ಈ ದಿನದ ನಮ್ಮ ಪುಸ್ತಕ- ನೂತನ ಎಂ ದೋಶೆಟ್ಟಿ ಅವರ ಭಾಗೀರತಿ ಉಳಿಸಿದ ಪ್ರಶ್ನೆಗಳು.
ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ದೋಶೆಟ್ಟಿ ಅವರದು ಇದು ಎರಡನೆಯ ಕವನ ಸಂಕಲನ.
ಕಾಲವೆಂಬ ಮಹಾಮನೆ ಇವರ ಮೊದಲ ಸಂಕಲನ. ಮಾತಿನ ಮಹತ್ವವನ್ನು ಅರಿತು ಮೌನಕ್ಕೆ ಶರಣಾದೆ. ಆ ಮೌನದ ಧ್ಯಾನದಲ್ಲಿ ಹುಟ್ಟಿದ್ದು ಇದು ಎನ್ನುತ್ತಾರೆ.
ಶ್ರೀಮತಿ ನೂತನ ಎಂ ದೋಶೆಟ್ಟಿ ಅವರದು ಆರ್ದ್ರವೂ ಆಪ್ತವೂ ಆದ ಕಾವ್ಯಧ್ವನಿ, ನೇರವಾದ ಪ್ರಾಮಾಣಿಕವಾದ, ಹಿತಮಿತ ಮಾತಿನ ಅಭಿವ್ಯಕ್ತಿ ಅವರದ್ದು. ಅವರ ಕವಿತೆಗಳ ಲಯವೂ ನಿರ್ದುಷ್ಟವಾದುದಾಗಿದೆ.ಸಹಜವಾದ ಕುತೂಹಲದಿಂದ ಒಳ-ಹೊರಗಿನ ಪ್ರಪಂಚಗಳನ್ನು ವೀಕ್ಷಿಸುತ್ತಾ ಮಾನವೀಯ ನೆಲೆಯಲ್ಲಿ ನೂತನ ಅವರು ತಮ್ಮ ಸ್ಪಂದನಗಳನ್ನು ಸರಳ-ಸುಂದರವಾಗಿ ದಾಖಲಿಸುತ್ತಾರೆ. ಅವರ ಕಾವ್ಯ ಪ್ರಜ್ಞೆ ಮಾಗಿದ ಹಾಗೆ, ಅವರ ಅಭಿವ್ಯಕ್ತಿಯೂ ದೃಢಗೊಳ್ಳುವುದೆಂಬ ವಿಶ್ವಾಸ ನನಗಿದೆ. ತಮ್ಮ ಬರವಣಿಗೆಯಲ್ಲಿ ಎಲ್ಲೂ ಅಪ್ರಾಮಾಣಿಕವಾಗದ ಈ ಕವಿಗೆ ನನ್ನ ಹಾರ್ದಿಕ ಶುಭಾಶಯಗಳು.
-ಎಚ್.ಎಸ್.ವೆಂಕಟೇಶಮೂರ್ತಿ









Congratulations Nutan, Very happy to see your book in this Website.Our choicest BLESSINGS are always with you.Title of the book itself creats a sort of curiosity.But I have not yet finished reading this book fully.We wish you to bring many more books.Good luck.Your CHITHU & BHAVA