ಟಿ ಎನ್ ಸೀತಾರಾಮ್
ದೀಪಾವಳಿ ನನಗೆ ಮುಂಚಿನಿಂದ ಸಂಭ್ರಮ, ಗೆಲುವುಗಳನ್ನು ತರುತ್ತಿದ್ದ ಕಾಲ…… ಆಗ ೧೮ ತುಂಬಿತ್ತು… ಕಾಲೇಜ್ ನಲ್ಲಿದ್ದೆ… ಲಂಕೇಶ್ ಮೇಷ್ಟ್ರ ಪ್ರಿಯ ಶಿಷ್ಯ…
ಪ್ರಜಾವಾಣಿಯವರು ದೀಪಾವಳಿ ನಾಟಕಸ್ಪರ್ಧೆ ಮತ್ತು ಕಥಾ ಸ್ಪರ್ಧೆ ಮಾಡುತ್ತಿದ್ದರು.
ನಾನು ನಾಟಕವೊಂದನ್ನು ಬರೆದು ‘ ಯಾರಾದರೇನಂತೆ ‘ ಎಂದು ಹೆಸರಿಟ್ಟು ಗುಟ್ಟಾಗಿ ಸ್ಪರ್ಧೆಗೆ ಕಳಿಸಿದೆ… ಮೇಷ್ಟ್ರೂ ಕೂಡ ‘ಪೋಲೀಸರಿದ್ದಾರೆ ಎಚ್ಚರಿಕೆ ‘ ನಾಟಕವನ್ನು ಗುಟ್ಟಾಗಿ
ಕಳಿಸಿದ್ದರು…

ಗುಣಮಟ್ಟದಲ್ಲಿ ನನ್ನ ನಾಟಕ ಮೇಷ್ಟ್ರ ನಾಟಕದಲ್ಲಿ ಅರ್ಧ ಕೂಡ ಇರಲಿಲ್ಲ .. ಆದರೂ ಆಗ ತೀರ್ಪುಗಾರರು ನಮ್ಮಿಬ್ಬರಿಗೂ ಮೊದಲ ಬಹುಮಾನ ಅರ್ಧರ್ದ ಹಂಚಿಬಿಟ್ಟರು… !
ಮೇಷ್ಟ್ರಿಗೆ ಎಷ್ಟು ಕೋಪ ಬಂದಿತ್ತು ಎಂದರೆ ಪ್ರಜಾವಾಣಿ ವಿರುದ್ಧ ಪ್ರತಿಭಟನೆ ಮಾಡಲು ನನ್ನನ್ನೇ ಕರೆದಿದ್ದರು… !! ನಾನು ಹೋಗಿದ್ದೆ ಕೂಡ… !!
೧೯೬೯ ರ ಪ್ರಜಾವಾಣಿ ದೀಪಾವಳಿ ಸಂಚಿಕೆಯಲ್ಲಿ ಅವೆರಡು ನಾಟಕಗಳು ಈಗಲೂ ಸಿಗುತ್ತದೆ …
ಆಗ ಬಂದ ೫೦೦ ರೂಪಾಯಿ ನನ್ನ ಜೀವನದ ಮೊದಲ ಸಂಪಾದನೆ….






ಬಹಳ ಕುತೂಹಲಕರ ಮಾಹಿತಿ. ಈ ಪ್ರಸಂಗದಲ್ಲಿ ಗುರುವಿನ ಜೊತೆ ಬಹುಮಾನ ಹಂಚಿಕೊಂಡಿದ್ದು ಸಂತೋಷದ ವಿಷಯವಾದರೂ,ಒಂದು ಬಹುಮಾನ ಅಥವಾ ಪ್ರಶಸ್ತಿಯನ್ನು ಇಬ್ಬರಿಗೆ ಹಂಚುವ ಪದ್ಧತಿ ಸರಿಯಲ್ಲ.
ನಿಜಕ್ಕೂ ಇದು ಆಶ್ಚರ್ಯದ ಸಂಗತಿ. ಆದರೂ ಗುರುವಿನ ಜೊತೆ ಸ್ಪರ್ಧೆ ಕುತೂಹಲವನ್ನುಂಟುಮಾಡಿತು.
ನೆನಪುಗಳ ಹಾದಿ ಸುಂದರವಾಗಿದೆ