
ಜೋಗಿ
ಹತ್ತು ವರುಷ ವಿದೇಶದಲ್ಲಿದ್ದವನು ಒಂದು ರಾತ್ರಿ ಬೆಂಗಳೂರಿಗೆ ಬರುತ್ತಾನೆ. ಅವನ ಪ್ರಕಾರ ಅವನ ಮನೆ ಯಾವುದೋ ರಸ್ತೆಯ ಯಾವುದೋ ಕ್ರಾಸಲ್ಲಿದೆ. ಅವನು ಅಪರಾತ್ರಿ ಅಲ್ಲಿಗೆ ಬಂದು ನೋಡಿದರೆ ಅಲ್ಲಿ ಮನೆಯಿಲ್ಲ. ಆ ನಂಬರೂ ಇಲ್ಲ. ಹೀಗಾಗಿ ತನ್ನ ಮನೆಯ ಬೀಗದ ಕೈಯನ್ನು ಜೋಬಲ್ಲಿಟ್ಟುಕೊಂಡು ಬಂದವನಿಗೆ ಉಳಿದಿರುವುದು ಮನೆಯಲ್ಲ, ಬರೀ ಬೀಗದ ಕೈ ಮಾತ್ರ.
ಹೀಗೆ ಶುರುವಾಗುವ ನಾಟಕ ಬೆಂಗಳೂರಿನ ಭೂಗತ ಜಗತ್ತು, ರಿಯಲ್ ಎಸ್ಟೇಟು, ಸಂಸಾರ, ಕಟ್ಟುಕತೆಗಳನ್ನು ಒಂದು ಅನನ್ಯ ತನ್ಮಯತೆಯೊಂದಿಗೆ ಕಣ್ಮುಂದೆ ಇಡುತ್ತಾ ಹೋಗುತ್ತದೆ. ಎಲ್ಲಿಂದ ಶುರುವಾಯಿತೋ ಅಲ್ಲಿಗೇ ಬಂದು ನಿಲ್ಲುವ ನಾಟಕದಲ್ಲಿ ಕಳ್ಳರು, ಸುಳ್ಳರು, ಸಾಧ್ವಿಗಳೂ, ಸಭ್ಯರು ತಮ್ಮೆಲ್ಲ ಘನತೆಯೊಂದಿಗೆ ಹಾಜರಾಗುವ ಈ ನಾಟಕ ನಾನು ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯುತ್ತಮ ನಾಟಕವೂ ಹೌದು.
ಬೆಂಗಳೂರು ಇಲ್ಲಿ ತನ್ನ ದೈನ್ಯ, ಉಡಾಫೆ, ಧಿಮಾಕು, ತಟವಟ, ನಿಜಾಯಿತಿಗಳನ್ನು ಕಿಂಚಿತ್ತೂ ವಿರೂಪಗೊಳಿಸದೇ ಪ್ರಕಟಪಡಿಸಿಕೊಂಡಿದೆ.







ನಾಟಕದ ಚೌಕಟ್ಟೇ ವಿಸ್ಮಯಗೊಳಿಸುವಂತಿದೆ.
ಈ ನಾಟಕದ ಒಂದು ಭಾಗವನ್ನು ‘ಹೊಸ ಮನುಷ್ಯ’ ಮಾಸಿಕದಲ್ಲಿ ಓದಿದ್ದೆ. ಉಳಿದ ಭಾಗವನ್ನು ಓದಬೇಕೆಂದು ತೀವ್ರವಾಗಿ ಅನಿಸಿತ್ತು. ಅಷ್ಟು ಕುತೂಹಲಕಾರಿ.