ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುಕ್ಕು’ಬುಕ್ಕು’ವಿನಲ್ಲಿ ನಟರಾಜ್ ಹುಳಿಯಾರ್

ಚುಕ್ಕು’ಬುಕ್ಕು’ಗಾಗಿ ಇಲ್ಲಿ ಕ್ಲಿಕ್ಕಿಸಿ

ಸೃಜನಶೀಲ ಅನುಸಂಧಾನ

ಬಸವಲಿಂಗಪ್ಪನವರು ಮತ್ತು ಡೇವಿಡ್‌ ಸಾಹೇಬರು ಕಥಾಸಂಕಲನದಲ್ಲಿ ನಟರಾಜ್ ಸಮಕಾಲೀನ ಬದುಕಿಗೆ ಸೂಕ್ಷ್ಮವಾಗಿ ಸ್ಪಂದಿಸಿರುವುದರ ಜೊತೆಗೆ ಕಥೆ-ಕಥನಗಳ ಬಗ್ಗೆಯೂ ಗಾಢವಾಗಿ ಚಿಂತಿಸಿದ್ದಾರೆ. ಇಲ್ಲಿಯ ಕೆಲವು ಕಥೆಗಳು ಫಿಕ್ಷನ್‌ನ ಪರಿಧಿಯನ್ನು ದಾಟಿ ಮೆಟಾಫಿಕ್ಷನ್‌ ಕಡೆಗೆ ಚಲಿಸುವ ವಿದ್ಯಮಾನವನ್ನು ಕಾಣುತ್ತೇವೆ. ನಟರಾಜ್‌ ಅವರ ಎರಡು ಮುಖ್ಯ ಆಸಕ್ತಿಗಳಾದ ಕಥೆ ಮತ್ತು ವಿಮರ್ಶೆ ಅವರ ಕೆಲವು ಬರಹಗಳಲ್ಲಿ ಪರಸ್ಪರ ಎದುರಾಗಿ ಈ ಸೃಜನಶೀಲ ಅನುಸಂಧಾನದಲ್ಲಿ ಎರಡೂ ತುಸು ‘ಹಿಗ್ಗು’ವ ಪ್ರಕ್ರಿಯೆಗೆ ಸಾಕ್ಷಿಯಾಗುತ್ತೇವೆ.

-ಟಿಪಿ ಅಶೋಕ

+

ಲಂಕೇಶರಿಗಿಂತ ಭಿನ್ನ

ನನ್ನನ್ನು ಈಚೆಗೆ ಕಾಡಿದ ಕಥೆಗಳು ನಟರಾಜ್‌ ಹುಳಿಯಾರ‍್ ಬರೆದ ಕಥೆಗಳು. ಲಂಕೇಶರಿಗಿಂತ ಇವರು ಭಿನ್ನ. ಆದರೆ ಅವರ ಮನೋಧರ್ಮದಲ್ಲಿ ಬರೆಯಬಲ್ಲ ಏಕಮಾತ್ರ ಕಥೆಗಾರರು ನಮ್ಮ ಕಾಲದಲ್ಲಿ ನಟರಾಜ್ ವೈಯಕ್ತಿಕವಾಗಿ ನನಗೆ, ನನ್ನ ಅಸಲು ಪ್ರತಿಭೆಗೆ ಅವರಿಗಿಂತ ಭಿನ್ನವಾಗಿ ಕೈ ಒಡ್ಡುವಂತೆ ಪ್ರೇರೇಪಿಸುತ್ತ ಇದ್ದ ಲೇಖಕ ಲಂಕೇಶರು. ಅವರಂತೆಯೇ ಅನುಮಾನ, ವ್ಯಾಮೋಹ, ಸಂತೋಷ, ಜೀವನಪ್ರೇಮ, ಕೊಂಕು ಯಾವುದನ್ನೂ ಬಚ್ಚಿಡದಂತೆ ಬರೆಯಬಲ್ಲ ನಟರಾಜ್‌ ನನ್ನ ಮೆಚ್ಚಿನ ಕಥೆಗಾರ . ನನಗೆ ಅಗತ್ಯವಾಗಿ ಉಳಿದ ಧ್ವನಿ.

-ಯು ಆರ್‌ ಅನಂತಮೂರ್ತಿ

+

ವಿಶಿಷ್ಟ ಶೈಲಿ

ನಟರಾಜ್‌ ವಿಶಿಷ್ಟ ಶೈಲಿ ಪಡೆದವರು. ಕಾಣುವ ಧೈರ್ಯದ ಜೊತೆಗೆ ಕಂಡದ್ದರ ಬಗ್ಗೆ ಅನುಮಾನ ಇಟ್ಟುಕೊಂಡವರು.

-ಪಿ ಲಂಕೇಶ್

ಅದ್ಭುತ

ಮಾಯಾಕಿನ್ನರಿಯಲ್ಲಿ ಮೂಡಿರುವ ಆಚಾರಿಯ ಪಾತ್ರ, ಅಲ್ಲಿ ಬರುವ ವೇಶ್ಯೆ ಹಾಗೂ ಕತೆ ಬೆಳೆಯುವ ರೀತಿಗಳು ಅದ್ಭುತವಾಗಿವೆ.

-ಬಿ ಸಿ ರಾಮಚಂದ್ರಶರ್ಮ

 

‍ಲೇಖಕರು G

3 November, 2012

1 Comment

  1. nataraj huliyar

    Dear friends
    Thanks for placing my story along with the cover page and comments.Many seem to have read the story in your blog and also Avadhi which has carried the link.So nice of you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading