ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ


ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹ ಶ್ರೀ ಕೆ. ಪಿ. ರಾವ್ ಅವರ ಸಾಧನೆಗಳನ್ನು ಕುರಿತು ಟಿ. ಜಿ. ಶ್ರೀನಿಧಿ ಬರೆದ ಕಿರುಪುಸ್ತಕ ‘ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್’ ಏಪ್ರಿಲ್ 20ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕದ ಜೊತೆಗೆ ಇನ್ನೂ ನಾಲ್ಕು ಕೃತಿಗಳು ಆ ದಿನ ಬಿಡುಗಡೆಯಾಗುತ್ತಿವೆ.
ಉದಯಭಾನು ಸುವರ್ಣ ಪುಸ್ತಕಮಾಲೆಯ ಅಂಗವಾಗಿ ಈ ಪುಸ್ತಕಗಳು ಪ್ರಕಟವಾಗುತ್ತಿವೆ. ಈ ಮಾಲೆಯ ಅಂಗವಾಗಿ ಒಟ್ಟು ಐವತ್ತು ಸಾಧಕರನ್ನು ಪರಿಚಯಿಸುವ ಪುಸ್ತಕಗಳನ್ನು ಹೊರತರಲಾಗುತ್ತಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ನಾರಾಯಣ ಗೌಡ ಹಾಗೂ 79ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಕೋ. ಚೆನ್ನಬಸಪ್ಪ ಅವರುಗಳು ಸಮಾರಂಭದಲ್ಲಿ ಭಾಗವಹಿಸುವರು.
ದಿನಾಂಕ : 20-04-2013 ರಂದು ಶನಿವಾರ, ಸಂಜೆ 5.30 ಗಂಟೆಗೆ
ಸ್ಥಳ: ಉದಯಭಾನು ಕಲಾಸಂಘದ ಸಾಂಸ್ಕೃತಿಕ ಭವನ, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-19. (ಬಸವನಗುಡಿ ರಸ್ತೆ, ರಾಮಕೃಷ್ಣಮಠ ಹಿಂಭಾಗ)
ಶ್ರೀ ಕೆ. ಪಿ. ರಾವ್ ಅವರ ಬಗ್ಗೆ:
ಶ್ರೀ ಕೆ. ಪಿ. ರಾವ್, ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು (‘ನುಡಿ’ ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ.
1970ರ ದಶಕದಿಂದಲೇ ಅಕ್ಷರಗಳ ಒಡನಾಟದಲ್ಲಿರುವ ಶ್ರೀ ಕೆ. ಪಿ. ರಾಯರು ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ ಇವರದೇ ಸಾಧನೆ. ಮುಂದೆ ಇದೇ ತರ್ಕ ಬಳಸಿ ಅವರು ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಸಿದರು. ಇದನ್ನೇ ಕೊಂಚ ಬದಲಾಯಿಸಿ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ ರೂಪುಗೊಂಡಿತು. ಕನ್ನಡದ ತಂತ್ರಾಂಶಗಳ ಬಗ್ಗೆ ಯಾರೂ ಹೆಚ್ಚಾಗಿ ಕೇಳಿಯೇ ಇಲ್ಲದ ಕಾಲದಲ್ಲಿ ಕನ್ನಡದ ಪದಸಂಸ್ಕಾರಕ ತಂತ್ರಾಂಶ ‘ಸೇಡಿಯಾಪು’ ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆಯೂ ಶ್ರೀ ಕೆ. ಪಿ. ರಾಯರದು.

 

‍ಲೇಖಕರು avadhi

20 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading