ಬೆಂಗಳೂರೇ ಹಾಗೆ. ತಾಯಿಯಂತಲ್ಲ, ಪ್ರೇಯಸಿಯಂತಲ್ಲ, ಸಖನಂತಲ್ಲ. ತುಂಬ ದಿನ ಇಲ್ಲಿದ್ದು ಮರಳಿದ ನಂತರವೂ ನೆನಪಾಗುವುದಿಲ್ಲ. ಅದು ನೆಲೆಯಲ್ಲ, ನೆಲವಲ್ಲ. ಈ ಊರಿಗೆ ನೆನಪುಗಳನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಇದೊಂದು ಕರ್ಮಭೂಮಿ. ಇಲ್ಲಿಗೆ ಮಂದಿ ದುಡಿಯುವುದಕ್ಕೆ ಬರುತ್ತಾರೆ. ಕೈದಿಗಳಂತೆ ದುಡಿಯುತ್ತಾರೆ. ಮತ್ತೆ ತಮ್ಮೂರಿಗೆ ಮರಳಬೇಕು ಎಂದು ಹಂಬಲಿಸುತ್ತಾರೆ. ಆದರೆ, ಬೆಂಗಳೂರು ಅವರನ್ನು ಮರಳಲು ಬಿಡುವುದಿಲ್ಲ. ಅಭಿಮನ್ಯುವಿನ ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಈ ಚಕ್ರವ್ಯೂಹದ ಒಳಗೆ ಹೊಕ್ಕವರು ಹೋರಾಡಿಯೇ ಮಡಿಯಬೇಕು. ಯುದ್ಧ ಗೆದ್ದ ಸುದ್ದಿ ತಿಳಿಯುವ ಮೊದಲೇ ಅಸುನೀಗಬೇಕು.
-ಒಂದು ಕಾದಂಬರಿ, ಒಂದು ಪುಟ್ಟ ಕೈಪಿಡಿ, ಒಂದೂರಿನ ಆತ್ಮಕತೆ- ಹೀಗೆ ಮೂರು ಪುಸ್ತಕಗಳ ಸಿದ್ಧತೆಯಲ್ಲಿದ್ದೇನೆ. ತನ್ಮಯತೆ, ಏಕಾಗ್ರತೆ ಮತ್ತು ಶ್ರಮ- ಮೂರೂ ಬೇಕು. ಹೀಗಾಗಿ ಕೆಲವು ದಿನಗಳ ಮಟ್ಟಿಗೆ ವಿರಾಮ. ಎಲ್ಲರಿಗೂ ಶುಭವಾಗಲಿ. ಮಿಸ್ಸಿಂಗ್ ಯು ಆಲ್.






olleyadagali. nimma kadambari, putta kaipidi mattu ondurina atmakategagi atyanta kutuhaladinda kaayuttene. namaskara.
ವೆರಿ ಗುಡ್, ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಮೂರು ಹೊಸಪುಸ್ತಿಕೆ , ಜೋಗಿ ನಿಮ್ಮ ಪುಸ್ತಿಕೆ ಬೇಗನೆ ಬರಲಿ ಎಂದು ಆಶಿಸುವೆ ,ನಿಮ್ಮ ಹೊಸ phose ಚೆನ್ನಾಗಿದೆ
ವ್ಹಾ ಜೋಗಿ ಅವರ ಬರೆಹವೇ ಹಾಗೆ. ಇಬ್ಬನಿಯಂತೆ, ಮಳೆ ಬಿದ್ದ ಮಣ್ಣ ವಾಸನೆಯಂತೆ, ಬಿರು ಬೇಸಿಗೆಯಲ್ಲಿ ನದಿ ಸಿಕ್ಕಂತೆ. ಬರವಣಿಗೂ ಮುನ್ನದ ಪೀಠಿಕೆಯೇ ತಂಗಾಳಿಯಂತೆ ಇದೆ. ಜೋಗಿ ನೀವು ಬರೆಯುತ್ತಲೇ ಇರಿ. ಓದುವ ಸುಖ ನಮ್ಮದಾಗಲಿ.
ವಂದನೆಯೊಂದಿಗೆ-
ಉಗಮ