– ಟಿ ಎನ್ ಸೀತಾರಾಂ
ನಾನು ಚಿಕ್ಕವನಿದ್ದಾಗ ಒಮ್ಮೆ ಅಪ್ಪನ ಜೇಬಿನಿಂದ ಒಂದು ರೂಪಾಯಿ ಕದ್ದಿದ್ದೆ.. ಶ್ರಾವಣದ ಹಬ್ಬದ ದಿನಗಳು.. ಅಷ್ಟೊಂದು ಹಣ ಖರ್ಚು ಮಾಡಲು ಹೆದರಿಕೆ ಆಗಿ ವಾಪಸ್ ಹಾಕಿಬಿಟ್ಟೆ.. ಅಕ್ಕ ಅದನ್ನು ಕಳ್ಳತನ ಅಲ್ಲವ ಎಂದರು.. ಕಷ್ಟದ ದಿನಗಳಲ್ಲಿ ಕದಿಯುವ ಬುದ್ಧಿ ಬಂದದ್ದು ಕ್ರೌರ್ಯ ಅಂದರು ಅಮ್ಮ.. ನಾನು ವಾಪಸ್ ಹಾಕಿದ್ದೆ.. ಆದರೂ ನನಗೆ ಅಳು ಬಂತು. ]]>




ಮರಾಠಿಯ ಪ್ರಸಿದ್ಧ ಹಿರಿಯ ಲೇಖಕ ಗಂಗಾಧರ ಗಾಡ್ಗೀಳರ `ಒಂದು ರೂಪಾಯಿ’ ಎಂಬುದೊಂದು ಕತೆಯಿದೆ. ಅದರಲ್ಲಿ ಹುಡುಗನೊಬ್ಬನಿಗೆ ಅವರಪ್ಪ ಒಂದು ರೂಪಾಯಿ ಪಾಕೆಟ್ ಮನಿ ಕೊಡುತ್ತಾನೆ. ಆದರೆ ಆ ಕಾಲದಲ್ಲಿ ಅದು ಎಷ್ಟು ದೊಡ್ಡ ಮೊತ್ತವೆಂದರೆ ಅದನ್ನು ಖರ್ಚು ಮಾಡಲು ಆ ಹುಡುಗನಿಗೆ ಸಾಧ್ಯವೇ ಆಗುವುದಿಲ್ಲ. ಅವನ ಅಪ್ಪ ಅವನಿಗದನ್ನು ಪಾಕೆಟ್ ಮನಿಯಾಗಿ ಕೊಟ್ಟರೆಂದು ಊರಲ್ಲಿ ಯಾರೂ ನಂಬುವುದಿಲ್ಲ. ಎಲ್ಲರೂ ಅದು ಹುಡುಗ ಮಾಡಿದ ಕಳವಿನ ರೂಪಾಯಿಯೆಂದೇ ತಿಳಿಯುತ್ತಾರೆ. ಸ್ನೇಹಿತನ ಜೊತೆ ಅವನು ಇಡೀ ಊರು ಸುತ್ತಿದರೂ ಅವನಿಗೆ ಅದನ್ನು ಖರ್ಚು ಮಾಡಲು ಸಾಧ್ಯವಾಗುವುದಿಲ್ಲ. ಒಂದು ರೂಪಾಯಿ ಸಿಕ್ಕಿದರೆ ಏನೇನು ಕೊಳ್ಳಬಹುದೆಂದು ಕನಸು ಕಂಡಿದ್ದನೋ ಅದೆಲ್ಲವನ್ನೂ ಪಡೆಯುವ ಹುಮ್ಮಸಿನಲ್ಲಿ ಹೊರಟವನಿಗೆ ಬೇರೆಯದೇ ಆದ ವಾಸ್ತವವೊಂದು ಎದುರಾಗುತ್ತದೆ. ಹಣ ಮತ್ತು ಮನುಷ್ಯನ ಸಂಬಂಧದ ಹಲವು ಮಗ್ಗಲುಗಳನ್ನು ಶೋಧಿಸುವ ತುಂಬ ಸಂಕೀರ್ಣವಾದ ಕತೆ.
ಸೀತಾರಾಮ್ ಅವರ ಟಿಪ್ಪಣಿ ಓದಿ ಈ ಕತೆ ನೆನಪಾಯಿತು.
ವಿವೇಕ ಶಾನಭಾಗ
How a real life incident can be turned into a brilliant story is shown by Vivek’s comments.