ಲವೇ ಮಾರಾಟ ಮಾಡದಂತೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಈ ನಡುವೆ ಸೋಕಾಲ್ಡ್ ಬುದ್ದಿಜೀವಿಗಳು ಕೃತಿಯ ವಿರುದ್ದವಾಗಿ ತಮ್ಮ ವೈಯುಕ್ತಿಕ ನಿಲುವುಗಳನ್ನು ಹರಿಯ ಬಿಡುತ್ತಿದ್ದಾರೆ. ಯೋಗೀಶ್ ಮಾಸ್ಟರ್ ರನ್ನು ಬೆಂಬಲಿಸುವವರ ವಿರುದ್ದ ತೀವ್ರ ಟೀಕೆಗಳನ್ನು ಮಾಡಲಾಗುತ್ತಿದೆ. ಕೃತಿಯನ್ನು ಹೊರತು ಪಡಿಸಿ ಯೋಗೀಶ್ ಮಾಸ್ಟರನ ವಿರುದ್ದ ವೈಯುಕ್ತಿಕ ಟೀಕೆ ಟಿಪ್ಪಣಿಗಳನ್ನು ಮಾಡಲಾಗುತ್ತಿದೆ. ಒಂದು ಕೃತಿಯ ಕುರಿತು ಇಷ್ಟೆಲ್ಲಾ ಬೆಳವಣಿಗೆಗಳು ಆಗಿದ್ದೇಕೆ? ಕೃತಿಯಲ್ಲಿ ಯೋಗೇಶ್ ಮಾಸ್ಟರ್ ಹೇಳಿರುವುದೇನು? ಕೃತಿಯ ವಿರುದ್ದದ ಧ್ವನಿ ಎತ್ತಿದ್ದು ಯಾರು ? ಯಾಕೆ? ಇದರ ಹಿಂದಿನ ಹುನ್ನಾರಗಳೇನು? ಎಂಬ ಪ್ರಶ್ನೆಗಳು ಏಳುವುದು ಸಹಜ. ಈ ನಿಟ್ಟಿನಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೇ ಒಟ್ಟು ಘಟನೆಯ ಕುರಿತು ಒಂದು ಪುಟ್ಟ ಅವಲೋಕನ ಮತ್ತು ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಭಾರತ ದೇಶ ವಿವಿಧ ಸಾಂಸ್ಕøತಿಕ ಆಚಾರ ವಿಚಾರಗಳನ್ನು ಮತ್ತು ಧಾರ್ಮಿಕತೆಯನ್ನು ಹೊಂದಿದ ದೇಶ. ಭಾವನಾತ್ಮಕವಾಗಿ ನಿತ್ಯದ ಬದುಕನ್ನು ರೂಪಿಸಿಕೊಂಡ ಜಗತ್ತಿನ ಏಕೈಕ ರಾಷ್ಟ್ರವೂ ಹೌದು. ಇಲ್ಲಿ ಸಾವಿರಾರು ಸಂಖ್ಯೆಯ ಮತಪಂಥಗಳಿವೆಯಾದರೂ ಸಾಂಸ್ಕøತಿಕ ಚೌಕಟ್ಟಿನಲ್ಲಿ ಒಗ್ಗೂಡುವ ಮತ್ತು ಪರಸ್ಪರರ ವಿಚಾರಗಳನ್ನು ಗೌರವಿಸುವ ಪರಿಪಾಠವಿದೆ. ಹಾಗೆಯೇ ತಾವು ಅನುಸರಿಸುವ ದಾರ್ಮಿಕ ಸಂಸ್ಕøತಿಗೆ ಒಗ್ಗುವ ಮತ್ತು ಕಟ್ಟಳೆಗಳನ್ನು ಚೌಕಟ್ಟಿನೊಳಗೆ ವಿಧಿಸಿಕೊಂಡು ಅಗೋಚರವಾದ ಶಕ್ತಿ ಇದೆಯೆಂಬ ಕಲ್ಪನೆಯಲ್ಲಿ ಅದಕ್ಕೆ ದೈವದ ಸ್ವರೂಪ ನೀಡಿ ನಂಬಿಕೆಯ ಬಂಧವನ್ನು ಗಟ್ಟಿಗೊಳಿಸಲಾಗಿದೆ. ಹಾಗೂ ಇವುಗಳಿಗೆ ಪೂರಕವಾಗಿ ಪವಾಡ ಸದೃಶವಾದ ಕಥೆಗಳನ್ನು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳಲಾಗಿದೆ, ಇಂಥಹ ಕಥೆಗಳು ಕಾಲ ಘಟ್ಟದಿಂದ ಕಾಲಘಟ್ಟಕ್ಕೆ ಮತ್ತು ಪರಿಸರಕ್ಕೆ ತಕ್ಕಂತೆ ಸ್ಥಳದಿಂದ ಸ್ಥಳಕ್ಕೆ ಬದಲಾವಣೆಗೆ ಒಳಪಟ್ಟಿದೆ. ಆದು ಆಯಾ ಪರಿಸರದ ಸ್ವರೂಪಕ್ಕೆ ತಕ್ಕಂತೆ ಇರುತ್ತದಾದ್ದರಿಂದ ಅವರವರ ನಂಬಿಕೆಗೆ ಒಳಪಟ್ಟಿರುತ್ತದೆ. ಹೀಗಿರುವಲ್ಲಿ ಇವಕ್ಕೆ ಆಧಾರಗಳು ಪೂರ್ಣ ಪ್ರಮಾಣದಲ್ಲಿ ಇರದೇ ಅದು ಇತಿಹಾಸವಾಗದೇ ಪುರಾಣಗಳಾಗಿ ಮಾರ್ಪಾಡಾಗಿವೆ ಎಂಬುದು ನನ್ನ ಅಭಿಮತ. ಹಾಗೆಯೇ ಮನುಷ್ಯನ ನಿಯಂತ್ರಣಕ್ಕೆ ದೈವ ಸ್ವರೂಪದ ಕಲ್ಪನೆಗಳನ್ನು ಉಳಿಸಿಕೊಂಡು ಅದನ್ನು ಗೌರವದ ನೆಲೆಗಟ್ಟಿನಲ್ಲಿ ಉಳಿಸಿಕೊಳ್ಳಲಾಗಿದೆಯಾದರೂ ವರ್ತಮಾನದಲ್ಲಿ ಕೆಲವೊಮ್ಮೆ ಅಂತಹ ನಂಬಿಕೆಗಳು ಚರ್ಚೆಗೆ ಒಳಪಡುತ್ತಿವೆ, ಇಂತಹ ಚರ್ಚೆಗಳನ್ನು ಹತ್ತಿಕ್ಕುವ ಸ್ಥಾಪಿತ ಹಿತಾಸಕ್ತಿಗಳು ಅದಕ್ಕೆ ಅಡ್ಡಿ ಉಂಟು ಮಾಡುತ್ತಿವೆ. ಇಲ್ಲಿ ಇತಿಹಾಸ ಪುರಾಣವಾಗಿದೆ, ಪುರಾಣ ಇತಿಹಾಸವಾಗುವ ಆತಂಕಗಳು ಇವೆ.
ಢುಂಢಿ ಕಾದಂಬರಿಯ ಕಥಾನಕ ಹಿಂದೂ ಸಮಾಜದ ವಿಘ್ನ ವಿನಾಶಕ ಗಣಗಳ ಅಧಿ ದೇವತೆ ಮಹಾಗಣಪತಿಯ ಕಥೆ. ಗಣಪತಿ ಎಂದರೆ ಅದು ಆಕಾರ ಮತ್ತು ನಿರಾಕಾರಗಳ ಸಮ್ಮಿಲನವೇ ಗಣಪತಿಯ ಪರಿಕಲ್ಪನೆ ಆಗಿದೆ. ಹಾಗಾಗಿ ಗಣಪತಿಯನ್ನು ಪ್ರಕೃತಿಯ ಒಂದು ಭಾಗ, ಸಮಾಜದ ಎಲ್ಲ ಸ್ಥರಗಳಲ್ಲು ಎಲ್ಲ ರೂಪಗಳಲ್ಲು ಗಣಪತಿಯನ್ನು ಕಾಣಲಾಗುತ್ತದೆ ಮತ್ತು ಪೂಜಿಸಲಾಗುತ್ತಿದೆ. ಇಂತಹ ಗಣಪತಿಯ ಕುರಿತಾಗಿ ಕೆಲವು ಬರಹಗಾರರ ಗ್ರಂಥಗಳನ್ನು ಆದರಿಸಿ ಎಷ್ಟೋ ಶತಮಾನಗಳಷ್ಟು ಹಿಂದಿನ ಕಾಲಘಟ್ಟದ ಪರಿಸರದಲ್ಲಿ ಗಣಪತಿ ರೂಪುಗೊಂಡಿದ್ದು ಹೇಗೆ ಎಂಬ ಕಥೆಯನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಅಂದರೆ ಭಾರತಕ್ಕೆ ಆರ್ಯರು ಆಗಮಿಸಿ ಇಲ್ಲೆ ನೆಲೆಯೂರುವ ಸಂಧರ್ಭ, ಮೂಲ ನಿವಾಸಿಗಳಾದ ದ್ರಾವಿಡರನ್ನು ದಸ್ಯುಗಳನ್ನಾಗಿ ಮಾಡಿಕೊಂಡು ವರ್ಗ ಸಮಾಜವನ್ನು ಸೃಷ್ಠಿಸಿದ ಸಂಧರ್ಭ ಗಣಪತಿ ರೂಪುಗೊಂಡ ಬಗ್ಗೆ ಮತ್ತು ಅಂದಿನ ಕಾಲಘಟ್ಟದ ಆಚಾರ ಪದ್ದತಿಗಳ ಬಗ್ಗೆ ಹೇಳುತ್ತಲೇ ವೈದಿಕಶಾಹಿಯ ಅಧಿಪತ್ಯ ಸ್ಥಾಪಿತವಾದ ಕುರಿತು ಹೇಳಲಾಗಿದೆ ಮತ್ತು ಅದು ಕಥಾನಕ ರೂಪದಲ್ಲಿದೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಒಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳಲಾಗದ ಕಹಿ ಸತ್ಯಗಳನ್ನು ಹೇಳಲಾಗಿದೆ. ಬಹುತೇಕವಾಗಿ ದೇವರ ಧೈವತ್ವದ ಕಲ್ಪನೆಗಳನ್ನೆ ಬುಡಮೇಲು ಮಾಡುವಂತೆ ಕಂಡರೂ ಸತ್ಯ ಇಲ್ಲಿ ಅಪಥ್ಯವಾಗಿದೆಯಷ್ಠೆ.
ಭಾರತವೇ ಮೊದಲಾಗಿ ವಿಶ್ವದ ಇತರೆ ಭಾಗಗಳಲ್ಲಿಯೂ ಕೂಡ ಪೌರಾಣಿಕ ಕಥನಗಳ ಮೂಲಗಳನ್ನು ಸಂಶೋಧಿಸಲು ಸಾಮಾನ್ಯ ಜನರು ಹಿಂಜರಿಯುತ್ತಾರೆ. ಅಂತಹ ಪರೀಕ್ಷೆಗಳು ಅವರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುತ್ತದೆ ಅಥವಾ ಮೌಲ್ಯಗಳನ್ನು ಅಪವಿತ್ರಗೊಳಿಸುತ್ತದೇನೋ ಎಂಬಂತಹ ಮಡಿವಂತಿಕೆಯ ಭಾವವಿದೆ. ಈ ಪೌರಾಣಿಕ ಕಥಾನಕಗಳು ಯಾರೋ ಕೆಲಸಕ್ಕೆ ಬಾರದ ಗೊಡ್ಡು ಹರಟೆ ಮಲ್ಲರು ಹೆಣೆದಿರುವಂತಹ ವಿಷಯಗಳಲ್ಲ. ಅವುಗಳು ಅಧ್ಯಯನಕ್ಕೆ ಯೋಗ್ಯವಾಗಿದ್ದು, ಸೂಕ್ಷ್ಮ ಸ್ವರೂಪದ ಸತ್ಯಗಳೂ, ಹಾಗೂ ಅನೇಕ ಸಾಂಸ್ಕøತಿಕ ವಿಚಾರಗಳೂ ಅವುಗಳಲ್ಲಿರುತ್ತವೆ. ನಮ್ಮ ಪುರಾಣಗಳನ್ನು ಅಧ್ಯಯನ ಯೋಗ್ಯವಾಗಿ ಪರಿಗಣಿಸಿ ಪರಿಶೀಲಿಸುವುದರಿಂದ ಗತಕಾಲದ ಸತ್ಯಗಳು, ನಮಗೆ ಪಥ್ಯವಾದರೂ, ಅಪಥ್ಯವಾದರೂ, ಸಾಮಾಜಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಯ ಸತ್ಯಗಳು ಗೋಚರವಾಗುತ್ತವೆ. ಈ ಹಿನ್ನೆಲೆಯಲ್ಲಿ ಢುಂಢಿ ಕಾದಂಬರಿಯ ಕಥಾವಸ್ತು ಇದೆಯೆಂದು ಹೇಳಲಾಗಿದೆ.
ಇನ್ನು ಯೋಗೀಶ್ ಮಾಸ್ಟರ್ ಕಥೆ, ಈತ ಒಬ್ಬ ಸಾಮಾನ್ಯ ಲೇಖಕ, ರಂಗಕರ್ಮಿ ಮತ್ತು ಸಂಗೀತ ಪ್ರೇಮಿ. ಇವರೇ ತಮ್ಮ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಹರಿಯ ಬಿಟ್ಟಿರುವ ಪ್ರಕಾರ ಟಿಸಿಹೆಚ್ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆಯ ಶಿಕ್ಷಕ.ಹಲವು ವರ್ಷಗಳ ಸೇವೆಯ ಬಳಿಕ ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ್ದಾರಂತೆ.ಕ್ರಿಯಾಶೀಲ ಸ್ವಭಾವದ ಈ ಮನುಷ್ಯ 16ರ ಹರೆಯದಲ್ಲೇ ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಂಡವರು. ಆಗಲೇ “ಭಗ್ನ ಹೃದಯ” ಕವನ ಸಂಕಲನದ ಮೂಲಕ ಅಡಿಯಿರಿಸಿ ನೂರಾರು ಲೇಖನಗಳು ಕಥೆ, ಕವನಗಳನ್ನು ಬರೆದಿದಾರಲ್ಲದೇ 208ಕ್ಕೂ ಹೆಚ್ಚು ರಂಗ ಪ್ರದರ್ಶನಗಳಲ್ಲಿ ನಟರಾಗಿ, ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ ತಾವೇ ನಾಟಕಗಳನ್ನು ರಚಿಸಿದ್ದಾರೆ. ವೈಚಾರಿಕ ಪ್ರಜ್ಞೆಯ ಯೋಗೀಶ್ ಆಂಗ್ಲ ನಾಟಕಗಳಲ್ಲಿ ಪೌರಾಣಿಕ ಕಥಾನಕವನ್ನು ವರ್ತಮಾನಕ್ಕೆ ಹೋಲಿಸಿ ರಂಗ ಪ್ರಯೋಗಗಳನ್ನು ಮಾಡಿ ಮೆಚ್ಚುಗೆ ಪಡೆದವರು. ಎಂ ಎಸ್ ಸತ್ಯು, ಹಂಸಲೇಖ ಮತ್ತಿತರೊಂದಿಗೆ ಒಡನಾಡುತ್ತಲೇ ರಾಮಾಯಣ ಪುರಾಣದಲ್ಲಿ ಸೀತಾದೇವಿಯನ್ನು ಹೇಗೆ ಶೋಷಿಸಲಾಯಿತು ಎಂಬ ಎಂಬ ಕುರಿತು “ಜಾನಕಿರಾಂ” ನಾಟಕ ಬರೆದು ರಂಗ ಪ್ರದರ್ಶನ ಮಾಡಿದ್ದರು. ಈಗ ಗಣಪತಿಯ ಕುರಿತು ಇವರು ಬರೆದ ಕೃತಿ ತಾರ್ಕಿಕ ನೆಲೆಗಟ್ಟಿನ ಕಥಾನಕವೇ ಹೊರತು ಸಂಶೋಧನಾ ಕೃತಿಯೂ ಅಲ್ಲ.

ಇಂಥಹ ಸನ್ನಿವೇಶದಲ್ಲಿ ರಾಜ್ಯ ಮಟ್ಟದ ಒಂದೆರೆಡು ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಏಕಮುಖವಾದ ಚರ್ಚೆಯನ್ನು ತಂದಿದ್ದಲ್ಲದೇ ಈ ಕುರಿತು ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಕರೆನೀಡಿ ಪರಿಸ್ಥಿತಿಯನ್ನು ಉಲ್ಭಣಗೊಳ್ಳುವಂತೆ ಮಾಡಿಬಿಟ್ಟರು. ಅದ್ಯಾರೋ ಪಂಚಾಂಗ ಹೇಳುವ ಪುಣ್ಯಾತ್ಮನೊಬ್ಬ ಲಕ್ಷಾಂತರ ಜನ ವೀಕ್ಷಿಸುತ್ತಿದ್ದಾರೆ ಎಂಬುದನ್ನು ಅರಿಯದೇ ಪುಸ್ತಕವನ್ನೇ ಹರಿದು ಹಾಕಿ ಬಿಟ್ಟ, ಮತ್ಯಾರೋ ಒಬ್ಬರು ಟಿವಿಯ ಲೈವ್ ಮಾತುಕತೆಯಲ್ಲೇ ಯೋಗೀಶ್ ಮಾಸ್ಟರನ್ನು ದಂಡಿಸುವಂತೆ ಪ್ರತಿಭಟಿಸುವಂತೆ ಕರೆನೀಡಿ ಬಿಟ್ಟ. ಕನ್ನಡವನ್ನೇ ಸರಿಯಾಗಿ ಆಡಲು ಬಾರದ ಖಾವಿದಾರಿಯೊಬ್ಬ ಪತ್ರಿಕಾ ಹೇಳಿಕೆಯ ಆದಾರದಲ್ಲೇ ದೂರು ದಾಖಲಿಸಿ ಮನಬಂದಂತೆ ಮಾತನಾಡಲಾರಂಭಿಸಿದ ಅಸಲಿಗೆ ಅವರ್ಯಾರೂ “ಢುಂಢಿ” ಪುಸ್ತಕವನ್ನು ಓದಿಯೇ ಇರಲಿಲ್ಲ ಎಂಬುದು ಗಮನಾರ್ಹ. ಇದೊಂದು ದುರಾದೃಷ್ಟಕರ ಬೆಳವಣಿಗೆ. ಹಾಗಾಗಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯೇ ಸರಿ.
“ಢುಂಢಿ” ಕಾದಂಬರಿ ಯಾಗಿರುವುದರಿಂದ ಅದು ಓದಲು ಸಿಕ್ಕಿದ್ದರೆ ಅಲ್ಲಿನ ಹೂರಣವನ್ನು ಒಪ್ಪುವ ಇಲ್ಲವೆ ಬಿಡುವ ಕುರಿತು ಚರ್ಚಿಸ ಬಹುದಿತ್ತೇನೋ ಆದರೆ ಅಂತಹದ್ದಕ್ಕೆ ಅವಕಾಶವೇ ನೀಡದೇ ವೈದಿಕ ಶಾಹಿ ಹಿತಾಸಕ್ತಿಗಳು ಪ್ರಕರಣವನ್ನು ದಿಕ್ಕು ತಪ್ಪಿಸಿ ಬಿಟ್ಟವು. ಘಟನೆ ಆರಂಭವಾದಂದಿನಿಂದ ಈ ಕುರಿತು ಯಾರೆಲ್ಲ ಮಾತನಾಡಿದರು, ಬರೆದರು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು ಇದರ ಅರಿವಾಗುತ್ತದೆ. ಅಷ್ಟಕ್ಕೂ ನಾವು ನಂಬಿಕೊಂಡ ನಂಬಿಕೆಗಳು ಪ್ರಶ್ನಾತೀತವಾದುವುಗಳೇನಲ್ಲ, ಆದರೂ ಯಾರು ಯಾವ ಕಥೆ ಬರೆದರೂ ನಮ್ಮ ಮೂಲ ನಂಬಿಕೆಗಳಿಗೆ ಧಕ್ಕೆ ಉಂಟಾಗಲಾರದು, ಏಕೆಂದರೆ ಭಾವಗಳು ಅವರವರ ನಂಬಿಕೆಗಳಿಗೆ ನಿಷ್ಠವಾಗಿರುತ್ತವೆ ಹಾಗೆಂದು ಅದನ್ನು ಸಾರ್ವತ್ರಿಕವಾಗಿ ಹಳಿಯುವ ಘಾಸಿಗೊಳಿಸುವ ಪ್ರಯತ್ನವೂ ಆಗಬಾರದು. ಜನಪದರ ಸಂಸ್ಕøತಿಯಲ್ಲಿ ಇಂತಹ ವೈರುದ್ಯಗಳು ಪದೇ ಪದೇ ದಾಖಲಾಗುತ್ತಲೇ ಇರುತ್ತವೆ. ಬೇಕಾದ್ದನ್ನು ಉಳಿಸಿಕೊಂಡು ಬೇಡದ್ದನ್ನು ಬಿಟ್ಟುಬಿಡಿ ಆದರೆ ಹತ್ತಿಕ್ಕುವ ಪ್ರಯತ್ನಗಳು ಕೊನೆಯಾಗಲಿ. ಬದಲಾದ ಕಾಲಘಟ್ಟದಲ್ಲಿ ಬದಲಾವಣೆಯ ಗಾಳಿ ನಿರಂತರ ಅಲ್ಲವೇ ಹಾಗೆಯೇ ಆಯ್ಕೆಯ ಹಕ್ಕು ನಿಮ್ಮದೇ ಆಗಿದೆಯಲ್ಲವೇ?







novel with a bad taste, protesters with bad intention.
ಪುಸ್ತಕ ಎಲ್ಲಿ ಸಿಗ್ತಾ ಇದೆ?? ಸಪ್ನ ಬುಕ್ ಹೌಸ್ ಅಲ್ಲಿ ಇಲ್ಲ…ದಯವಿಟು ತಿಳಿಸಿ
ಕಾಳಸಂತೆಯಲ್ಲಿ ಮೂಲದರದ ಐದು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಭೈರಪ್ಪನವರ ‘ಆವರಣ’ದ ಬಳಿಕ ಅತ್ಯಂತ ಹೆಚ್ಚು ಪ್ರತಿಗಳು ಢುಂಢಿ ಕಾದಂಬರಿಯದ್ದು ಬಿಕರಿಯಾಗಲಿದೆ ಎಂದು ಮಾರುಕಟ್ಟೆಯ ಮೂಲಗಳು ಹೇಳಿವೆ.
ಜೀವ ಸೃಷ್ಟಿಯ ಮೂಲವಾದ ಲೈಂಗಿಕತೆಯನ್ನು ಕೆಟ್ಟದ್ದು ಎಂಬ ದೃಷ್ಟಿಕೋನದಿಂದ ನೋಡುವುದೇ ಅಸಹಜವಾದದ್ದು ಹಾಗೂ ಪ್ರಕೃತಿನಿಯಮಗಳಿಗೆ ವಿರುದ್ಧವಾದದ್ದು. ಇದು ಪುರೋಹಿತಶಾಹೀ ದೃಷ್ಟಿಕೋನದಿಂದ ರೂಪುಗೊಂಡಿರುವಂಥದ್ದು. ಹೀಗಾಗಿ ಭಾರತೀಯರಿಗೆ ಲೈಂಗಿಕತೆಯನ್ನು ಸಹಜವಾಗಿ ತೆಗೆದುಕೊಳ್ಳಲಾಗುತ್ತಿಲ್ಲ. ಖಜುರಾಹೋದಲ್ಲಿ ದೇವಾಲಯದಲ್ಲಿ ಲೈಂಗಿಕ ಶಿಲ್ಪಗಳು ಯಥೇಚ್ಛವಾಗಿವೆ. ಇದನ್ನು ಧಾರ್ಮಿಕ ಮೂಲಭೂತವಾದಿಗಳು ನೋಡಿಲ್ಲವೇ? ನೋಡದಿದ್ದರೆ ಒಮ್ಮೆ ಹೋಗಿ ನೋಡುವುದು ಒಳ್ಳೆಯದು. ಆಗಲಾದರೂ ಇವರ ಕಣ್ಣಿಗೆ ಕವಿದಿರುವ ಮಡಿವಂತಿಕೆಯ ಪೊರೆ ಕಳಚುಚುತ್ತದೋ ಏನೋ? ಕಲಾ ಸೃಷ್ಟಿಯಲ್ಲಿ ಸಹಜವಾಗಿ ಲೈಂಗಿಕತೆಯ ಚಿತ್ರಣವನ್ನು ಸ್ವೀಕರಿಸಲಾಗದಷ್ಟು ಮಡಿವಂತಿಕೆ ಹಾಗೂ ಪುರೋಹಿತಶಾಹೀ ದೃಷ್ಟಿಕೋನದಿಂದ ಕಲೆ ಹಾಗೂ ಕಲೆಗಾರ ಬೆಳೆಯಲಾರ.
ಸರಿಯಾಗಿ ಹೇಳಿದಿರಿ ನೀವು. ಅನೇಕ ವರ್ಷಗಳ ಹಿಂದೆ ‘ಸಂಸ್ಕಾರ’ ಕಾದಂಬರಿ ಬಂದಾಗ ಕೂಡ ಮಡಿವಂತ ಬ್ರಾಹ್ಮಣರು ಸಿಕ್ಕಾಪಟ್ಟೆ ಗಲಾಟೆ ಮಾಡಿದ್ದರು, ಆ ಕಾದಂಬರಿಯಿಂದ ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ಆಗಿದೆ, ವೈದಿಕರಿಗೆ ಅವಮಾನ ಮಾಡುವ ಉದ್ದೇಶದಿಂದ ಬರೆದ ಕಾದಂಬರಿ ಅಂತ ಅದನ್ನು ಬ್ಯಾನ್ ಮಾಡಲು ಆಗ್ರಹಿಸಿದ್ದರು. ಸಮಾಜದಲ್ಲಷ್ಟೇ ಅಲ್ಲ ಸಾಹಿತ್ಯಲೋಕದಲ್ಲೂ ಮಡಿವಂತಿಕೆಯೇ ಮೇಲುಗೈ ಪಡೆದಿದ್ದ ಆ ಕಾಲದಲ್ಲೂ ಕೃತಿಕಾರ ಅನಂತಮೂರ್ತಿ ಸನಾತನಿ ಬ್ರಾಹ್ಮಣರ ಬೆದರಿಕೆಗೆ ಸೊಪ್ಪು ಹಾಕಲಿಲ್ಲ. ಉದ್ರಿಕ್ತ ಪರಿಸ್ಥಿತಿಯಲ್ಲೂ ಉದ್ರೇಕಗೊಳ್ಳದೆ ಸಂಸ್ಕಾರ ಏಕೆ ಬರೆದೆ ಎಂದು ಸಮಾಧಾನದಿಂದ ಹೇಳಿದರು. ಅವರ ಮಾತಿನಲ್ಲಿ ತಥ್ಯ ಇದೆ ಅಂತ ಬ್ರಾಹ್ಮಣೇತರ ಸಾಹಿತಿಗಳು ಅನಂತಮೂರ್ತಿಯವರ ಬೆಂಬಲಕ್ಕೆ ನಿಂತರು. ಕಾಲಕ್ರಮೇಣ ಗೊಡ್ಡು ಬ್ರಾಹ್ಮಣರ ಸೊಲ್ಲು ಅಡಗಿತು. ಸಂಸ್ಕಾರ ವಿಶ್ವವಿಖ್ಯಾತವಾಗಿ ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡು ಜಾತಿವ್ಯವಸ್ಥೆಯ ಅಧಿಕೃತ ಚಿತ್ರಣ ಎಂದು ಮನ್ನಣೆ ಪಡೆಯಿತು. ಇಂದು ಪರಿಸ್ಥಿತಿ ಮರುಕಳಿಸಿದೆ. ಅಂದು ಸಂಸ್ಕಾರವನ್ನು ವಿರೋಧಿಸಿದ ಬ್ರಾಹ್ಮಣ್ಯವೇ ಇಂದು ಯೋಗೀಶ್ ಮಾಸ್ತರ್ ಅವರ ಅಭಿವ್ಯಕ್ತಿ ಸ್ವಾಂತಂತ್ರ್ಯಕ್ಕೆ ಚ್ಯುತಿ ಉಂಟುಮಾಡಿದೆ. ಗಣೇಶನ ಬಗ್ಗೆ ವೈದಿಕರಿಗೆ ಇರುವ ಮಡಿವಂತಿಕೆಯನ್ನು ಢುಂಢಿ ಕಾದಂಬರಿಯು ಕೆರಳಿಸಿದೆ. ಮಡುಗಟ್ಟಿದ ಮನಸ್ಸುಗಳು ಯೋಗೀಶ್ ಮಾಸ್ತರ್ ಅವರನ್ನು ಬೇಟೆ ಆಡಲು ಹೊರಟಿವೆ. ಆದುದರಿಂದ ಅಂದು ಅನಂತಮೂರ್ತಿಯವರ ಬೆಂಬಲಕ್ಕೆ ನಿಂತ ಹಾಗೆ ಇಂದು ಯೋಗೀಶ್ ಮಾಸ್ತರ್ ಅವರ ಬೆಂಬಲಕ್ಕೆ ಕನ್ನಡದ ಪ್ರಗತಿಪರ ಶಕ್ತಿಗಳು ನಿಲ್ಲಬೇಕಾಗಿದೆ. ಬ್ರಾಹ್ಮಣ್ಯದ ಹೊಸ threat ಅನ್ನು ಎದುರಿಸಿ ಬಗ್ಗಿಸಬೇಕಾಗಿದೆ. ಮುಂದೊಂದು ದಿನ ಸಂಸ್ಕಾರದ ರೀತಿಯಲ್ಲೇ ಢುಂಢಿಯೂ ವಿಶ್ವವಿಖ್ಯಾತವಾಗಿ ಕನ್ನಡದ ಬೆಳಕನ್ನು ಪಸರಿಸಬಹುದೆಂಬ ಆಸೆಯನ್ನು ನಾವು ಇಟ್ಟುಕೊಳ್ಳತಕ್ಕದ್ದು.
ಲಂಕೇಶ್ ಹಾಗು ತೇಜಸ್ವಿಯವರಿಗೆ ಸನಾತನಿಯಾಗಿ ಕಂಡಿದ್ದ ಯು.ಆರ್, ಈಗಿನವರಿಗೆ ವಿಚಾರವಾದಿಯಾಗಿರುವುದು ಆಶ್ಚಯ೯.
ಅದಕ್ಕೆ, ಕಾಲಾಯ: ತಸ್ಮೈ ನಮಹ:, ಅಂತ
ಪುಸ್ತಕ ಸಾರ್ವಜನಿಕ ಮಾರಾಟಕ್ಕೆ ಲಬ್ಯವಿಲ್ಲ, ನ್ಯಾಯಾಲಯ ಪ್ರಕರಣ ವಿಚಾರಣೆ ಅಗುವ ತನಕ ಮಾರಾಟವನ್ನು ನಿರ್ಬಂದಿಸಿದೆ. ಸೇ.28ಕ್ಕೆ ಪ್ರಕರಣದ ವಿಚಾರಣೆ ಇದೆ
ನ್ಯಾಯಾಲಯ ವಿಚಾರಣೆ ಮಾಡುವವರೆಗೆ ಪುಸ್ತಕ ಮಾರಾಟವನ್ನು ನಿರ್ಬಂಧಿಸಿದೆ. ಪುಸ್ತಕವನ್ನು ಓದದೆ ಅದನ್ನು ನಿಷೇಧಿಸುವಂತೆ ಓದುಗರನ್ನು ಪ್ರಚೋದಿಸಿದ ಪತ್ರಿಕೆಗಳು ಕೃತಿಯನ್ನು ತಾವೇ ಪತ್ರಿಕೆಗಳಲ್ಲಿ ಪ್ರಕಟಿಸಿ ಗಂಭೀರವಾದ ಚರ್ಚೆಗೆ ಅವಕಾಶಮಾಡಿಕೊಡಲಿ.
yes it is
ಸಾಹಿತ್ಯ ಬಂಧುಗಳೆ
ಸಾಹಿತ್ಯ ರಚನೆ ಅನೇಕ ಆಯಾಮಗಳಲ್ಲಿ ರೂಪುಗೊಳ್ಳುತ್ತದೆ. ಪ್ರತಿಯೊಬ್ಬರ ಆಲೋಚನೆಗಳೂ ಬೇರೆಯೇ ಆಗಿರುತ್ತವೆ. ಮತ್ತೆ ಯೋಗೀಶ್ ಮಾಸ್ಟರ್ ತಾವು ಹೇಳುತ್ತಿರುವುದೆಲ್ಲ ಪರಮ ಸತ್ಯ ಅದೇ ಇತಿಹಾಸ ಎನ್ನುವ ಧೋರಣೆಯಲ್ಲೇನೂ ಹೇಳಿಲ್ಲ… ನಾವು ಕನ್ನಡದಲ್ಲಿ ಮಾಡುವುದನ್ನೇ ಸಂಸ್ಕೃತದಲ್ಲಿ ಹೇಳಿದರೆ ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ. ಅವರನ್ನು ಸುಸಂಸ್ಕೃತರು ಎಂದು ಬೆನ್ನು ತಟ್ಟುತ್ತೇವೆ. ಉದಾಹರಣೆ ಸಂಭೋಗ, ಶಿಶ್ನ, ಯೋನಿ, ಸ್ಥನ ಮುಂತಾದ ಶಬ್ದಗಳಿಗೆ ಕನ್ನಡದಲ್ಲಿ ಹೇಳಿದರೆ ಬೇರೆ ಅರ್ಥಗಳು ಬರುತ್ತವೆಯೇ ಎಂಬುದನ್ನು ಸೋ ಕಾಲ್ಡ್ ಸುಸಂಸ್ಕೃತರು ಯೋಚಿಸಬೇಕು. ಸಂಸ್ಕೃತ ಭೂಯಿಷ್ಟವಾದ ನೆಲೆಯ ವಾಕ್ಯಗಳಿಗೆ, ಪದಗಳಿಗೆ ವಿಚಾರಗಳಿಗೆ ಮಾನ್ಯತೆ ನೀಡುವ ಮಂದಿ ಆಡುನುಡಿಯಲ್ಲಿನ ಅಭಿವ್ಯಕ್ತಿಯನ್ನೂ ಗೌರವಿಸಬೇಕು ಅಲ್ಲವೇ?
ಈ ವಿಚಾರವನ್ನು ಏಕೆ ಹೇಳಹೊರಟಿದ್ದೆಂದರೆ ನಮ್ಮ ಸಂಸ್ಕೃತಿಗೆ ಅಪಚಾರವಾಗಿಬಿಟ್ಟಿದೆ ಎಂದು ಯಾರು ಹುಯಿಲೆಬ್ಬಿಸುತ್ತಿರುವರೋ ಆ ಮಹಾಶಯರು ಮಾಧ್ಯಮದವರು ತಾವು ಕೃತಿಯನ್ನು ಪೂರ್ಣ ಓದಿರುವಿರಾ ಎಂದು ಕೇಳಿದರೆ ಇಲ್ಲವೆಂಬ ನೇರ ಉತ್ತರ ಕೊಟ್ಟು, ಯಾರೋ ಸಂಸ್ಕೃತಿಯನ್ನು ಗುತ್ತಿಗೆ ಹಿಡಿದಿರುವವರು ಹೇಳಿದರು ಅದನ್ನು ಕೇಳಿ ಕೆರಳಿದೆವು ಎಂಬುದಾಗಿ ಹೇಳಿಕೊಂಡರು. ಅಂದರೆ ನಮ್ಮ ಸಾಹಿತ್ಯವನ್ನು ಓದುವ ಅರ್ಥೈಸಿಕೊಳ್ಳುವ ನೆಲೆ ಎಲ್ಲಿಗೆ ತಲುಪಿದೆ ನಾವೆಷ್ಟು ವೈಚಾರಿಕ ಅದಃಪತನಕ್ಕೆ ಬಿದ್ದಿದ್ದೇವೆ ನೋಡಿ! ವಿಷಾದದ ಸಂಗತಿ ಎಂದರೆ ಪರಂಪರೆಯಿಂದ ಬಂದಿರುವ ಯಾವುದೇ ವಿವಾಧಿತ ಕೃತಿಯೂ ವೈಚಾರಿಕ ನೆಲೆಗಟ್ಟಿನಲ್ಲಿ ಚರ್ಚೆಗೆ ಒಳಗಾಗಲೇ ಇಲ್ಲ. ಮಹಾಚೈತ್ರ, ಸಂಸ್ಕಾರ, ಆನುದೇವಾ ಹೊರಗಣವನು ಯಾವುದೂ…! ಆನುದೇವಾ ಹೊರಗಣವನು ಕೃತಿ ಕುರಿತು ಉಂಟಾದ ವಿವಾದದ ಪ್ರತಿಫಲವಾಗಿ ಮರಕ್ಕೆ ಮರ ಮಥನಿಸಿ ಎನ್ನುವ ಹೊಸ ಬೃಹತ್ ಸಂಪುಟವೇ ಹೊರಬಂದಿದೆ. ಹಾಗೆಯೇ ಕವಿ, ವಿಮರ್ಶಕ ಡಾ. ಬಂಜಗೆರೆ ಜಯಪ್ರಕಾಶ್ ಅವರ ಹೆಸರನ್ನೂ ಮತ್ತಷ್ಟು ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಯಿತು. ಎಚ್.ಎಸ್. ಶಿವಪ್ರಕಾಶರಿಗೂ ಅಷ್ಟೆ.
ಢುಂಢಿ ಲೇಖಕ ಯೋಗೇಶ್ ಮಾಸ್ಟರ್ ಅವರೆ, ನಿಜಕ್ಕೂ ವೈಚಾರಿಕ ನೆಲೆಗಟ್ಟಿನಲ್ಲಿ ಆಲೋಚಿಸುವ ಕನ್ನಡ ಮನಸ್ಸುಗಳಿವೆ. ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ದುಷ್ಟಶಕ್ತಿಗಳಿಗೆ ಉತ್ತರ ಕೊಡುವವರಿದ್ದಾರೆ. ನೇವು ಅಧೀರರಾಗಬೇಡಿ. ನೈತಿಕ ಸ್ಥೈರ್ಯ ಕಳೆದುಕೊಳ್ಳದೆ ನಿಮ್ಮ ವಿಚಾರಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗಿ. ನಿಮ್ಮಿಂದ ನಮ್ಮ ಸೋ ಕಾಲ್ಡ್ ಸಂಸ್ಕೃತಿ ಚಿಂತಕರ ಬಣ್ಣ ಬಯಲಾಗಬೇಕಾಗಿದೆ. ನಿಮಗೆ ನಮ್ಮ ನೈತಿಕ ಬೆಂಬಲವಿದೆ… ನಾನೂ ಕೂಡ ಪುಸ್ತಕ ಓದಿಲ್ಲ… ಕಾರಣ ಪುಸ್ತಕ ನನಗೆ ಸಿಕ್ಕಿಲ್ಲ. ಸಿಗುವ ಸಾಧ್ಯತೆಗಳಿವೆ. ಖಂಡಿತ ಓದಿದ ಮೇಲೆ ಮತ್ತೊಮ್ಮೆ ಪ್ರತಿಕ್ರಿಯಿಸುವೆ.
ಪಂಡಿತಾರಾಧ್ಯ ಅವರೇ, ಉತ್ಸಾಹದ ಭರದಲ್ಲಿ “ಪುಸ್ತಕವನ್ನು ಓದದೆ ಅದನ್ನು ನಿಷೇಧಿಸುವಂತೆ ಓದುಗರನ್ನು ಪ್ರಚೋದಿಸಿದ ಪತ್ರಿಕೆಗಳು ಕೃತಿಯನ್ನು ತಾವೇ ಪತ್ರಿಕೆಗಳಲ್ಲಿ ಪ್ರಕಟಿಸಿ ಗಂಭೀರವಾದ ಚರ್ಚೆಗೆ ಅವಕಾಶಮಾಡಿಕೊಡಲಿ” ಅಂತ ಆಗ್ರಹ ಪಡಿಸಿದ್ದೀರಿ. ಇದು ತುಂಬಾ ಬೇಜವಾಬ್ದಾರಿತನದ ವರ್ತನೆ ಅಂತ ನನ್ನ ಅಭಿಪ್ರಾಯ. ಏಕೆ ಎಂದೂ ಹೇಳುತ್ತೇನೆ. ಢುಂಢಿ ಕಾದಂಬರಿಯಲ್ಲಿ ಅಸಹಜ ಲೈಂಗಿಕ ಕ್ರಿಯೆಗಳ ಸವಿಸ್ತಾರ ವರ್ಣನೆ ಇದೆ ಅಂತ ಸ್ವತಹ ಪ್ರೊ. ಸಿ ಏನ್ ರಾಮಚಂದ್ರನ್ ಹೇಳಿದ್ದಾರೆ: “ಅನಾರ್ಯ ಸಮುದಾಯಗಳಲ್ಲಿತ್ತು ಎಂದು ಹೇಳಲಾಗುವ ಮುಕ್ತ ಲೈಂಗಿಕತೆಯನ್ನು ದಾಖಲಿಸಲು ಲೇಖಕರು ಅನೇಕ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ: ಕಾದಂಬರಿಯು ಶುರುವಾಗುವುದೇ ಶಂಬರನು ತನ್ನ ಉದ್ರಿಕ್ತ ಶಿಶ್ನವನ್ನು ತೋರಿಸುತ್ತಾ ತನ್ನ ತಾಯಿಯನ್ನು ಸುತ್ತು ಹಾಕುವುದರಿಂದ. ಅನಂತರ ಬರುವ ರುದ್ರ-ಪಾರ್ವತಿ ಸಂಭೋಗ ವರ್ಣನೆ ದೀರ್ಘವಾಗಿರುವುದಲ್ಲದೆ ಜಿಗುಪ್ಸೆಯನ್ನೂ ಉಂಟುಮಾಡುತ್ತದೆ.” ಇಂತಹ ಜಿಗುಪ್ಸೆ ಹುಟ್ಟಿಸುವ ಲೈಂಗಿಕ ಕ್ರಿಯೆಗಳ ಚಿತ್ರಣವಿರುವ ಕಾದಂಬರಿಯನ್ನು ಹೈಸ್ಕೂಲ್ ಕಾಲೇಜ್ ಮಕ್ಕಳಾದಿಯಾಗಿ ಎಲ್ಲರೂ ಓದುವ ದಿನಪತ್ರಿಕೆಗಳು ಪ್ರಕಟಿಸಿದರೆ ಆಗುವ ಅನಾಹುತಗಳಿಗೆ ಯಾರು ಹೊಣೆ? ಇಂತಹ ಬರಹಗಳನ್ನು ಓದಿ ವಿದ್ಯಾರ್ಥಿಗಳ ಮನಸ್ಸು ಹೃದಯ ಹಾಳಾಗುವುದಿಲ್ಲವೇ? ವಿದ್ಯಾರ್ಥಿಗಳಷ್ಟೇ ಏಕೆ ಮಾನವಂತರು ಯಾರಾದರೂ ಶಂಬರನು ತನ್ನ ಉದ್ರಿಕ್ತ ಶಿಶ್ನವನ್ನು ತೋರಿಸುತ್ತಾ ತನ್ನ ತಾಯಿಯನ್ನು ಸುತ್ತು ಹಾಕುವುದರ ವರ್ಣನೆಯನ್ನು ಓದಿ ಅರಗಿಸಿಕೊಳ್ಳಬಲ್ಲರೆ? ಇದು perversity ಅಲ್ಲವೇ?
ಶ್ರೀಧರ್ ಪೈ ಹೇಳಿರುವಂತೆ Novel wit bad taste, protesters wit bad intention ಅನ್ನೊದು ಢುಂಢಿ ಕೃತಿಗೆ ಶೇ.100 ಅನ್ವಯಿಸುತ್ತೆ, ಆ ಕೃತಿಯ ಕುರಿತು ಇದಕ್ಕಿಂತ ಹೇಳಲು ಇದಕ್ಕಿಂತ ಬೇರೆ ಪದಗಳು ಸಿಗಲಿಕ್ಕಿಲ್ಲ ಅನ್ನೊದು ಕೃತಿ ಓದಿದ ನನ್ನ ಅನಿಸಿಕೆ.
ರಮ್ಮಿಗರು,ಅವರಂತವರು ನಮ್ಮ ಫಟ್ಪಾತ್ ಅಂಗಡಿಗಳಲ್ಲಿ ಸಿಗುವ ಚಕೋರಿ,ಸಂಚು,ಥ್ರಿಲ್,ಪೊಲೀಸ್ ನ್ಯೂಸ್ಗಳೆಲ್ಲ ವಿದ್ಯಾರ್ಥಿಗಳಿಗೆ ಸಿಗಲ್ಲ ಎನ್ನುವಷ್ಟು ಮುಗ್ದರೆ? ಅವುಗಳನ್ನು ನಿಷೇದಿಸಿ ಎಂದು ಹೋರಾಡಲು ಮನಸ್ಸಿಲ್ಲವೆ.
ಹಾಗೆ ನಿಷೇಧಿಸುವುದಾದರೆ ಮೊದಲು ಅಶ್ಲೀಲತೆಯನ್ನು ವಿಜೃಂಭಿಸುತ್ತಿರುವ ದೃಶ್ಯಮಾಧ್ಯಮಗಳು, ವೆಬ್ ಸೈಟ್ಗಳು, ಬ್ಲಾಗ್ಗಳನ್ನು ನಿಷೇಧಿಸಬೇಕು. ಮುದ್ರಣ ಮಾಧ್ಯಮ ಒಂದಿಷ್ಟಾದರೂ ಮಯಾಱದೆ ಉಳಿಸಿಕೊಂಡಿದೆ. ಅಲ್ಲಿ ಇಂತಹ ಕಾದಂಬರಿ ಪ್ರಕಟವಾಗುವುದು ಬೇಡ. ಆದರೆ ಪುಸ್ತಕದ ಮೇಲಿನ ನಿಷೇಧ ಹಿಂತೆಗೆದುಕೊಂಡರೆ ಬೇಕಿದ್ದವರು ಕೊಂಡು ಓದಬಹುದು.ಒಂದಿಷ್ಟು ಆರೋಗ್ಯಕರ ಚಚೆಱಗಳಾಗಬಹುದು. ಒಂದು ಸಮೂಹ ಮಾಧ್ಯಮದ ಪ್ರಸಾರಕ್ಕೂ ಆಯ್ಕೆಯ ಓದಿಗೂ ವ್ಯತ್ಯಾಸವಿರುತ್ತದೆ.
Again the discussion is diverging. Panditaradhya demanded that Dhundhee be serialized in news papers. Please keep this context when posting your comments in favor of pornography.
ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಪ್ರಕಟವಾಗುವುದು ಬೇಡವೆಂಬುದಷ್ಟೇ ನನ್ನ ಪ್ರತಿಕ್ರಿಯೆಯ ಸಾರಾಂಶ. ವಿನಾಕಾರಣ ನೀವು ತಪ್ಪಾಗಿ ಗ್ರಹಿಸಿ ‘ಯಜಮಾನಿಕೆ’ ಮಾಡುತ್ತಿದ್ದೀರ!ಅಶ್ಲೀಲ ವೆಬ್ ಸೈಟ್ಗಳನ್ನು ಮೊದಲು ನಿಯಂತ್ರಿಸಬೇಕೆಂಬುದೇ ನನ್ನ ಅಭಿಲಾಷೆ.ಆದರೆ ಒಂದು ಸಾಹಿತ್ಯ ಕೃತಿಯನ್ನು ನಿಷೇಧಿಸುವುದು ತಪ್ಪು!
“ಪತ್ರಿಕೆಯಲ್ಲಿ ಇದು ಧಾರಾವಾಹಿಯಾಗಿ ಪ್ರಕಟವಾಗುವುದು ಬೇಡವೆಂಬುದಷ್ಟೇ ನನ್ನ ಪ್ರತಿಕ್ರಿಯೆಯ ಸಾರಾಂಶ.”
Ok, this has already been said by Rammiga with greater clarity and deeper insight.
Krishnegowda, You missed the point. Chakori, Rati Vijnana etc are no doubt accessible to students thru roadside stalls. But news papers are delivered to home. Imagine a highschool student reading the sexually explicit scenes of Dhundhee at home in front of his mother. Isn’t that horrible? Stretching your argument a little further, some might argue for telecast of pornography in etv and udaya! They will give the same reason u gave: porn films and videos are available to students in roadside shops.
ಪುಗಸಟ್ಟೆ ಪ್ರಚಾರ 🙂