ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಛಂದ’ ಪುಸ್ತಕ ಬಹುಮಾನ ಘೋಷಣೆ : ಸ್ವಾಮಿ ಪೊನ್ನಾಚಿ ಕೃತಿಗೆ ಗರಿ

ಛಂದ ಪುಸ್ತಕ

ಹಸ್ತಪ್ರತಿ ಸ್ಪರ್ಧೆಯ

ಫಲಿತಾಂಶ

ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಸ್ವಾಮಿ ಪೊನ್ನಾಚಿ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ.

ಮೂಲತಃ ಕೊಳ್ಳೆಗಾಲ ತಾಲೂಕಿನ ಪೊನ್ನಾಚಿಯವರಾದ ಸ್ವಾಮಿಯವರು, ಸದ್ಯಕ್ಕೆ ಯಳಂದೂರಿನಲ್ಲಿ ಶಿಕ್ಷಕರಾಗಿ ಉದ್ಯೋಗ ಮಾಡುತ್ತಿದ್ದಾರೆ.

ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ಕತೆಗಾರರಾದ ಎಂ.ಎಸ್‌. ಶ್ರೀರಾಮ್‌ ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ೬೦ಕ್ಕೂ ಹೆಚ್ಚು ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು.

ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಶ್ರೀಕಾಂತ ಉಡುಪ, ಕರ್ಕಿ ಕೃಷ್ಣಮೂರ್ತಿ ಮತ್ತು ವಸುಧೇಂದ್ರ ಮಾಡಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಛಂದ ಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ.

‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಮೂವತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ.

ಜೂನ್‌ ೧೦ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ವಸುಧೇಂದ್ರ
(ಛಂದ ಪುಸ್ತಕ)

‍ಲೇಖಕರು avadhi

19 May, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading