ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ – 2012 – ಲೇಖನಗಳಿಗೆ ಆಹ್ವಾನ

ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ – 2012


ಪ್ರಾದೇಶಿಕ ಭಾಷಾ ಪತ್ರಿಕೆಗಳಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಬೆಂಗಳೂರು ಮೂಲದ ‘ಕಮ್ಯುನಿಕೇಷನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್’ (ಸಿಡಿಎಲ್) ಸ್ವಯಂ ಸೇವಾ ಸಂಸ್ಥೆಯು ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ -2012 ಕ್ಕಾಗಿ ಲೇಖನಗಳನ್ನು ಆಹ್ವಾನಿಸುತ್ತಿದೆ. ಕನ್ನಡದಲ್ಲಿ ಅಭಿವೃದ್ಧಿಪರ ಲೇಖಕರ ಪರಿಶ್ರಮವನ್ನು ಗೌರವಿಸುವುದು ಮತ್ತು ಪತ್ರಿಕೆಗಳಲ್ಲಿ ಅಭಿವೃದ್ಧಿ ವಿಚಾರಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಮಾಡುವುದು ಈ ಪ್ರಶಸ್ತಿಯ ಉದ್ದೇಶ.
ಕನ್ನಡ ದಿನಪತ್ರಿಕೆಗಳು ಮತ್ತು ದಿನಪತ್ರಿಕೆಗಳ ಪುರವಣಿಗಳಲ್ಲಿ ಪ್ರಕಟವಾದ ಲೇಖನ/ನುಡಿಚಿತ್ರಗಳನ್ನು ಬರಹಗಾರರು/ ಪತ್ರಕರ್ತರು ಪ್ರಶಸ್ತಿಗಾಗಿ ಕಳುಹಿಸಬಹುದು. ವಾರಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ನುಡಿ ಚಿತ್ರಗಳನ್ನು ಪರಿಗಣಿಸುವುದಿಲ್ಲ. ಜನವರಿ 1, 2012 ರಿಂದ ಡಿಸೆಂಬರ್ 31, 2012ರ ಅವಧಿಯಲ್ಲಿ ಪ್ರಕಟಗೊಂಡ ಲೇಖನ/ನುಡಿಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.
ವಿಷಯಗಳು:
ಮಹಿಳೆ, ನೈರ್ಮಲ್ಯ, ಮಕ್ಕಳ ಹಕ್ಕುಗಳು, ಅಂಗವೈಕಲ್ಯ, ಎಚ್ಐವಿ/ ಏಡ್ಸ್, ನೀರು, ಶಿಕ್ಷಣ, ಆರೋಗ್ಯ , ಪರಿಸರ, ಮತ್ತು ಸಾಮಾನ್ಯ
ಈ ವಿಷಯಗಳಿಗೆ ಸಂಬಂಧಿಸಿದಂತೆ ಆಳವಾದ ಚಿಂತನೆ, ಜನಪರ ಕಾಳಜಿಯನ್ನೊಳಗೊಂಡ ರಚನಾತ್ಮಕ ಲೇಖನ/ನುಡಿಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಹಿರಿಯ ಮತು ವಿಷಯ ತಜ್ಞರನ್ನು ಒಳಗೊಂಡ ನಿರ್ಣಾಯಕ ಸಮಿತಿಯು ಪ್ರಶಸ್ತಿಗಳನ್ನು ನಿರ್ಧರಿಸುತ್ತದೆ.
ಪ್ರವೇಶ ಪತ್ರದ ಜೊತೆ ಲೇಖನ/ನುಡಿಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ 31ನೇ ಮಾರ್ಚ್ 2013. ಹೆಚ್ಚಿನ ಮಾಹಿತಿಗೆ ಮತ್ತು ಪ್ರವೇಶ ಪತ್ರಗಳಿಗಾಗಿ 8762486467 ಅಥವಾ charkha.awards@gmail.com ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗೆ ಮತ್ತು ಪ್ರವೇಶ ಪತ್ರಗಳಿಗಾಗಿ ಸಂಪರ್ಕಿಸಿ.
ಗಣಪತಿ ಹೆಗಡೆ
ಕಮ್ಯುನಿಕೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್
11/ಎ, 7ನೇ ಅಡ್ಡರಸ್ತೆ, 17ನೇ ಮುಖ್ಯ ರಸ್ತೆ, ಕೋರಮಂಗಲ 6ನೇ ಹಂತ
ದೂರವಾಣಿ (080)41478470, 8762486467,
e-mail: charkha.awards@gmail.com
 
 

‍ಲೇಖಕರು avadhi

9 March, 2013

1 Comment

  1. Rajashekar Kuriyavar

    Dear Sir,
    Kindly upload application form in the website its easy to download
    Thanks & regards,
    Rajashekar Kuriyavar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading