ಚಂದ್ರಕಾಂತ ವಡ್ಡು
ಇದು ೧೯೯೦ ರಲ್ಲಿ ಬಳ್ಳಾರಿಯಿಂದ ಪ್ರಕಟವಾದ ಅಂಕುರ ಪ್ರಕಾಶನದ ಮೊದಲ ಕೃತಿ; ಚಕ್ರತೀರ್ಥ (ಬಳ್ಳಾರಿ ಜಿಲ್ಲೆಯ ಪ್ರಾತಿನಿಧಿಕ ಕವನ ಸಂಕಲನ). ಮುಖಪುಟದಲ್ಲೇ ಕವಿಗಳ ಹೆಸರುಗಳು ಪ್ರಕಟವಾಗಿವೆ. ಇದಕ್ಕೆ ನನ್ನದೇ ಬೆನ್ನುಡಿ. ಗದಗಿನ ಭಾಂಡಗೆ ಮುದ್ರಣಾಲಯದಲ್ಲಿ ಹಳೆಯ ಅಚ್ಚುಮೊಳೆ ಜೋಡಣೆಯಲ್ಲಿ ರೂಪುಗೊಂಡ ಪುಸ್ತಕವಿದು.
ಈ ಸಂಕಲನದಲ್ಲಿ ಕಾಣಿಸಿಕೊಂಡವರಲ್ಲಿ ಕೆಲವರು ನಮ್ಮನ್ನು ಅಗಲಿದ್ದಾರೆ. ಅನೇಕರ ಸಂಪರ್ಕ ಕಡಿದುಹೋಗಿದೆ. ಫೇಸ್ಬುಕ್ ಮೂಲಕ ಇಲ್ಲಿರುವ ಒಂದಷ್ಟು ಜನರ ಸಂಪರ್ಕ ಸಾಧ್ಯವಾಗಬಹುದೇನೋ ಎಂಬ ಆಶೆ.ಫೆ ೫ ರಂದು ಬಳ್ಳಾರಿಯಲ್ಲಿ ಅಂಕುರ ಪ್ರಕಾಶನ ಹಮ್ಮಿಕೊಂಡಿರುವ ‘ಅಮ್ಮನ ನೆನಪು-ಅವಲೋಕನ’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ‘ಚಕ್ರತೀರ್ಥ’ ಕೈಗೆ ಸಿಕ್ಕಿತು.








0 Comments