ಜಾನಕಿ ಕಾಲಂ 2
ಜೋಗಿ | ಛಂದ ಪುಸ್ತಕ | ದೂರವಾಣಿ: ೯೮೪೪೨೨೭೮೨
ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರಘಟ್ಟ ರಸ್ತೆ, ಬೆಂಗಳೂರು-೫೬೦೦೭೬
ಇಮೇಲ್: chandapustaka@yahoo.com
*
ನೀನೂ ನಿನ್ನ ಗುರು ರವಿ ಬೆಳಗೆರೆಯೂ ಅದೆಷ್ಟು ಬರೀತೀರಪ್ಪಾ? ಅದು ಹೆಂಗೆ ಬರೀತೀಯ? ವಾರ ವಾರ ಅಷ್ಟೊಂದು! ಆ ಬೆಂಗಳೂರಲ್ಲಿ ಕೂತು ಹೆಂಗೆ ಬರೆಯೋದಕ್ಕೆ ಸಾಧ್ಯ ಅಂತಾ ಯೋಚ್ನೆ ಮಾಡ್ತೀನಿ. ಅದೇ ರಸ್ತೆ, ಅದೇ ಜನ, ಅದೇ ಕೆಟ್ಟ ಟ್ರಾಫಿಕ್ಕು. ಹಾಳ್ಬಿದ್ದು ಹೋಗ್ತಿಯ ನೋಡ್ತಿರು. ಆಗಾಗ ಇತ್ಲಾಕ್ಕಡೆ ಬಂದು ಹೋಗು. ಬೆಳ್ತಂಗಡಿತನಕ ಬರೋರಿಗೆ ಇಲ್ಲಿಗೆ
ಬರೋದಕ್ಕೇನು ರೋಗ?
ನೀನು ಮಾಯಾಲೋಕದ ಮೇಲೆ ಬರೆದದ್ದು ಓದಿದೆ. ಚೆನ್ನಾಗಿತ್ತು.
ಮೊದಲು ಕೃಷ್ಣೇಗೌಡನ ಆನೆ ಸ್ಕ್ರಿಪ್ಟು ಮುಗಿಸು. ರೆಡಿಯಾದ ಮೇಲೆ ತಗೊಂಡು ಬಾ. ಏಳೊ ಎಂಟೊ ಮುದುಕರು ಕೂತು ನೋಡೋ ಆರ್ಟ್ ಸಿನೆಮಾ ಮಾತ್ರ ಮಾಡೋಕ್ಕೆ ಹೋಗ್ಬೇಡ. ಈಗಿನ ಪರಿಸ್ಥಿತಿ ನೋಡಿದ್ರೆ ನನ್ನ ಕಥೆ ತಗೊಂಡು ಹೋದೋರು ಯಾರೂ ಸಿನೆಮಾ ಮಾಡೋ ಹಾಗೆ ಕಾಣ್ತಿಲ್ಲ. ಇಲ್ಲಿಗೆ ಬರೋ ಹಾಗಿದ್ರೆ ಕೊಟ್ಟಿಗೆಹಾರದ ಕಡೆಯಿಂದ ಬರಬೇಡ. ಆ ರಸ್ತೆಯನ್ನೆಲ್ಲ ಅಗೆದು ಹಾಕಿದ್ದಾರೆ. ಇನ್ನೂ ರಿಪೇರಿ ಮಾಡಿಲ್ಲ.
ಕೆ ಪಿ ಪೂರ್ಣಚಂದ್ರ ತೇಜಸ್ವಿ





0 Comments