ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿಲೇಬಿ ತಿನ್ನಿಸಿದ ಕಾಯ್ಕಿಣಿ!

kaikini ondu jilebiಜಯಂತರ ’’ಒಂದು ಜಿಲೇಬಿ’ ಕವಿತೆಗಳ ಸಂಕಲನದಲ್ಲಿ ಕೆ ವಿ ತಿರುಮಲೇಶ್ ಅವರನ್ನು ನೆನಪಿಸಿಕೊಂಡಿದ್ದು ಹೀಗೆ-
ಮೂವತ್ತೈದು ವರ್ಷಗಳ ಹಿಂದೆ ನನಗೆ ಕವಿತೆಯ ರುಚಿ ಹತ್ತಿಸಿದ….
ಗಂಗಾಧರ ಚಿತ್ತಾಲರ ” ಹರಿವ ನೀರಿದು”
ರಾಮಾನುಜನ್ ರ ” ಹೊಕ್ಕಳಲ್ಲಿ ಹೂವಿಲ್ಲ”,
ತಿರುಮಲೇಶರ ” ಮುಖಾಮುಖಿ”……ಕವನ ಸಂಕಲನಗಳಿಗೆ…
jayant kaikini

ಒಂದು ಜಿಲೇಬಿ

ಅವರ ಕಂಗಳ ಹಾಗೆ

ಕಣ್ಣು ತುಸು ಮಲಗಿದವರನ್ನು ಹಾಗೆ
ಗೇಲಿಯಲ್ಲಿ ಎಬ್ಬಿಸಬೇಡಿ.ಅವರ ಕಂಗಳೆ ಹಾಗೆ
ಲೂಟಿಯಾದ ಪೇಟೆಯಂತೆ
ಸಪ್ಪೆ ಕಿರಣವೊಂದು ದಾರದಂತೆ ತೆರೆದ ಕಣ್ಣಿಂದ
ಹೊರಬರುತ್ತಲೇ ಇದೆ ಸಿಕ್ಕ ಗಿಡಮರ ಕಂಬ
ಸೈಕಲ್ಲುಗಳ ಕಟ್ಟಿ ಹೆಡೆಮುರಿ ಬೀಳಿಸುತ್ತ
ದಣಿಯದ ಅಭಯಹಸ್ತಗಳೂ ಇದರಲ್ಲಿ
ಸಿಕ್ಕುಬಿದ್ದಿವೆ.ಹೂಗಳ ಕತ್ತನ್ನೆ ಕುಯ್ದೀತು ಎಚ್ಚರ
ಬಗ್ಗಿಸಿ ಹಿಡಿಯಿರಿ ಹಾಗೆ
ಇವರ ಹುರುಬುರುಕು ಅಂಗಾಂಗುಗಳ ತಪ್ಪಿಸಿಯೇ
ಅಡ್ಡಾಡುವನು ದಿನಮಣಿ.ಉಪಖಂಡದಿಂದೆದ್ದ ಕಂಬನಿಯ ಮೋಡ
ಸದ್ದಿಲ್ಲದೆ ನೆತ್ತಿಗೆ ಬಂದ ಕರಿಗಟ್ಟಿವೆ
ಚಹಾ ತಿಂಡಿ ಆದವರು ಅಲ್ಲಲ್ಲೆ ನಿಂತುಕೊಳ್ಳಿ.
ಹೀಗೆ ನೋಡಿ.ತಟತಟ ಉಪ್ಪುಮಳೆಗೂ ಎವೆಯಿಕ್ಕದ ಆ ಕಂಗಳಲ್ಲಿ
ಎಲ್ಲಾ ಕಾಣುತ್ತಿದೆ
ರಾತ್ರಿಯೊಂದನ್ನು ಕಾಲಲ್ಲಿ ಅಳಿಸಿ ಹಾಕುತ್ತಿದೆ ನಸುಕಿದ ಪೇಟೆ
ಮೊಲೆಗಳ ಎಲ್ಲೆಲ್ಲೋ ಅಡವಿಟ್ಟು ಬಂದ ಯಾರ್ಯಾರದೋ ಅಕ್ಕ ತಂಗಿ
ಸಾಲಾಗಿ ನೀಲಿ ವ್ಯಾನಿನಲ್ಲಿ ಹತ್ತುತ್ತುದ್ದಾರೆ

‍ಲೇಖಕರು admin

19 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading