ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಝೆನ್ ಟೀಮ್’ಗೆ ಆರು..

 

– ಉಗಮ ಶ್ರೀನಿವಾಸ್

ರಂಗಭೂಮಿ ಮೂಲಕ ಪಯಾ೯ಯ ಚಳವಳಿ ಎಂಬ ಘೋಷ ವಾಕ್ಯದೊಂದಿಗೆ ತುಮಕೂರಿನಲ್ಲಿ ನಾವು ಆರಂಭಿಸಿದ ಝೆನ್ ಟೀಮ್ ಎಂಬ ನಾಟಕ ತಂಡ ಇದೀಗ ಯಶಸ್ವಿಯಾಗಿ 6 ವಷ೯ಗಳನ್ನು ಪೂರೈಸಿದೆ. ಸುಮಾರು 60 ಕ್ಕೂ ಹೆಚ್ಚು ಪ್ರಯೋಗಾತ್ಮಕ ನಾಟಕಗಳು, ನೀನಾಸಂ, ನಮ್ ಟೀಮ್, ಶಿವಸಂಚಾರ, ಥಿಯೇಟರ್ ಸಮುರಾಯ್ಸ್, ಆಟಮಾಟ ಸೇರಿದಂತೆ ರಾಜ್ಯದ ಹಲವಾರು ರೆಪಟ೯ರಿ ತಂಡಗಳು ನಮ್ಮಲ್ಲಿಗೆ ಬಂದು ನಾಟಕಗಳನ್ನು ಪ್ರದಶಿ೯ಸಿವೆ. ಪ್ರತಿ ಪ್ರದಶ೯ನಕ್ಕೆ ಸರಾಸರಿ 700 ಮಂದಿ ವೀಕ್ಷಿಸಿದ ಹೆಗ್ಗಳಿಕೆ ನಮ್ಮದು. ಈಗಾಗಲೇ ಸಮುದಾಯ ನಾಟಕೋತ್ಸವ, ಚಳಿಗಾಲ ನಾಟಕೋತ್ಸವಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದೇವೆ.

ಇಂಟಿಮೇಟ್ ರಂಗಸಜ್ಜಿಕೆಯಲ್ಲಿ`ಕನ್ನಡ ರಾಮಾಯಣ’ ಎಂಬ ಹಳೆಗನ್ನಡ ನಾಟಕವನ್ನು ಪ್ರದಶ೯ನವನ್ನು ಆರಂಭಿಸುವ ಮೂಲಕ ನಮ್ಮ ಅಭಿಯಾನ ಆರಂಭಿಸಿದ್ದು ಈಗ 6 ವಷ೯ಕ್ಕೆ ಬಂದು ನಿಂತಿದೆ. ಯಹೂದಿ ಹುಡುಗಿ, ಜುಗಾರಿ ಕ್ರಾಸ್, ಸಂಸಾರದಲ್ಲಿ ಸನಿದಪ, ಜೀಕೆ ಮಾಸ್ತರರ ಪ್ರಣಯಪ್ರಸಂಗ, ಊರುಕೇರಿ, ರಹಸ್ಯ ವಿಶ್ವ, ಅಲ್ಲಮನ ಬಯಲಾಟ, ಹೇಮರೆಡ್ಡಿ ಮಲ್ಲಮ್ಮ, ಸೀರೆ, ಈ ನರಕ ಈ ಪುಲಕ, ನಟನಾರಾಯಣಿ, ವಾಟರ್ ಸ್ಟೇಷನ್, ಶೂದ್ರ ತಪಸ್ವಿ, ಆಕಾಶ್ ಭೇರಿ, ಮಚೆ೯ಂಟ್ ಆಫ್ ವೆನ್ನೀಸ್, ಕಂತು, ನಮ್ಮೊಳಗಿನ ಬಷೀರ್, ದಾರಾಶಿಖೋ, ಸೂಯ೯ನ ಕುದುರೆ, ಬಯಲುಸೀಮೆ ಕಟ್ಟೆ ಪುರಾಣ. ಇತ್ಯಾದಿ.

ನಮ್ಮ ಚಟುವಟಿಕೆಗಳನ್ನು ಗುರುತಿಸಿದ ಜಿಲ್ಲಾಡಳಿತ ಕಳೆದ ವಷ೯ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿತು. ಕಳೆದ 6 ವಷ೯ಗಳಿಂದ ನಮ್ಮನ್ನು ನಮ್ಮ ನಾಟಕಗಳನ್ನು ಮೆಚ್ಚಿದ, ಪ್ರೋತ್ಸಾಹಿಸಿದ, ವಿಮಶಿ೯ಸಿದ ಎಲ್ಲರಿಗೂ ವಂದನೆ.

‍ಲೇಖಕರು G

22 March, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading