ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಚಿಕ್ ಚಿಕ್ ಸಂಗತಿ’

small pot

‘ಚಿಕ್ ಚಿಕ್ ಸಂಗತಿ’ ಬಗ್ಗೆ ಬರೀಬೇಕು ಅಂತ ತುಂಬಾ ತುಂಬಾ ಆಸೆ ಇತ್ತು. ನನಗೆ ಮೊದಲಿಂದಲೂ..

ಒಂದು ಚಕ್ರ ಕಂಡು ಹಿಡಿದರು. ಅದೇನು ದೊಡ್ಡ ವಿಷಯಾನಾ..? ಆದರೆ ಅದು ಜಗತ್ತನ್ನೇ ಬದಲಿಸಿಬಿಟ್ಟಿತು
ಎರಡು ಕಲ್ಲು ಉಜ್ಜಿದರು. ಅದೇನು ದೊಡ್ಡ ವಿಷಯಾನಾ..?  ಆದರೆ ಅದೂ ಜಗತ್ತನ್ನು ಬದಲಿಸಿ ಹಾಕಿಬಿಟ್ಟಿತು
ಆ ಕಾಲದಿಂದ ಈ ಕಾಲದವರೆಗೆ ಅದೆಷ್ಟೋ ಸಂಗತಿಗಳು ಜಗತ್ತನ್ನು ಬದಲಿಸುತ್ತಿದೆ
small turtle
ಜಗತ್ತನ್ನು ಬದಲಿಸುವ ವಿಷಯ ಪಕ್ಕಕ್ಕಿಡೋಣ
ಆದರೆ ನಮ್ಮ ಮನಸ್ಸನ್ನ ಬದಲಿಸುವ ವಿಷಯಗಳಿದೆಯಲ್ಲಾ ಅದರ ಬಗ್ಗೆ ಮಾತಾಡೋಣ
ಒಂದು ಪುಟ್ಟ ಸಂಗತಿ ಎಷ್ಟು ಮನ ಕಲಕಬಹುದು
ಒಂದು ಪುಟ್ಟ ಸಂಗತಿ ಎಷ್ಟು ಕಾಲ ನಮ್ಮ ಜೊತೆ ಹೆಜ್ಜೆಹಾಕಬಹುದು.. ಎನ್ನುವುದು ನಿಜಕ್ಕೂ ಸೋಜಿಗದ ಸಂಗತಿ
small paper
ಈ ಸಂಗತಿಗಳ ಬಗ್ಗೆ ಬರೀಬೇಕು ಅನಿಸಲು ನನಗೆ ಖಂಡಿತಾ ಪ್ರೇರಣೆ ಕೊಟ್ಟಿದ್ದು ಫೇಸ್ ಬುಕ್
ಡ್ರಾಮಾ ಜೂನಿಯರ್ಸ್ ನಲ್ಲಿ ನಡೆದ ಎರಡು ಸಂಗತಿಗಳ ಬಗ್ಗೆ ಬರೆದೆ
ಎಲ್ಲಿತ್ತು ಎಲ್ಲರಲ್ಲೂ ಅಂತಹ ಅಂತಃಕರಣ? ಎಲ್ಲೆಲ್ಲಿಂದಲೋ ಅದಕ್ಕೆ ರಿಯಾಕ್ಟ್ ಆದರು
ಕಣ್ಣೀರಾದರು
small voilin
ಪಾವನಾಳ ಬಗ್ಗೆ ಬರೆದೆ, ಶಾರದಾ ಬಂಗೇರರ ಬಗ್ಗೆ ಬರೆದೆ
ಎಷ್ಟು ಜನ, ಎಷ್ಟೊಂದು ಜನ ಬಂದು ಓದಿದರು
ಇವೆಲ್ಲಾ ಒಂದಕ್ಕೊಂದು ಸೇರಿ ನನಗೆ ಚಿಕ್ ಚಿಕ್ ಸಂಗತಿ ಬಗ್ಗೆ ಮಾತನಾಡುವ ಉತ್ಸಾಹ ತುಂಬಿದೆ
ಬರೀತೀನಿ ಖಂಡಿತಾ ..
-ಜಿ ಎನ್ ಮೋಹನ್ 

‍ಲೇಖಕರು Admin

4 June, 2016

5 Comments

  1. Gubbachchi Sathish

    ‘ಈಗ’

  2. ಗವಿಸಿದ್ಧ ಹೊಸಮನಿ

    ಸರ್ ನನಗೆ ಕುತೂಹಲ..

  3. shiva

    ಚಿಕ್ಕದೆನಿಸುವ ದೊಡ್ಡ ವಿಷಯಗಳು!
    ಚಿಕ್ಕ ವಿಷಯಗಳಿಗೆ ದೊಡ್ಡ ಆಲೋಚನೆಗಳು!!

  4. ಆದಿವಾಲ ಗಂಗಮ್ಮ

    ಚಿನ್ನ ಚಿನ್ನ ಆಸೆಯಂತೆ ಚಿಕ್ಕ ಚಿಕ್ಕ ಸಂಗತಿಗಳು ಬಲು ಕುತೂಹಲ ಮತ್ತು ಮುದ ತರುವಂತಾದ್ದು.ಮನಸ್ಸು ಚೇತೊಹಾರಿಯಾಗಿರಲು ಮುಗ್ಧತೆಯಂದಿರಲು ಇಂಥವೇ ಆಧಾರ.

  5. Sudha ChidanandGowd

    ಈ ಚಿಕ್ ಚಿಕ್ ಸಂಗ್ತಿ ದೊಡ್ ಕುತೂಹಲ ಹುಟ್ಟಿಸಿದೆ…
    ಬೇಗ ಶುರುವಾಗ್ಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading