ಕಲಬುರ್ಗಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಸ್ಪರ್ಧೆಯಲ್ಲಿ ‘ಸುಧಾ’ ವಾರಪತ್ರಿಕೆಯ ಸಂಪಾದಕರಾದ ಚ ಹ ರಘುನಾಥ್ ಅವರಿಗೆ ಚಿನ್ನದ ಪದಕವನ್ನು ಘೋಷಿಸಲಾಗಿದೆ.
‘ಅವಧಿ’ಯ ಅಂಕಣಕಾರರಾದ ರೇಣುಕಾ ರಮಾನಂದ ಅವರಿಗೆ ಬೆಳ್ಳಿ ಪದಕ ಹಾಗೂ ಉಪನ್ಯಾಸಕ ಕನಕರಾಜ ಆರನಕಟ್ಟೆ ಅವರು ಕಂಚಿನ ಪದಕ ವಿಜೇತರಾಗಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಎಚ್ ಟಿ ಪೋತೆ ಅವರು ತಿಳಿಸಿದ್ದಾರೆ.

ಚ ಹ ರಘುನಾಥ ಅವರ ‘ಗೋರಿ’ ಕಥೆ, ರೇಣುಕಾ ರಮಾನಂದ ಅವರ ‘ಬಾಳ ಪಯಣ’ ಹಾಗೂ ಕನಕರಾಜ ಆರನಕಟ್ಟೆ ಅವರ ‘ಸ್ಟ್ಯಾಚ್ಯು ಆಫ್ ಲಿಬರ್ಟಿ’ ಪ್ರಶಸ್ತಿ ವಿಜೇತ ಕಥೆಗಳು.
ಪ್ರಶಸ್ತಿ ವಿಜೇತರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕದೊಂದಿಗೆ ಕ್ರಮವಾಗಿ ತಲಾ 5000/- 3,000/- ಹಾಗೂ 2,000/- ರೂಪಾಯಿ ಗೌರವಧನ ಹಾಗೂ ಸ್ಮರಣಿಕೆ ಕೊಡಲಾಗುವುದು.






ಬಹಳ ಸಂತೋಷ. ಅಭಿನಂದನೆಗಳು
ಅಭಿನಂದನೆಗಳು ಪ್ರಶಸ್ತಿ ಪಡೆದ ಎಲ್ಲಾ ಗೌರವಾನ್ವಿತರಿಗೆ