ಭಗವಾನ್ ಅವರ ಹೇಳಿಕೆಗಳು ವಾದ ವಿವಾದಗಳನ್ನು ಹುಟ್ಟುಹಾಕುತ್ತಿರುವ ಬೆನ್ನಿನಲ್ಲಿಯೇ ಭಗವಾನ್ ಅವರ ಸಾಹಿತ್ಯಕ್ಕೆ ಅಕಾಡೆಮಿ ಪ್ರಶಸ್ತಿ ಘೋಷಣೆ ಆಗಿದೆ.
ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳೂ ಬರುತ್ತಿವೆ. ಅಂತಹ ಕೆಲವು ಅಭಿಪ್ರಾಯಗಳು ಇಲ್ಲಿವೆ.
ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಚರ್ಚೆ ವಿಷಯಾಧಾರಿತವಾಗಿರಲಿ, ಅನಗತ್ಯ ವ್ಯಕ್ತಿ ನಿಂದನೆ ಸಲ್ಲ.
ಮಾನ್ಯ ಅಧ್ಯಕ್ಷರೆ,
2012 ವರ್ಷದ್ದು ಆಗಿ ಹೋಯಿತು ಇರಲಿ, ಆದರೆ ಮುಂದಿನ ವರ್ಷದಿಂದ ಲಾಗೂ ಆಗುವಂತೆ ನಮ್ಮ ಈ ಮನವಿಯನ್ನು ವಿನಯದಿಂದ ಪರಿಶೀಲಿಸಬೇಕಾಗಿ ಆಗ್ರಹ. ಅಕಾಡಮಿಯ ವರ್ಷದ ಪ್ರಶಸ್ತಿಗಳನ್ನು ತಮ್ಮ ಪ್ಯಾನೆಲ್ ಸಿದ್ಧಪಡಿಸಿದ ಮೇಲೆ ಅದನ್ನು ನಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿ ನಮಗೆ ತಕರಾರು (ಅಕಸ್ಮಾತ್ ಇದ್ದರೆ) ಸಲ್ಲಿಸಲು 30 ದಿನಗಳ ವಾಯಿದೆಯನ್ನು ಕೊಡಬೇಕು. ಹಾಗೆಲ್ಲ ಫೇಸ್ ಬುಕ್ ಅಂತ ಮೂಗು ಮುರಿಯಬೇಡಿ ಮ್ಯಾಡಂ, ನಮ್ಮಲ್ಲಿ ಎಂತೆಂಥಾ ಪ್ರಕಾಂಡ ಪಂಡಿತರಿದ್ದೀವಿ ಅನ್ನೋ ಕಲ್ಪನೆ ನಿಮಗಿರಲಿಕ್ಕಿಲ್ಲ. ಅನುವಾದ, ಸಂಶೋಧನೆ, ಕಾವ್ಯ, ಎಲ್ಲ ಪ್ರಕಾರಗಳಲ್ಲೂ ನಮ್ಮಲ್ಲಿ ಹಾಲಿ ಹಾಗು ಮಾಜಿ ತಜ್ಞರಿದ್ದೀವಿ. ಅಕಸ್ಮಾತ್ ನಿವೇನಾದರೂ ಉಡಾಫೆ ಸಾಹಿತ್ಯಕ್ಕೆ ಪ್ರಶಸ್ತಿ ಕೊಡಬೇಕೆಂದು ಮನಸ್ಸು ಮಾಡಿದರೆ ಈ ಆಯ್ಕೆಯನ್ನು ಪರಿಶೀಲಿಸಲು ನಮ್ಮಲ್ಲಿ ಎಕ್ಸಪರ್ಟ್ ಗಳ ಒಂದು ಇಡೀ ತಂಡವೇ ಹಗಲಿರುಳು ದುಡಿಯಲು ಸಿದ್ಧವಿದೆ. ತಾವು ಹೀಗೆ ಮಾಡುವದರಿಂದ ಸಮಾಜದಲ್ಲಿ ಸಾಮರಸ್ಯ ಉಂಟಾಗಿ ಕನ್ನಡಮ್ಮನ ಮುಗ್ಧ ಮಕ್ಕಳ ಮುಖದಲ್ಲಿ ಸುಖ ಸಂತೋಷಗಳು ಕಾರಂಜಿಯಂತೆ ಚಿಮ್ಮಿ ಎಲ್ಲೆಡೆ ಸೌಹಾರ್ದತೆ ನೆಲಸಿ ನಮ್ಮ ನಾಡು ಭಾರತದ ಇತರ ರಾಜ್ಯಗಳಿಗೆ ಮಾದರಿ ಆಗುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ತಕರಾರು ಮನವಿ ಅಲ್ಲ. ಸೋ ಪ್ಲೀಸ್ ಡು ದ ನೀಡ್ ಫುಲ್.
ತಮ್ಮ ವಿಶ್ವಾಸಿ / ಸತ್ಯ ಮತ್ತು ನ್ಯಾಯಕ್ಕಾಗಿ ಸದಾ ಹಂಬಲಿಸುವ ಹಲವಾರು ಅತೃಪ್ತ ಆತ್ಮಗಳು.

ನನಗೆ ಬುದ್ಧಿ ತಿಳಿದಾಗಿನಿಂದ ಭಗವಾನ್ ಅವರ ಸಾಹಿತ್ಯವನ್ನು ಓದುತ್ತಿದ್ದೇನೆ. ಅವರು ನಂಬುವ ವಿಚಾರಗಳ ಪರವಾಗಿದ್ದೇನೆ ಆದರೆ, ಇತ್ತೀಚಿನ ಅವರ ಮಾತುಗಳ ಜತೆಗಿರಲಾರೆ… ಹಿಂದೂ ಧರ್ಮ, ಪುರಾಣಗಳ ಕುರಿತು ಚಳವಳಿಯ ರೀತಿಯಲ್ಲಿ ಮಾತಾಡುವ, ಆ ಮೂಲಕ ಸಮಯ ವ್ಯರ್ಥ ಮಾಡುವ ಯಾರ ಮಾತುಗಳನ್ನೂ ನಾನು ಸಮರ್ಥಿಸಲಾರೆ… ಮಾನವ ಪ್ರೇಮವನ್ನು ಉಳಿಸುವ, ಬೆಳೆಸುವ ಕ್ರಿಯಾತ್ಮಕ ಚಳವಳಿಗಳೊಂದಿಗೆ ನನ್ನ ಪಯಣ…..
ಸಾಹಿತ್ಯ ಅಕಾಡೆಮಿ ಕೊಟ್ಟಿರುವ ಪ್ರಶಸ್ತಿ ಭಗವಾನ್ ಅವರ ಸಾಹಿತ್ಯ ಸೇವೆಗೆ ಕಡಿಮೆಯಾಯಿತು. ಅವರಿಗೆ ಅದಕ್ಕಿಂತಲೂ ದೊಡ್ಡ, ಹೆಚ್ಚಿನ ಪ್ರಶಸ್ತಿಗಳು ಸಿಗಬೇಕು.
ಸಾಹಿತ್ಯ- ಸಮಾಜದ ವಿದ್ಯಾರ್ಥಿಯಾಗಿ ಭಗವಾನ್ ಅವರಿಗೆ ಅಭಿನಂದನೆಗಳನ್ನು ಹೇಳದೆ ಇರಲಾರೆ….

ಹೌದು ಅವರು ಈಚೆಗೆ ‘ಭಕ್ತಾಸ್ ಭಾಷೆ’ಯಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಅಡ್ಡಾದಿಡ್ಡಿ ಮಾತನಾಡುತ್ತಿರುವುದು ಅತಿರೇಕದ ವರ್ತನೆಯೇ. ಖಂಡಿಸೋಣ.
ಆದರೆ ಅಕಾಡೆಮಿ ಅವರಿಗೆ ಪ್ರಶಸ್ತಿ ಕೊಟ್ಟಿರುವುದು. ಅವರ ಈ ಅತಿರೇಕದ ಮಾತುಗಳಿಗಲ್ಲ, ಅವರ ಸಾಹಿತ್ಯಕ್ಕೆ ಅನ್ನುವುದು ನಮಗೆ ನೆನೆಪಿರಬೇಕು.
ಪ್ರೊ.ಕೆ ಎಸ್ ಭಗವಾನ್ ಕೃತಿಗಳು :
ಆದರೆ ಅಕಾಡೆಮಿ ಅವರಿಗೆ ಪ್ರಶಸ್ತಿ ಕೊಟ್ಟಿರುವುದು. ಅವರ ಈ ಅತಿರೇಕದ ಮಾತುಗಳಿಗಲ್ಲ, ಅವರ ಸಾಹಿತ್ಯಕ್ಕೆ ಅನ್ನುವುದು ನಮಗೆ ನೆನೆಪಿರಬೇಕು.
ಪ್ರೊ.ಕೆ ಎಸ್ ಭಗವಾನ್ ಕೃತಿಗಳು :
ವಿಮರ್ಶೆ :
ಬದಲಾವಣೆ
ಕುವೆಂಪು ಯುಗ
ಆಂತರ್ಯ
ಕಣಿಗಲೆ
ವಿಚಾರ:
ಭಾಷೆ ಮತ್ತು ಸಂಸ್ಕೃತಿ
ಶಂಕರಾಚಾರ್ಯ ಮತ್ತು ಪ್ರತಿಗಾಮಿತನ
ಗಾಂಧಿಯನ್ನು ಗೋಡ್ಸೆ ಏಕೆ ಕೊಂದ?
ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್
ಸುಖದ ಹಾದಿ
Violence in Hinduism
ಅನುವಾದ:
ಜೂಲಿಯಸ್ ಸೀಸರ್
ವೆನಿಸಿನ ವರ್ತಕ
ಹ್ಯಾಮ್ಲೆಟ್
ಆಂಟನಿ ಮತ್ತು ಕ್ಲಿಯೋಪಾತ್ರ
ಒಥೆಲೊ
ನಿಮ್ಮಿಷ್ಟ
ಮ್ಯಾಕ್ ಬೆತ್
ಮಹಾರಾಜ ಲಿಯರ್
ರೋಮಿಯೊ ಮತ್ತು ಜೂಲಿಯೆಟ್
ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂ. ೩, ೭ ಮತ್ತು ೧೧
ವೃದ್ಧ ಮತ್ತು ಸಮುದ್ರ
ಸಂಪಾದನೆ :
ಗಂಗೋತ್ರಿ
ಚಂಪಾ: ಆಯ್ದ ಕವನಗಳು
ಜಿಜ್ಞಾಸು
ಸಾಹಿತ್ಯ ವಿಮರ್ಶೆ ೧೯೮೫
ಕೆಂಗಲ್ಲರ ಭಾಷಣಗಳು
As You Like It
Macbeth
Othello
The Merchant of Venice
ಚರಿತ್ರೆ :
ಇತಿಹಾಸ ಚಕ್ರ
ಇತಿಹಾಸದ ಪಾಠಗಳು
ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ
ಮಕ್ಕಳ ಸಾಹಿತ್ಯ :
ಮಂತ್ರದ ಉಂಗುರ
ಷೇಕ್ಸ್ ಪಿಯರ್ ಕತೆಗಳು:
ನಲಿವಿನಾಟಗಳು
ನೋವಿನಾಟಗಳು
ಚರಿತ್ರಾಟಗಳು
ಪ್ರೊ.ಕೆ ಎಸ್ ಭಗವಾನ್ ರವರ ಸಾಹಿತ್ಯಿಕ ವ್ಯಕ್ತಿತ್ವಕ್ಕೆ ಗೌರವವಿರಲಿ ಮತ್ತವರ ಈಚಿನ ಕಿರುಚಾಟಗಳ ಬಗ್ಗೆ ದಿವ್ಯನಿರ್ಲಕ್ಷ್ಯವೂ ಇರಲಿ..

ಪ್ರೊ ಭಗವಾನ್ ಕನ್ನಡದ ಶ್ರೇಷ್ಠ ಚಿಂತಕರಲ್ಲಿ ಒಬ್ಬರು, ತಮ್ಮ ಪ್ರಖರ ವೈಚಾರಿಕ ಬರಹಗಳಿಂದ ಎರಡು ಮೂರು ತಲೆಮಾರುಗಳನ್ನು ಪ್ರಭಾವಿಸಿದವರು, ತಿಳವಳಿಕೆಯನ್ನು ತಿದ್ದುತ್ತಿರುವವರು, ನೇರ ದಿಟ್ಟ ಮದೆ ನುಡಿಯಿಂದಾಗಿ ಹಲವು ಪ್ರಶಸ್ತಿಗಳಿಂದ ವಂಚಿತರಾದವರು, ಗೌರವ ಪ್ರಶಸ್ತಿ ಅವರಿಗೆ ಯಾವತ್ತೋ ಬರಬೇಕಿತ್ತು, ಈಗ ಬಂದಿದೆ, ಇದರಿಂದ ಅವರ ಅಭಿಮಾನಿ ಓದುಗರಾದ ನಮ್ಮೆಲ್ಲರಿಗೂ ಸಂತೋಷವಾಗಿದೆ, ಆದರೆ ಬಲಪ್ಂಥೀಯ ಯುವಮನಸ್ಸುಗಳು ಭಗವಾನ್ ಅವರ ಸಾಹಿತ್ಯ ಕೃತಿಗಳನ್ನು ಓದಿಲ್ಲ, ಅಷ್ಟೇ ಅಲ್ಲದೆ ಭಗವದ್ಗೀತೆಯನ್ನೂ ಓದಿರಲಿಕ್ಕಿಲ್ಲ, ಆದ್ದರಿಂದ ವಿವೇಚನಾರಹಿತ ಹೇಳಿಕೆ ನೀಡುತ್ತಿದ್ದಾರೆ, ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅಸಂವಿಧಾನಿಕವಾಗಿ ವರ್ತಿಸುತ್ತಿದ್ದಾರೆ, ಇಂಥ ಅಪಕ್ವ ಮನಸ್ಸುಗಳನ್ನು ತಿದ್ದುವ ಕೆಲಸವನ್ನು ಆಯಾ ಬಲಪಂಥೀಯ ಸಂಘಟನೆಗಳ ಸ್ವಯಂಘೋಷಿತ ಮುಖಂಡರು ಮಾಡಬೇಕು,
kevala ondu gumpina paravaada (Not ವಿರೋಧ) ಅಭಿಪ್ರಾಯಗಳು maatra ಇಲ್ಲಿವೆ.
ನಿಮ್ಮ ವಸ್ತುನಿಷ್ಠ ಅನಿಸಿಕೆ ಮತ್ತು ಅಭಿಪ್ರಾಯಗಳಿಗೂ ಸ್ವಾಗತ.
ಒಬ್ಬ ಸಾಹಿತಿ ಅಥವಾ ಕಲಾವಿದನಿಗೆ ಆತನ ಸಾಂಸ್ಕೃತಿಕ ಪ್ರತಿಭೆಯನ್ನು ಪರಿಗಣಿಸಿ ಆತನಿಗೆ ಸನ್ಮಾನ ಪ್ರಶಸ್ತಿ ,ಬಹುಮಾನಗಳನ್ನು ಕೊಡುವುದು ಆತನಿಗೆ ಕೊಡಮಾಡುವ ಗೌರವವಷ್ಟೇ.ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.ನಾಡಿಗೂ ಗೌರವ ತರುವಂಥದ್ದು.ಒಂದು ಪಕ್ಷ ಕೊಡದೇ ಹೋದರೆ ಆ ಕಲಾವಿದ ಅಥವಾ ಸಾಹಿತ್ಯವೇನು ಅಳಿಸಿಹೋಗುವುದಿಲ್ಲ.ಆತನ ಗೌರವ ಪ್ರಶಸ್ತಿಗಳು ಆತನ ಕೃತಿಗಳನ್ನು ಓದುವ ಸಹೃದಯ ಓದುಗನಿಂದ ಸಿಗುತ್ತಾ ಹೋಗುತ್ತವೆ.ಹಾಗಾಗಿ ಒಬ್ಬ ಸಾಹಿತಿ ಅಥವಾ ಕಲಾವಿದನಿಗೆ ಪ್ರಶಸ್ತಿಗಳೇ ಅಂತಿಮವಲ್ಲ.ಹೀಗಿರುವಾಗ ಸರ್ಕಾರ ಕೊಡುವ ಪ್ರಶಸ್ತಿಗಳಲ್ಲಿ ಮೂಗು ತೂರಿಸುವ ಅಥವಾ ಜಾಲತಾಣಗಳ ಅಭಿಪ್ರಾಯಗಳ ಮುಖೇನ ಆಯ್ಕೆಯಾಗಬೇಕು ಎನ್ನುವಂಥದ್ದು ವಿಚಾರವಂತಿಕೆಯಲ್ಲ.ಅವರು ಬರೆದಿರುವ ಮೌಲ್ಯಯುತ ಕೃತಿಗಳನ್ನು ಗಮನಿಸಿದರೆ ಈಗ ಕೊಟ್ಟಿರುವ ಪ್ರಶಸ್ತಿಯಲ್ಲಿ ಯಾವುದೇ ತೊಡಕಿಲ್ಲ ಎನ್ನಲಿಕ್ಕೆ ಯಾವುದೇ ಅಡ್ಡಿಯಿಲ್ಲ.ಭಗವಾನ್ ಸರ್ ರವರಿಗೆ ಅಭಿನಂದನೆಗಳು.ಇನ್ನು ಅವರ ಅವಿರತ ಕೃಷಿ ನಡೆಯಲಿ ಇನ್ನು ಹೆಚ್ಚಿನ ಪ್ರಶಸ್ತಿಗಳು ಅವರದಾಗಲಿ.
prashasti garime hechide