ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಜುಗಾರಿ ಕ್ರಾಸ್’ ನಲ್ಲಿ ಬಿಸಿ ಚರ್ಚೆ: ಬರಗೂರು ಯಾರು??

ವಿಶ್ವ ಕನ್ನಡ ಸಮ್ಮೇಳನ ಯಾರಿಗೆ ಸೇರಿದ್ದು ಎಂದು ಜೋಗಿ ಪ್ರಶ್ನೆ ಕೇಳಿದ್ದರು. en ಆರ್ ನಾರಾಯಣ ಮೂರ್ತಿ ಅವರನ್ನು ಉದ್ಘಾಟನೆ ಕರೆಯುವುದರ ಬಗ್ಗೆ ಬಂದ ಲೇಖನವಿದು. ಅದು ಇಲ್ಲಿದೆ.

ಜುಗಾರಿ ಕ್ರಾಸ್ ಚರ್ಚೆಗೆ ಇರುವ ವೇದಿಕೆ. ಈ ಚರ್ಚೆಯಲ್ಲಿ ಈ ಟಿ ವಿ ಚಾನಲ್ ನ ಮುಖ್ಯಸ್ಥರಾದ ಸುರೇಂದ್ರನಾಥ್, ಸುರಾನಾ ಕಾಲೇಜಿನ ಮುಖ್ಯ ಗ್ರಂಥಪಾಲಕರಾದ ಡಾ ಬಿ ಆರ್ ಸತ್ಯನಾರಾಯಣ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಅಭಿಪ್ರಾಯವೂ ಬೇಕು. ಬನ್ನಿ, ಭಾಗವಹಿಸಿ..

 

soori writes-

Jogi, I would like to extend your argument.

Let us look at what Mr Baraguru has done to Kannada and Karnataka before he asks what Mr Narayanamurthy has done. I remember that Mr Baragur was the president for Kannada Development Board. Is it right or am I hallucinating? Has he done anything worth remembering? I don’t know how many still remember (or knew/know) that he was the president.

His best achievement was he being close to the first family of Kannada film industry and was eternally installed himself at the doorsteps trying his hard luck to get some dates and their endorsements for his films. He calls himself as a film maker. In Kannada. Let me ask him. How many Kannadigas have seen his films. Or has he himself ever watched his film second time?

He could only influence to declare his Ekalavya as children’s film and get an award as against other really good children’s films. His films were more whimsical and products of creatively unsound mind than artworks to say least. (Well, this is not a forum to discuss and review his films.)

He calls himself a writer. When was the last time he ever wrote something worthwhile. And how many copies of his book were/are sold? Has his writing ever touched an ordinary life in Karnataka? It is high time he stopped thinking that he is an authority and can direct everything that happens in Karnataka.

Kannada is not his authority alone. Karnataka and Kannada have grown beyond his comprehension. It belongs to all who live in Karnataka. I would welcome even if Karnataka Government asks Premji to inaugurate. Haven’t they contributed to the GDP of Karnataka? If thousands of ordinary lives in Karnataka ate two meals a day, is because of these people. Let us all work together and make life a better thing to live. And make Karnataka a place to live. Let us not further fragment Karnataka on minor issues.

(I am sorry. I know I should have written in Kannada. But my system has lost the Kannada script and will take some time to reinstall the script.)

ಬಿ ಆರ್ ಸತ್ಯನಾರಾಯಣ ಅಭಿಮತ

ಬರಗೂರರು ಸಾಹಿತಿಯ ಕೈಯಿಂದಲೇ ಉದ್ಘಾಟನೆಯಾಗಬೇಕೆಂದು ಹಠ ಹಿಡಿದಿಲ್ಲ. ಒಬ್ಬ ಜಾನಪದ ಕಲಾವಿದನಿಂದಲೂ ಉದ್ಘಾಟನೆ ಮಾಡಿಸಲಿ ಎಂದಿದ್ದಾರೆ. ಇದನ್ನು ನೀವೆಲ್ಲಾ ಮುಚ್ಚಿಟ್ಟು ಏಕಮುಖವಾಗಿ ಬರಗೂರರನ್ನು ವಿರೋಧಿಸುತ್ತಿದ್ದೀರಿ. (ಇತ್ತೀಚಿಗೆ ಇನ್ಫೊಸಿಸ್ 400ಕ್ಕೂ ಹೆಚ್ಚು ಕೋಟಿ ತೆರಿಗೆ ವಂಚನೆ ಆಪಾದನೆ ಹೊತ್ತಿದೆ.).

ಒಬ್ಬ ಸಾಮಾನ್ಯ ಕನ್ನಡದ ರೈತ ಉದ್ಘಾಟನೆ ಮಾಡಿದರೂ ತೊಂದರೆಯೇನಿಲ್ಲ. ಸ್ಥಾನಗೌರವದಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರಾದರೂ ಉದ್ಘಾಟನೆ ಮಾಡಬಹುದಿತ್ತು.

ಸಾಲುಮರದ ತಿಮ್ಮಕ್ಕ, ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿ, ಲಂಡನ್ ಮೇಯರ್ ನೀರಜ್ ಪಟೇಲ್ ಯಾರಾದರೂ ಆಗಬಹುದಲ್ಲವೇ? ಬರಗೂರರು ಏಕೆ ನಾರಾಯಣಮೂರ್ತಿಯವರನ್ನು ವಿರೋಧಿಸಿದ್ದರು ಎನ್ನುವುದಕ್ಕಿಂತ ನೀವು ನಾರಾಯಣಮೂರ್ತಿಯವರೇ ಉದ್ಘಾಟನೆ ಮಾಡಲಿ ಎಂಬ ಹಠಕ್ಕೆ ಬಿದ್ದವರಂತೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯವಾಗುತ್ತಿದೆ

++

ಬರಗೂರು ರಾಮಚಂದ್ರಪ್ಪನವರು ಎತ್ತಿರುವ ವಿಷಯಗಳ ಸಾದಕ ಬಾದಕಗಳನ್ನು ಕುರಿತು ನೀವು ಬರೆಯದೆ, ವೈಯಕ್ತಿಕವಾಗಿ ಅವರ ಮೇಲೆ ಈ ರೀತಿ ಧಾಳಿ ಮಾಡಿರುವುದು ನಿಮ್ಮ ವಾದದ ದೌರ್ಬಲ್ಯವನ್ನು ತೋರಿಸುತ್ತದೆ. (ಜೊತೆಗೆ ಅನಾವಶ್ಯಕವಾಗಿ ರಾಜ್ ಕುಟುಂಬದ ಹೆಸರನ್ನು ವ್ಯಂಗ್ಯವಾಗಿ ಎಳೆದು ತಂದಿದ್ದೀರಿ. ಇಲ್ಲಿ ಅದರ ಅವಶ್ಯಕತೆ ಖಂಡಿತ ಇರಲಿಲ್ಲ.)

Has he done anything worth remembering? I don’t know how many still remember (or knew/know) that he was the president. ಬರಗೂರು ರಾಮಚಂದ್ರಪ್ಪ ಏನು ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲ ಎಂದರೆ ಬೇರಾರಿಗೂ ಗೊತ್ತೇ ಇಲ್ಲ ಎಂದು ಅರ್ಥವೇ? ಇಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಮೊದಲ ವರ್ಷದ ಎರಡು ಸೆಮಿಸ್ಟರ್ ನಲ್ಲಿ ಕನ್ನಡವನ್ನು ಕಲಿಯುವಂತೆ ಮಾಡಿಸಿದ್ದು ಬರಗೂರರು ಅಧಿಕಾರದಲ್ಲಿ ಇದ್ದಾಗಲೇ! ಆದರೆ ನಂತರ ಆಳುವವರು ಕಾಲೇಜು ಆಡಳಿತ ಮಂಡಳಿಯವರ ಲಾಬಿಗೆ ಶರಣಾಗಿ ಅದನ್ನು ವ್ಯವಸ್ಥಿತವಾಗಿ ನಿಲ್ಲಿಸಿದ್ದು ಎಲ್ಲರಿಗೂ ಗೊತ್ತಿದೆ. ನಿಮಗೆ ಗೊತ್ತಿಲ್ಲ ಎಂದರೆ, ( don’t know how many still remember (or knew/know) that he was the president.) ಅದು ನಿಮ್ಮ ಅಜ್ಞಾನ ಹಾಗೂ ಅರೆಬರೆ ಜ್ಞಾನದ ಅಹಂಕಾರವಲ್ಲದೆ ಬೇರೇನೂ ಅಲ್ಲ


‍ಲೇಖಕರು G

3 March, 2011

12 Comments

  1. kantharaju

    Narayan Murthy is not a kannadiga, he could have alone upheld the values of kannada, but he is an agent of corporate world, he turned the table around the people who want to destroy the cultural values of places.

  2. achyuta kumar

    soori baragoorannu haniyuva bharadalli narayanamoorthy premji galannu kannadada makkalige annahakalu avatarisiruva pavadapurushara reethi bimbisalu prayatnisuttiruudu majavagide. ee pavadapurusharu soft ware vayparigalu , kannadada hudugaru avara angadi kelasagararu. kesamadiddake sambala kodtare ashte.
    adkkinta hchhenu illa .baragooru yaru anta netalli kelidare uttarasikkola . dinapatrikeyalli keli uttara sigabahudu

  3. anyamanaska

    satyanarayana avara abhiprayakke.. nanna bembala..
    heege ondu vishyavanne tiruchi, maremachi pratipadiso (dur)buddivantare..
    baraguru enu madiddare endu tiliyuva yava soujanya torada intha mandi adhara rahitavagi virodhistare.. avara manastige hidiva kannadi idu..
    duradrushta.. inthavara sankhye hecche ide..

  4. sadananda

    niv helodu sari anyamanaskare , sadhrana sahitigala ondu gumpu vayvastitavagi ee kelasamaduttide .evarellara adagutana ee netgalu .endu janara munde barada nadina yava vishayakko pratikriyasada tamma kate kavanagalanne chapparisuva majjige huli partigalu .

  5. Padyana Ramachandra

    ಲೇಖನದ ಕೆಳಗೆ ಕಂಡ ಮಾಹಿತಿಗಾಗಿ ಶ್ರೀ. ಜೋಗಿಯವರಿಗೆ ವಂದನೆಗಳು.
    ———-
    ಕನ್ನಡದ ಕುರಿತಾದ ಎಲ್ಲ ಕಾರ್ಯಕ್ರಮಗಳೂ ಸಾಹಿತ್ಯ ಸಮ್ಮೇಳನ ಎಂದು ತಪ್ಪು ತಿಳಿಯುವ ಸಾಹಿತಿಗಳು ನಮ್ಮಲ್ಲಿದ್ದಾರೆ. ಕನ್ನಡದ ಕೀರ್ತಿಯನ್ನು ಮೆರೆಸುವವರು ಕೇವಲ ಬರಹಗಾರರು ಎಂದು ಸಾಹಿತಿಗಳ ಬಳಗ ತಪ್ಪು ತಿಳಿದಂತಿದೆ. ನಮ್ಮಲ್ಲಿ ಸಾಹಿತಿಗಳಿಗಿಂತ ಅಮೂಲ್ಯವಾದ ಸೇವೆ ಸಲ್ಲಿಸಿದ ಲಕ್ಷಾಂತರ ಮಂದಿ ಸಿಗುತ್ತಾರೆ. ಸಾವಿರಾರು ಮಂದಿಯ ಪ್ರಾಣ ಉಳಿಸಿರುವ ವೈದ್ಯರು, ಕನ್ನಡ ಪ್ರೀತಿಯನ್ನು ಬೆಳೆಸಿರುವ, ಬೆಳೆಸುತ್ತಾ ಬಂದಿರುವ ಅಧ್ಯಾಪಕರು, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಬ್ಯಾಂಕ್ ಉದ್ಯೋಗಿ, ಕನ್ನಡದ ಕವಿಗಳ ಸಾಲುಗಳನ್ನು ಆಟೋರಿಕ್ಷಾದ ಹಿಂದೆ ಬರೆದುಕೊಂಡು ಹೆಮ್ಮೆಪಡುವ ಆಟೋಡ್ರೈವರ್, ಅತ್ಯುತ್ತಮ ಇಂಜಿನಿಯರ್‌ಗಳು, ಅಧಿಕಾರಿಗಳು, ಗುಮಾಸ್ತರು, ಕನ್ನಡ ಹಾಡನ್ನು ಕೇಳುತ್ತಾ, ಕನ್ನಡ ಸಿನಿಮಾ ನೋಡುತ್ತಾ ತನ್ನ ಪಾಡಿಗೆ ಹೊಲದಲ್ಲಿ ದುಡಿಯುವ ರೈತ- ಇವೆರೆಲ್ಲರೂ ಕನ್ನಡದ ಕಟ್ಟಾಳುಗಳೇ. ಹಾಗೆ ನೋಡಿದರೆ ಒಬ್ಬ ಲೇಖಕನಿಗಿಂತ ವ್ಯಾಪಕವಾಗಿ ಇವರೆಲ್ಲ ಕನ್ನಡದ ಕೆಲಸ ಮಾಡುತ್ತಿರುತ್ತಾರೆ. ಸುಮ್ಮನೆ ನೆನಪಾಗುವ ಹೆಸರು; ಮೂಡಬಿದರೆಯ ಆಳ್ವಾ ಕಾಲೇಜಿನ ಮೋಹನ್ ಆಳ್ವಾ, ಪುತ್ತೂರಿನ ಕರ್ನಾಟಕ ಸಂಘದ ಪುರಂದರ ಭಟ್ಟರು, ಊರಿಂದೂರಿಗೆ ಸಂಚರಿಸುತ್ತಾ ಸ್ಕೂಲುಗಳಲ್ಲಿ ಉಚಿತವಾಗಿ ಕನ್ನಡದ ಗೀತೆಗಳನ್ನು ಹಾಡುತ್ತಾ ಸಾಗುತ್ತಿದ್ದ ಬೆಂಡರವಾಡಿ ಕೃಷ್ಣಶರ್ಮ, ಎಲ್ಲಾ ಕನ್ನಡದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಾ, ಕನ್ನಡ ಪುಸ್ತಕ ಕೊಂಡು ಓದಿ, ಲೇಖಕರು ಮಂಗಳೂರಿಗೆ ಬಂದರೆ ಮನೆಗೆ ಕರೆಯಿಸಿಕೊಂಡು ಒಳ್ಳೆಯ ಸತ್ಕಾರ ನೀಡುವ ಶ್ರೀನಿವಾಸ ದೇಶಪಾಂಡೆ, ಮೊಗಸಾಲೆ ಎಂಬ ಪುಟ್ಟ ಊರಲ್ಲಿ ಒಳ್ಳೆಯ ಲೈಬ್ರರಿಯನ್ನು ಕಟ್ಟಿಕೊಟ್ಟು ಅಲ್ಲೊಂದು ಜಾಗೃತಿ ಹುಟ್ಟಿಸಿದ ನಾ. ಮೊಗಸಾಲೆ, ತಮ್ಮ ಅಂಗಡಿಗೆ ಬರುವ ಗಿರಾಕಿಗಳಿಗೆ ಆ ದಿನ ಕರ್ನಾಟಕದಲ್ಲಿ ಏನೇನಾಯಿತು, ಮಹತ್ವದ ಸಂಗತಿಗಳೇನು ನಡೆದವು ಅನ್ನುವುದನ್ನು ತಮ್ಮ ಭಾಷೆಯಲ್ಲಿ ವಿವರಿಸುತ್ತಿದ್ದ ಬಂಟ್ವಾಳದ ಕಾಮತ್- ಹೀಗೆ ಪ್ರಸಿದ್ಧಿಯ ಆಸೆಯಾಗಲೀ, ದುಡ್ಡಿನ ಹಂಬಲವಾಗಲೀ ಇಟ್ಟುಕೊಳ್ಳದೇ ನೆಮ್ಮದಿಯಾಗಿರುವ ಮಂದಿ ಪ್ರತಿ ಊರಲ್ಲೂ ಸಿಗುತ್ತಾರೆ.
    ————-
    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

  6. ಶ್ರೀವತ್ಸ ಜೋಶಿ

    ವರ್ಷಗಳ ಹಿಂದೆ ನಮ್ಮ ಮನೆಗೆ ಹೊಸದಾಗಿ ರೆಫ್ರಿಜರೇಟರ್ ತಂದ ಸಂದರ್ಭದಲ್ಲಿ ಪ್ರಿಡ್ಜ್ ಯಾವ ಬಣ್ಣದ್ದಿರಬೇಕು ಎಂದು ಭಾರೀ ಚರ್ಚೆ, ಮನೆಯಲ್ಲಿರುವ ಐದು ಮಂದಿಯೊಳಗೆ! ಒಬ್ಬೊಬ್ಬರದೂ ಒಂದೊಂದು ಬಣ್ಣದತ್ತ ಒಲವು, ಅಥವಾ ಅದಕ್ಕಿಂತ ಪ್ರಖರವಾಗಿ, ಇನ್ನೊಬ್ಬರು ಸೂಚಿಸಿದ್ದ ಬಣ್ಣದ ಬಗ್ಗೆ ತಕರಾರು. ‘ಕಾಮನಬಿಲ್ಲಿನಂತೆ ಏಳು ಬಣ್ಣಗಳ ಪಟ್ಟೆಗಳನ್ನು ಬಳಿದು ಫ್ರಿಡ್ಜ್ ತಯಾರಿಸ್ರಪ್ಪಾ’ ಎಂದು ಗೋದ್ರೆಜ್/ವೋಲ್ಟಾಸ್/ಕೆಲ್ವಿನೇಟರ್ ಕಂಪನಿಗಳಿಗೆ ಸಲಹೆ ಕೊಡಬೇಕಾಗಬಹುದೇನೋ ಎನ್ನುವಷ್ಟರ ಮಟ್ಟಿಗೆ ಚರ್ಚೆಯ ಬಿಸಿ ಏರಿತ್ತು. ಕೊನೆಗೂ ಬಿಳಿ ಬಣ್ಣದ ಪ್ದಿಡ್ಜ್ ಬಂತು (ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಅಣ್ಣನ ಸಮರ್ಧನೆ). ಚರ್ಚೆ ತಣ್ಣಗಾಯಿತು, ಪ್ರಿಡ್ಜ್‌ನಲ್ಲಿಟ್ಟ ಆಹಾರಪದಾರ್ಥಗಳಂತೆ. 🙂

    ಫ್ರಿಡ್ಜ್ ಬಣ್ಣದ ಬಗ್ಗೆ ಐದು ಮಂದಿಯೊಳಗೆ ಸಹಮತ ಮೂಡಿಸುವುದೇ ಕಷ್ಟ.ಇನ್ನು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಕರು ಯಾರಾಗಬೇಕು ಎಂಬ ವಿಷಯದಲ್ಲಿ ಐದು ಕೋಟಿ ಕನ್ನಡಿಗರಲ್ಲಿ ಸಹಮತ ನಿರೀಕ್ಷಿಸುವುದು!? ನೋಡುತ್ತಿರಿ, ಈ ಚರ್ಚೆಯೂ ಶೀಘ್ರದಲ್ಲೇ ‘ತಣ್ಣಗಾಯಿತು, ಪ್ರಿಡ್ಜ್‌ನಲ್ಲಿಟ್ಟ ಆಹಾರಪದಾರ್ಥಗಳಂತೆ’ ಎನ್ನುವಂತಾಗುತ್ತದೆ. ಚರ್ಚೆ ಮಾತ್ರವಲ್ಲ, ನಮ್ಮಲ್ಲಿ ಹೆಚ್ಚಿನವರ ಕನ್ನಡ/ಕನ್ನಡಿಗ ಪ್ರಜ್ಞೆಯೂ!

    [ಈ ಪ್ರತಿಕ್ರಿಯೆ ಒಂದು ರೀತಿಯ ನಿರಾಶಾವಾದ/ವ್ಯಂಗ್ಯ/ಕುಹಕ/ನಿರ್ಲಿಪ್ತತೆ ಎಂದೆಲ್ಲ ನಿಮಗೆ ಅನಿಸಬಹುದು. ಅದು ನಿಮ್ಮನಿಮ್ಮ ದೃಷ್ಟಿಕೋನ. Perfectly fine, ಗೌರವಿಸುತ್ತೇನೆ. ಆದರೆ Just an observation ರೀತಿಯಲ್ಲಿ ನಾನಿದನ್ನು ಬರೆದಿದ್ದೇನೆ. ಇದು ನನ್ನ ದೃಷ್ಟಿಕೋನ 🙂 ]

  7. ರೇವಣ್ಣ

    ನಾರಾಯಣ ಮೂರ್ತಿ ಸಾಯೇಬ್ರು ಯಾವಾಗಾನಾರ ಕನ್ನಡ್ದಾಗೆ ಮಾತಾಡಿರೋದ್ನ ಯಾರಾದ್ರೂ ಕಂಡವ್ರಾ? ಕೇಳವ್ರಾ? ಆಯಪ್ಪ್ನ ಹೇನ್ತಿ ಸುದಾಮೂರ್ತಿ ಕ್ವನೇಪಕ್ಸ ವಂದೆರ್ಡು ಕತೆನಾರ ಬರುದವ್ರೆ. ಆ ತಾಯಿ ಕನ್ನುಡ್ದಾಗೆ ಮಾತಾರ ಆಡುತವ್ರೆ. ಈಯಪ್ಪ ಬರೇ ಇಂಗ್ಲೀಸಿನಾಗೆ ಬೋದ್ಸದು. ಈವಯ್ಯ ಪಂಪಬಾರುತದ ಬಗ್ಗೆ ಮಾತಾಡಿದ್ರೂ “ಲುಕ್ಕಿಯರ್…ಧಿಸ್ ಗಯ್ ಪಂಪ..” ಅಂತೇಳಿ ಸುರುವಚ್ಕತದೆ. ಅಂತದ್ರಲ್ಲಿ ಅವುರ್ನೇನು ಕರುಸಾದು ಸಮ್ಮೇಳನಕ್ಕೆ?

    ಇತ್ಲಾಗೆ ಬರಗೂರು “ಬೇಕು ಸಾಯಿತಿಗಳು, ಕರುಸ್ರಿ ಸಾಯಿತಿಗಳು” ಅಂತ ಯೇಳೋದಕ್ಕೂ ಕಾರ್ಣ ಐತೆ. ಅದು ವೃದ್ಧಾಪ್ಯವೇತ್ನ ತಯಾರು ಮಾಡಿಕಣ್ತೈತೆ.

    ನಾನೇಳೋಂಗೆ ಸಾಯಿತಿಗಳೂ ಬ್ಯಾಡ, ಮೂರ್ತಿಗಳಂತೂ ಬ್ಯಾಡ್ವೇ ಬ್ಯಾಡ. ನಂ ಆರ್.ಅಶೋಕುನ್ನ ಕರುಸುದ್ರೆ, ಸುರೇಷ್ಕುಮಾರು ನಾಚ್ಕಂಡು ಓಡೋವಂಥ ಭಾಸ್ಣ ಬಿಗೀತನೆ. ಕರುಸ್ರಲ್ಲ ಅವುನ್ನ.

    ಇಂತಿ ಪಿರೂತಿಯ
    ರೇವಣ್ಣ

  8. ಸಂದೀಪ್ ಕಾಮತ್

    ಸನ್ಮಾನ್ಯ ಯಡಿಯೂರಪ್ಪನವರ ಜೊತೆ ದೊಡ್ದ ಪಟಲಾಂ ಹೋಗುತ್ತೆ ಸಮ್ಮೇಳನಕ್ಕೆ. ಅವರದ್ದು ಬರೀ ರಾಜಕೀಯ ಉದ್ದೇಶ. ಅವರೆಲ್ಲರೂ ವೇದಿಕೆಯಲ್ಲೇ ಮೆರೀತಾರೆ, ಆದ್ರೆ ಬರಗೂರು ಸೇರಿದಂತೆ ಯಾರೂ ಈ ಪಟಲಾಂ ದು ಕನ್ನಡಕ್ಕೆ ಏನು ಕೊಡುಗೆ ಅಂತ ಕೇಳೋದೆ ಇಲ್ಲ.

  9. sadananda

    shanta narayana moortyine deepa belagali en iga ? karnatga en agayte annodu mukya alva nani depa belgudre nandanavana agutta ? netalli koootu matadoo chootiyagalu irovargu enu agolla sir hemamalini ramaswamy rajeev chandrasheekar ivaradde kitkallilla ivaren madtare sir

  10. sandhya

    hi,

    Vishwa kannada sammelana is about the culture of karnataka and literature is part of kannada culture. so it can be inagurated by anyone from the cultural arena. Basically Narayana Murthy is a business man and No he has not done anything for Kannada culture or karnataka samskruti. Suri we lived and ate two square meals even before N.M and Premji. They started their venture purely as business and everything else is a side effect. Have you ever heard of any preferance for kannadigas in their offices?

  11. abhilash

    I support the argument of Mr.Sathyanarayan. Narayana Murthy is one cunning businessman, who has benifitted from the largess of Govt.Then out of blue moon he says we need to do away with kannada in school, so that he wil have cheap labours available to his company work.He along with industrial houses pitching for PVT universities,are trying to have bonded labours for their company work.he send his son & daughter to US,since he dont want them to be here.He talks of corporate ethics,He is just like Rathan Tata,One day the facade of true narayana murthy wil come out.

    He is modern mecaly, trying to kill the kannada language.No matter who agrees or not, these IT guys are killing the language slowlly,by either picking all out of station guys into their company & full bangalore with outsiders, or by encourageing english in their campus.Can you show a kannada sangha in infosys? They say since we are in MNC business we cannot afford to have kannada sign boards inside the campus.But he wants all the benifits from GOvt Of Karnataka.The quantum of benefits he derived from state is much larger than the employment he offered to kannadigas in karnatka.He employee them in low paying jobs & on contract basis.There also he has valid reasons again the best resource needs to be recruited.

    So everey one will keep their mouth shut & accept their hara kiri.When will kannadigas change …..god knows…… The day we loose bangalore is not far away….., already the tamilians & reddy loby in Delhi is trying to declare it as union territory,like Delhi….

    So Hail the NRN & Yeddi

  12. veda

    ಮಾನ್ಯರೇ ಚರ್ಚೆಯ ವಿಷಯಕ್ಕೆ ಇಂತಹ ವಿಷಯಗಳನ್ನು ಎತ್ತಿ ಪ್ರಚೋದಿಸುವ ಬದಲು . ಇಂತಹ ಸಮ್ಮೇಳನಗಳಲ್ಲಿ ಹೊಸದಾಗಿ ಏನೇನೆಲ್ಲ ಮಾಡಬಹುದು ಎಂಬ ಆಸಕ್ತರ ವಿಚಾರಗಳನ್ನು ಸಂಗ್ರಹಿಸಿ ಅದನ್ನು ಸಂಬಂದ ಪಟ್ಟವರಿಗೆ ತಿಳಿಯಪಡಿಸಿ ತನ್ಮೂಲಕ ಕೆಲವಾದರೂ ಉತ್ತಮ ಕೆಲಸವನ್ನು ಮಾಡುವ ಪ್ರಯತ್ನವನ್ನು ಮಾಡುವುದನ್ನು ಬಿಟ್ಟು .ನಾರಾಯಣಪ್ಪ ಯಾಕೆ , ರಾಮಪ್ಪ ಯಾರು ಅವರ ಹಿರಿಮೆ ಗರಿಮೆಗಳನ್ನು ಚರ್ಚಿಸುತ್ತ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ
    ಸದ್ಯಕ್ಕೆ ಈ ಸಮ್ಮೇಳನಗಳು ಸಾದಿಸುವುದಾದರು ಏನು ಅನ್ನೋದೇ ಒಂದು ದೊಡ್ಡ ಪ್ರಶ್ನೆ ಯಾಗಿದೆ . ನನಗೆ ತಿಳಿದ ಹಾಗೆ ಯಾವ ಹೊಸ ಹೊಸ ಕಾರ್ಯಕ್ರಮಗಳೂ ಇರುವುದಿಲ್ಲ. ಸಮ್ಮೇಳನದ ಹೆಸರಲ್ಲಿ ದುಡ್ಡು ಬಾಚುವ ಮಂದಿಯಷ್ಟೇ ಜಾಸ್ತಿ ಕಣ್ಣಿಗೆ ಕಾಣಿಸುವುದು. ಕನ್ನಡ ಸಮ್ಮೇಳನದ ಹೆಸರಿನಲ್ಲಿ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ಪ್ರಬಂದ,ಕಥೆ,ಕವನ ಸ್ಪರ್ದೆ ಏರ್ಪಡಿಸಲಿ ಹೊಸ ಹೊಸ ಯುವ ಬರಹಗಾರರನ್ನು ವೇದಿಕೆಗೆ ಪರಿಚಯಿಸಲಿ. ಕನ್ನಡ ಮಾದ್ಯಮದಲ್ಲಿ ಓದುವರನ್ನು , ಓದಿ ಸಾದನೆಗೈದವರನ್ನು ಗುರುತಿಸಿ ಪ್ರೋತ್ಸಾಹಿಸಲಿ .. ಹೀಗೆ ಹೊಸ ಏಳ್ಗೆಯ ಕಡೆ ಮುಖ ಮಾಡುವುದ ಬಿಟ್ಟು ಅದೇ ಕುತರ್ಕ ವಿವಾದಗಳು ,ಅದೇ ಜನಪ್ರಿಯ ಸಾಹಿತಿಗಳನ್ನು ಕರೆಯಿಸುವುದು , ಅದೇ ನಗೆ ಪಾಟಲು!! ಕಾರ್ಯಕ್ರಮಗಳು . ಯಾವುದರಲ್ಲೂ ಹೊಸತನವಿಲ್ಲ , ಹೊಸ ಪ್ರಯತ್ನಗಳಿಲ್ಲ. ಪ್ರತಿ ಸಮ್ಮೇಳನಕ್ಕೂ ಹೊಸ ವಿವಾದ ,ಪ್ರಯೋಜನಕ್ಕೆ ಬಾರದ ಚರ್ಚೆಗಳು ಇತ್ಯಾದಿ ಇತ್ಯಾದಿ ..ಅಷ್ಟೇ . ಇಂತಹ ಸಭೆ ಸಮಾರಂಭಗಳು ಬೇಜಾರು ತಂದಿವೆ .ಬರೀ ಬೂಟಾಟಿಕೆ ಮಂದಿ , ಹಿಂದೆ ಬೆನ್ನು ಇರಿಯುವವರು ಮುಂದೆ ಹಲ್ಲು ಕಿಸಿಯುವವರು . ಇದಕ್ಕೆಲ್ಲ ಪರಿಹಾರವೇ ಇಲ್ಲವೇ ಅಂತ ಅನ್ನಿಸ್ಬಿಡುತ್ತೆ. ಅದರ ಜೊತೆ ಇಂತಹ ಚರ್ಚೆಗಳೂ ಅರ್ಥ ಹೀನವೆನಿಸಿಕೊಳ್ಳುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading