ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಟೊಟೊ ಪುರಸ್ಕಾರ’ಕ್ಕೆ ಆಹ್ವಾನ

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ ೨೦೨೪ ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. 

ಇಪ್ಪತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಟೊಟೊ ಪುರಸ್ಕಾರವು ಈ ಸಂದರ್ಭದಲ್ಲಿ ಪ್ರಶಸ್ತಿಯ ನಗದು ಬಹುಮಾನದ ಮೊತ್ತವನ್ನು ೬೦,೦೦೦ ರೂಪಾಯಿಗಳಿಗೆ ಹೆಚ್ಚಿಸಿದೆ.

ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು ಹಾಗೂ ೧೮ ರಿಂದ  ೨೯  ವರ್ಷ ವಯಸ್ಸಿನವರಾಗಿರಬೇಕು. 

ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು. ಈ/ ಮೂರು/ ಪ್ರಕಾರಗಳಿಂದ  ಒಬ್ಬರನ್ನು  ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಪ್ರತಿವರ್ಷದಂತೆ ಕನ್ನಡದ ಹಿರಿಯ  ಬರಹಗಾರರ  ಸಮಿತಿಯು  ಮಾಡಲಿದೆ. 

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ:  ೨೦ ಸಪ್ಟೆಂಬರ್, ೨೦೨೩

ವಿವರಗಳಿಗಾಗಿ http://totofundsthearts.blogspot.com

ಟಿ.ಎಫ್.ಎ.  ಸಂಸ್ಥೆಯು  ಆಂಗೀರಸ  ‘ಟೊಟೊ’  ವೆಲ್ಲಾನಿಯ  ಸ್ಮರಣಾರ್ಥ  ೨೦೦೪  ರಲ್ಲಿ  ಸ್ಥಾಪಿತವಾಯಿತು.   ಕಲೆಗಳ  ಬಗ್ಗೆ  ಗಾಢವಾದ  ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೊಟೊರವರ  ಅಕಾಲಿಕ  ಮರಣವು  ಅವರ  ಕುಟುಂಬ  ಮತ್ತು  ಸ್ನೇಹಿತರನ್ನು  ಈ  ಸಂಸ್ಥೆಯ  ಸ್ಥಾಪನೆಗೆ  ಪ್ರೇರೇಪಿಸಿತು.  ಈ  ಮೂಲಕ  ಯುವ  ಪ್ರತಿಭೆಗಳು  ತಮ್ಮ  ಕಲಾತ್ಮಕ  ಅಭಿವ್ಯಕ್ತಿಯನ್ನು  ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ  ಆಶಯವಾಗಿದೆ.

‍ಲೇಖಕರು avadhi

4 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading