ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿಯರ್ ರಾಹುಲ್ ದ್ರಾವಿಡ್..

ನವೀನ ಸಾಗರ್ 

ಯೂನಿವರ್ಸಿಟಿ ಕನ್ವಿನ್ಸ್ ಮಾಡಬೇಕಿತ್ತು. ಇದು ಕೇವಲ ಗೌರವ ಡಾಕ್ಟರೆಟ್ ಅಲ್ಲ, ಇದು ನಿಮ್ಮ ಕ್ರಿಕೆಟ್ ಕುರಿತ ಸಂಶೋಧನೆಗಾಗಿಯೂ ಕೊಡ್ತಿರೋದು ಅಂತ.. 🙁

ಟೆಸ್ಟ್ ಗೆ ಬ್ರ್ಯಾಂಡ್ ಮಾಡಿದ್ದ ಕ್ರಿಕೆಟರ್ ಒಬ್ಬ ಒನ್ ಡೇ ಸ್ಪೆಷಲಿಸ್ಟ್ ಆಗಬಹುದು, ಟಿಟ್ವೆಂಟಿ ಆಡಬಹುದು, ಐಪಿಎಲ್ ಮ್ಯಾಚ್ ಗೆಲ್ಲಿಸಬಹುದು ಎಂಬ ಸಂಶೋಧನೆ ಮಾಡಿಲ್ವಾ ದ್ರಾವಿಡ್ ನೀನು?

ಕ್ರಿಕೆಟಲ್ಲಿ ಇಂಥವ್ರು ಇಂಥದ್ದೇ ಮಾಡ್ಬೇಕು ಅಂತಿಲ್ಲ.. ಸಂದರ್ಭ ಬಂದ್ರೆ, ಬ್ಯಾಟ್ಸ್ ಮನ್ ಮಾತ್ರ ಅನಿಸಿಕೊಂಡವ ವಿಕೆಟ್ ಕೀಪರ್ ಆಗಬಹುದು, ಆಫ್ ಸ್ಪಿನ್ ಬೌಲರ್ ಆಗಬಹುದು, ಇನ್ನಿಂಗ್ಸ್ ಓಪನ್ನೂ ಮಾಡ್ಬಹುದು, ಒನ್ ಡೌನ್ ಟೂ ಡೌನು ಫೈವ್ ಡೌನು ಎಲ್ಲಿಯೂ ಬ್ಯಾಟ್ ಮಾಡಬಹುದು ಅನ್ನೋದನ್ನೂ ನೀನೇ ಕಂಡ್ ಹಿಡಿದಿದ್ದು ಅಲ್ವಾ?

ಸ್ಲೆಡ್ಜರ್ ಗಳಿಗೆ, ಆಯ್ಕೆ ಮಂಡಳಿಯ ರಾಜಕೀಯಗಳಿಗೆ, ಮೌನದಿಂದ ಹಾಗೂ ಕೇವಲ ಆಟದಿಂದ ಉತ್ತರಿಸಬಹುದು ಅನ್ನೋದನ್ನೂ ಸಂಶೋಧಿಸಿ ತಿಳಿಸಿಕೊಟ್ಟಿದ್ದು ನೀನೇ ಅಲ್ವಾ?

ಕ್ರಿಕೆಟ್ ಸಭ್ಯರ ಆಟ ಹೌದಾ ಎಂಬ ಅನುಮಾನ ಬಂದಾಗೆಲ್ಲ ಆ ಅನುಮಾನ ಪರಿಹಾರ ಮಾಡುತ್ತಿದ್ದದ್ದು ಯಾವ ಸಂಶೋಧನೆಗೆ ಕಮ್ಮಿ? 2007ರ ವಿಶ್ವಕಪ್ ನಲ್ಲಿ ಬಾಂಗ್ಲಾ ಎದುರು ಸೋತು ಹೊರಬಿದ್ದಾಗ, ತಮೀಮ್ ಇಕ್ಬಾಲ್ ಮತ್ತು ಮುಷ್ಫಿಕರ್ ರಹೀಮ್ ಗೆ ನಿನ್ನ ಬ್ಯಾಟನ್ನೇ ಗಿಫ್ಟಾಗಿ ಕೊಟ್ಟಿದ್ಯಲ್ಲ, ಅದೆಂಥಾ ಥೀಸೀಸ್ ಗಳನ್ನೂ ನಿವಾಳಿಸಿ ಒಗೆಯೋ ಸಂದೇಶ ಕೊಟ್ಟಿತ್ತು ಅಲ್ವಾ?

ಜೀವನ ರಾಹುಲ್ ಎಂಬ ಹೆಸರು ಕೊಟ್ಟಾಗ ಅದನ್ನು ದ್ರಾವಿಡ್ ಆಗಿಸಿಕೋ ಗಾಂಧಿ ಆಗಿಸ್ಕೋಬೇಡ ಅನ್ನೋದನ್ನೂ ನೀನು ಜಗತ್ತಿಗೆ ತಿಳಿಸಿಕೊಟ್ಟದ್ದು ಒಂದು ಅಲಿಖಿತ ಥೀಸೀಸೇ ಅಲ್ವೇ?

ಟೆಸ್ಟ್ ಕ್ರಿಕೆಟ್ ನ ಜನ ಇನ್ನೂ ಗೌರವಿಸುವಂತೆ, ಪ್ರೀತಿಸುವಂತೆ ಮಾಡುವ ಹಾಗೆ ಪ್ರತಿ ಟೆಕ್ಸ್ಟ್ ಬುಕ್ ಶಾಟ್ಸ್ ಗಳನ್ನು ಇನ್ನಾದರೂ ಜೀವಂತ ಇರಿಸಿದೆಯಲ್ಲ.. ಕಮ್ಮಿ ಸಾಧನೆಯಾ ಅದು?

ನೀನು ಹೊಡೆದ ರನ್ ಬರೀ ರನ್ ಅಂದ್ಕೊಂಡಿದೀಯ ನೀನು. ನಿನ್ನ ಡಿಫೆನ್ಸಿವ್ ಶಾಟ್ಸ್, ಬಾಲ್ ಬಿಡುವಿಕೆ, ದಂಡಿಸುವಿಕೆ, ಗ್ರೌಂಡ್ ಶಾಟ್ಸ್, ಕವರ್ ಡ್ರೈವ್, ಸ್ಕ್ವೇರ್ ಕಟ್ಸ್, ಸ್ವೀಪ್ಸ್, ನೂರೈವತ್ತು ಕಿಲೋಮೀಟರ್ ವೇಗದ ಚೆಂಡನ್ನು ಅಕ್ಷರಶಃ ಬ್ಯಾಟಡಿಯಲ್ಲಿ ನಿಲ್ಲಿಸುವಿಕೆ ಇದೆಲ್ಲ ಕೇವಲ ಆಟ ಅಂತ ನೀನಂದ್ಕೊಂಡಿದೀಯ.

ಆದರೆ ಅವೆಲ್ಲವೂ ನಿನ್ನ ಥೀಸೀಸ್ ನ ಒಂದೊಂದು ಪುಟಗಳು..

ನೀನು ಬ್ಯಾಟಲ್ಲೇ, ಬಿಹೇವಿಯರಲ್ಲೇ ಎಲ್ಲವನ್ನೂ ಬರೆದಾಗಿ ಹೋಗಿದೆ.. ನೀನೇ ಒಂದು ವಿಶ್ವವಿದ್ಯಾಲಯ. ಡಾಕ್ಟರೆಟ್ ಗೆ ಗೌರವ ಸಲ್ಲಿಸೋಕೋಸ್ಕರ ನಿನಗೆ ಕೊಡ್ತಿರೋದು
ಅಂತ ಕನ್ವಿನ್ಸ್ ಮಾಡ್ಬೇಕಿತ್ತು..

‍ಲೇಖಕರು admin

27 January, 2017

3 Comments

  1. anupama prasad

    ನಿಮ್ಮ ದನಿಯೊಂದಿಗೆ ನನ್ನ ದನಿಯೂ ಇದೆ. ರಾಹುಲ್ ದ್ರಾವಿಡ್ ಅನ್ನೊ ವ್ಯಕ್ತಿತ್ವದ ಆಳವೇ ಅಂತದ್ದು. ಹೌದು. ಆಟದಲ್ಲೂ; ವ್ಯಕ್ತಿತ್ವದಲ್ಲು ಆತ ಬರೆದಾಗಿದೆ.
    ಅನುಪಮಾ ಪ್ರಸಾದ್.

  2. Shama, Nandibetta

    ವಾಹ್ ನವೀನ್… ನಿಮ್ಮ ಇತ್ತೀಚಿನ ಬರಗಳ ಸಾಲಿನಲ್ಲಿ ಅತ್ಯುತ್ತಮ ಎನಿಸಿದ ಬರಹ… ಒರಿಜಿನಲ್ ‘ನವೀನ’ ಶೈಲಿ. ಚಿಕ್ಕ, ಚೊಕ್ಕ ಪ್ರತಿ ಅಕ್ಷರ ಪಕ್ಕಾ.. ಒಂದಕ್ಷರ ಹೆಚ್ಚಿಲ್ಲ, ಒಂದು ಕಡಿಮೆಯಿಲ್ಲ ಅನ್ನೋ ಥರದ್ದು, ಬಹಳಿಷ್ಟ ಆತು

    • Naveen Sagar

      Thank you. We post illi share aagirodu eega nodide. Adhke late reply

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading