ನಾನೊಮ್ಮೆ ರುಟೀನ್ ಚೆಕಪ್ ಗೆ ಅಂತಾ ಹೋಗಿದ್ದೆ (ಮುಂಬೈನಲ್ಲಿ). ಅಲ್ಲಿನ ನರ್ಸ್ ಗಳು “ಜೈ ಮಾತಾ ದಿ” ಮತ್ತು “ಜೈ ಶ್ರೀಕೃಷ್ಣ” ಅನ್ನೋ ಎರಡು ನಾಮಗಳನ್ನ ಹೇಳ್ಕೊಂಡು ಓಡಾಡೋದು ಗಮನಿಸ್ದೆ. ಆಶ್ಚರ್ಯ ಆಗೋಯ್ತು, ಕ್ಲಿನಿಕ್ಕಿನಲ್ಲಿ ಇದೇನಿದು ರಿಲೀಜಿಯೊಸಿಟಿ ಅಂತಾ. ಅಷ್ಟೊತ್ತಿಗೆ ನನಗೆ ಕ್ಲೋಸ್ ಆಗಿಬಿಟ್ಟಿದ್ದ ನರ್ಸೊಬ್ಳು ಆ ಕ್ಲಿನಿಕ್ಕಿನಲ್ಲಿದ್ಲು. ಏನು ಕಥೆ ಅಂತಾ ಕೇಳ್ದೆ. ಅವ್ಳು ಹೇಳಿದ್ದು ಕೇಳಿದ್ಮೇಲೆ ಶಾಕ್ ಆಗಿಹೋಯ್ತು. ಭ್ರೂಣ ಹೆಣ್ಣೊ ಗಂಡೊ ಅನ್ನೋದನ್ನ ಗುಟ್ಟಾಗಿ ಹೇಳೋಕ್ಕೆ ಬಳ್ಸೋ ಕೋಡ್ ವರ್ಡ್ಸ್ ಆಗಿದ್ವು ಅವು. ಭ್ರೂಣದ ಲಿಂಗ ಬಹಿರಂಗಪಡಿಸೋದು ನಿಷಿದ್ಧ ಅಂತಾದ ಮೇಲೆ ಈ ದಾರಿ ಹುಡುಕಿಕೊಂಡಿದ್ರು. ಗೊತ್ತಾಯ್ತಲ್ಲ, ಜೈ ಮಾತಾ ದಿ ಅಂದ್ರೆ ಹೆಣ್ಣು ಭ್ರೂಣ ಕಣ್ರೀ ಅನ್ನೋ ಸಿಗ್ನಲ್.
ಮಾಲತಿ ಎಸ್





0 Comments