ಶರಣು ಶರಣಯ್ಯ ಶರಣು ಬೆನಕಾ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕಾ
ಪಿಬಿಎಸ್ ಕಂಠದಲ್ಲಿ ಈ ಹಾಡು ನಮ್ಮ ಇಡೀ ಹಳ್ಳಿಯನ್ನೇ ಆವರಿಸುತ್ತಿತ್ತು. ಆಗ ಸಮಯ ಸರಿಯಾಗಿ ಎರಡು ಗಂಟೆ. ಎರಡೂವರೆಗೆ ಸಿನಿಮಾ ಶುರುವಾಗುತ್ತದೆ ಅನ್ನುವುದಕ್ಕೆ ಇದೇ ಪೀಠಿಕೆ. ಇದನ್ನು ಹಾಡಿದ್ದು ಪಿಬಿಎಸ್ ಅನ್ನುವುದೂ ಆಗ ಗೊತ್ತಿರಲಿಲ್ಲ. ಈ ಹಾಡು ಕೇಳುತ್ತಿದ್ದಂತೆ ನಾವೆಲ್ಲ ರೋಮಾಂಚಗೊಂಡು ಭಾರತ್ ಚಿತ್ರಮಂದಿರದತ್ತ ಓಡುತ್ತಿದ್ದೆವು. ಎಷ್ಟೋ ವರುಷಗಳ ತನಕ ಸಿನಿಮಾ ಅಂದರೆ ಈ ಹಾಡು ಮಾತ್ರ ಅಂದುಕೊಂಡುಬಿಟ್ಟಿದ್ದೆವು. ಎಷ್ಟೋ ಹುಡುಗರು ಈ ಹಾಡು ಕೇಳುತ್ತಾ, ಸಿನಿಮಾವನ್ನು ಮನಸ್ಸಿನೊಳಗೆ ಕಲ್ಪಿಸಿಕೊಳ್ಳುತ್ತಾ ಒಮ್ಮೆಯಾದರೂ ಐವತ್ತು ಪೈಸೆ ಒಟ್ಟುಮಾಡಿ ಚಿತ್ರಮಂದಿರದೊಳಗೆ ಕಾಲಿಡಬೇಕು ಅಂತ ಕನಸು ಕಾಣುತ್ತಿದ್ದರು.
ಈಗಲೂ ಈ ಹಾಡು ಕೇಳಿದರೆ ಮೂವತ್ತೆಂಟು ವರುಷ ಹಿಂದಕ್ಕೆ ಓಡುತ್ತದೆ ಮನಸ್ಸು. ಈಗ ನಮ್ಮೂರಲ್ಲಿ ಚಿತ್ರಮಂದಿರಕ್ಕೆ ಹುಡುಗರು ಹೋಗುವುದಿಲ್ಲ. ಈ ಹಾಡು ಮಾತ್ರ ಕೇಳುತ್ತಲೇ ಇದೆ.






ಈ ಹಾಡು ಎಲ್ಲರಿಗೂ ಪರಿಚಯ ಸರ್… ‘ಮೂಷಿಕ ವಾಹನ ಮೋದಕ ಹಸ್ತ…’ ಎಂದು ಪ್ರಾರಂಭವಾಗಿಬಿಟ್ಟರೆ ಮೈ ನವಿರೇಳುತ್ತಿತ್ತು. ಸ್ಪೀಕರ್ ಮೈಕ್ ಸೆಟ್ ಮೂಲಕ ಪ್ರತಿ ಕಾರ್ಯ ಕ್ರಮದಲ್ಲಿ ನಮ್ಮ ಹಳ್ಳಿಯನ್ನೇ ಆವರಿಸಿಕೊಳ್ಳುತ್ತಿದ್ದ ಹಾಡಿದು. ಈಗಲೂ ಕೇಳುತ್ತಿರುತ್ತೇನೆ. ಎಲ್ಲಾ ಹಾಡುಗಳೂ ಅದ್ಭುತವಾಗಿವೆ. ಅದ್ಭುತ ಕಂಠ ಹೊಂದಿದ, ಮೇರು ಕಲಾವಿದರಾದ ಪಿ.ಬಿ. ಶ್ರೀನಿವಾಸ್ ರವರ ಆತ್ಮಕ್ಕೆ ಶಾಂತಿ ದೊರೆಯಲಿ…
naanu odi beleda navalagundada touring-talkies kooda melina satyakke apavaadavenalla!! – alloo cinema aarambahakke munna barutidda geetegalige omkaara-vaagutiddaa geetiye “Mooshaka vahana….”- ee prasanaga nenedu eega nangoo trill agittide JOGI !!!
Gan garudiga pb avaru hadid hadugalella matte matte kelbeku anisuvantahavu.avar aatmakke shanti sigali.
ರಾಜ್ ಕಪೂರ್-ಮುಖೇಶ್…ರಾಜ್-ಪಿ.ಬಿ.ಎಸ್ ಒಂದೇ ರೀತಿಯಲ್ಲಿ ಕಾಡಿದವರು.ರಾಜ್ ಕುಮಾರ್ ಹೊರತಾಗಿಯೂ ಪಿ.ಬಿ.ಎಸ್ ಇದ್ದರು.ರಾಜ್ ಕಪೂರ್ ಹೊರತಾಗಿಯೂ ಮುಖೇಶ್ ಇದ್ದರು.ನಮ್ಮ ಬಾಲ್ಯದ ಶ್ರವಣ ಸಾಮ್ರಾಜ್ಯದಲ್ಲಿ ಗಟ್ಟಿಯಾಗಿ ಕುಳಿತಿರುವ ಪಿ.ಬಿ.ಶ್ರೀನಿವಾಸ್ ರವರ ಆತ್ಮಕ್ಕೆ ಶಾಂತಿ ಸಿಗಲಿ.
Almost all of us,born in 60’s,70’s,even 80’s, brought up hearing great PBS songs.His songs made us to know,what is MELODY, He is an Icon in our hearts forever.when ever we hear his songs,we feel relaxed.That is the sign of real ARTIST.
ರಾಜಕುಮಾರ್ ಅವರು ತಾವೇ ಹಾಡಿದ ಬಹಳಷ್ಟು ಹಾಡುಗಳು ನಮ್ಮ ನೆನಪಿನಿಂದ ಮರೆಯಾಗಿ ಹೋಗಿವೆ. ಆದರೆ, ರಾಜಕುಮಾರ್ ಅವರಿಗಾಗಿ ಪಿ ಬಿ ಶ್ರೀನಿವಾಸ ಹಾಡಿರುವ ಸುಮಧುರ ಹಾಡುಗಳು ಇಂದಿಗೂ ನಮ್ಮ ಮನದಲ್ಲಿ ಅಚ್ಚೊತ್ತಿದಂತೆ ಕುಳಿತಿವೆ.