ಈ ಭಾನುವಾರ ಅಂಕಿತ ಪ್ರಕಾಶನದಿಂದ ಬಿಡುಗಡೆ
ಸುಮಾರು ಎರಡು ದಶಕಗಳಿಂದ ಪತ್ರಕರ್ತನಾಗಿರುವ ಸತೀಶ್ ಚಪ್ಪರಿಕೆ ಅವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಜನಸಾಮಾನ್ಯರ ಬಗ್ಗೆ ಬರೆದ ಜನಪರ ಲೇಖನಗಳ ಸಂಕಲನ ದೇವಕಾರು.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಮುಖಗಳನ್ನು ಪರಿಚಯ ಮಾಡಿಕೊಡುಂವತಹ ಒಟ್ಟು ಒಂಬತ್ತು ಲೇಖನಗಳು ಈ ಕೃತಿಯಲ್ಲಿವೆ. ದೇವಕಾರಿನ ಮಹಾ
ಬಲ ಬಬನಿ ನಾಯಕ, ವಿದರ್ಭದ ಕಲಾವತಿ, ಬಂಡ್ಲಪಲ್ಲಿಯ ರಾಜಾ ರೆಡ್ಡಿ, ಸಿದ್ದಾಪುರದ ಮೈಲಮ್ಮ, ವಾರಣಾಸಿಯ ಬಾಬಾ ನಾಗನಾಥ ಯೋಗೀಶ್ವರ, ದಾವಣಗೆರೆಯ ತಾಹೀರ್ ಅಲಿ, ಪುಲಕುಂಟದ ನಾರಾಯಣಮ್ಮ, ಉದಕಮಂಡಲದ ಮುದ್ಸಿನ್ ಮತ್ತು ಚೋಂಡಿಮುಖೇಡ್ನ ಶ್ರೀಪತಿರಾವ್ ಮಹದೇವರಾವ್ ಪಾಟೀಲ್ ಅವರಂತಹ
ಜನಸಾಮಾನ್ಯರ ಮೂಲಕ ಇಲ್ಲಿನ ಪ್ರತಿಯೊಂದು ಲೇಖನಗಳೂ ಆವರಣಗೊಳ್ಳುತ್ತಾ ಸಾಗುತ್ತವೆ
ಸಂತ್ರಸ್ತರ ಪಾಡು, ರೈತರ ಆತ್ಮಹತ್ಯೆ, ಎನ್ಆರ್ಜಿಎ- ಭಾರತ್ ನಿರ್ಮಾಣ್ ಯೋಜನೆಗಳ ವೈಫಲ್ಯ, ಗಣಿಕಾರ್ಮಿಕರ ದುಸ್ಥಿತಿ, ಗಂಗಾ ನದಿಯ ದಾರುಣ ಮುಖ, ಅನಂತಪುರದಲ್ಲಿನ ಮಾನವ ಕಳ್ಳಸಾಗಣೆ… ಹೀಗೆ ಹಲವು ವಿಷಯಗಳನ್ನು ಒಳಗೊಂಡಿರುವ ಇಲ್ಲಿನ ಪ್ರತಿಯೊಂದು ಲೇಖನವೂ ನೇರವಾಗಿ ಒಡಲಾಳದಿಂದ ಬಂದಿದೆ.
ಉನ್ನತ ಮಟ್ಟದ ಗ್ರಾಮೀಣ ವರದಿಗಾರಿಕೆಯ ಫಲವಾಗಿ ನಮ್ಮೆಲ್ಲರ ಕೈಸೇರುತ್ತಿದೆ ದೇವಕಾರು ಎಂಬ ಈ ಕೃತಿ. ಮುಖ್ಯವಾಗಿ ಪತ್ರಕರ್ತರು ಮತ್ತು ಪತ್ರಿಕೋದ್ಯಮದ ಕಡೆ ಮುಖ ಮಾಡಿ ನಿಂತಿರುವ ಯುವಕರು ಓದಲೇ ಬೇಕಾಗಿರುವುದು ದೇವಕಾರು ಕೃತಿಯ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಯಾರಿಗಾಗಿ? ಎಂಬ ಮುನ್ನುಡಿಯನ್ನು.
ಹೆಚ್ಹಿನ ಓದಿಗಾಗಿ ಓದು ಬಜಾರು ]]>
ಜನಪರ ಲೇಖನಗಳ ಸಂಕಲನ 'ದೇವಕಾರು'
ನಿಮಗೆ ಇವೂ ಇಷ್ಟವಾಗಬಹುದು…





0 Comments