ಗೆಳೆಯ ಚಂದ್ರಶೇಖರ ಅಲೂರು ಅವರ ಗೀತ ಸಂಗೀತ ಪುಸ್ತಿಕೆ ಮರು ಓದಿಗಾಗಿ ಹಿಡಿದಿದ್ದೆ. ಒಂದು ದುರಂತವೆಂದರೆ ನಾವು ಅತ್ಯುತ್ತಮ ಹಾಡುಗಳನ್ನು ಕೇಳಿ ಆನಂದಿಸುವಾಗ, ಖುಶಿ ಪಡೆವಾಗ, ನರ್ತಿಸುವಾಗ,ಮೈಮರೆಯುವ ಆ ಘಳಿಗೆಗಳಲ್ಲಿ ಕೂಡ ಆ ಹಾಡು ಬರೆದ ಕವಿ ನಮಗೆ ಯಾರೆಂದು ಗೊತ್ತಿರುವುದೇ ಇಲ್ಲ.. ಆ ನಟ ನಟಿ, ಹೆಚ್ಚೆಂದರೆ ಸಂಗೀತ ನಿರ್ದೇಶಕ ನಮಗೆ ನೆನಪಾಗಬಹುದೇನೋ, ಅದರೆ ಕನ್ನಡ ಹಳೆಯ ಹಾಡುಗಳನ್ನು ಆ ಕ್ಷಣದ ಮಾನಸಿಕ ಭಾವನೆಗಳನ್ನು, ಆ ಕವಿಗಳ, ಗೀತ ರಚನೆಕಾರರ ಭಾವನೆ ತಲ್ಲಣ ಸಂಬ್ರಮ ಗಳನ್ನೂ ಅವರು “ಗೀತ ಸಂಗೀತ” ಪುಸ್ತಿಕೆ ಯಲ್ಲಿ ಬಹಳ ಮನೋಜ್ಞವಾಗಿ ಚಿತ್ರಿಸಿದ್ದರೆ.. ಮತ್ತೆ ಮತ್ತೆ ಓದಿ ಮೆಲುಕು ಹಾಕುವಂತಿದೆ ಆ ಪುಸ್ತಿಕೆಯ ಎಲ್ಲ ಹಳೆಯ ಗೀತರಚನೆಕಾರರ ಹಾಡುಗಳು. ಕು ರಾ ಸೀ ಅವರ ಬರೆದ ಹಾಡಿನ ಒಂದು ಝಲಕ್ ..

ಬಿಂಕದ ಸಿಂಗಾರಿ ,
ಮೈ ಡೊಂಕಿನ ವೈಯ್ಯಾರಿ
ಈ ಸವಿ ಘಳಿಗೆ ರಸ ದೀವಳಿಗೆ
ನಿನ್ನಂತರಂಗ ಮಧುರಂಗ
ಬಳಿ ನೀನಿರಲು, ಬಿಸಿಲೇ ನೆರಳು,
ಮಧುಪಾನ ಪಾತ್ರೆ ನಿನ್ನೊಡಲು.
ಮಧುವಿಲ್ಲದೆ, ಮದವೇರಿಪ,
ನಿನ್ನಂಧ ಚಂದ ಮಕರಂದ …
**
ತುಟಿಯ ಮೇಲೆ ತುಂಟ ಕಿರುನಗೆ
ಕೆನ್ನೆ ತುಂಬಾ ಕೆಂಡ ಸಂಪಿಗೆ ..
**
ಅವರು ಬೆರೆತ ಜೀವಕ್ಕಾಗಿ ಬರೆದ ಹಾಡು ತುಂಬಾ ಮನೋಜ್ಞವಾಗಿದೆ..
ಅಂಕದ ಪರದೆ ಜಾರಿದ ಮೇಲೆ
ನಾಟಕವಿನ್ನು ಉಳಿದಿಹುದೇ,
ವಹಿಸಿದ ಪಾತ್ರ ತೀರಿದ ಮೇಲೆ,
ರಂಗವ ಬಿಡದೆ ನಿಲಲಹುದೆ…
ಯಾಕೋ ಅಲೂರು ಅವರ ಈ ಪುಸ್ತಿಕೆಯ ಎಲ್ಲ ಬರಹಗಳು ಕಾಡುವಂತಿವೆ …
ಇತ್ತೀಚಿಗೆ ಆಲೂರು ಹೊಸಪೇಟೆಗೆ ಬಂದಾಗ ಬಿಲ್ಲಾಡಿ, ಸೃಜನ್, ಪಲ್ಲವ ವೆಂಕಟೇಶ್ ಒಂದಿಷ್ಟು ಹರಟಿದೆವು. ಅವರು ಹಾಯ್ ಬೆಂಗಳೂರುನಲ್ಲಿ ಬರೆಯುತ್ತಿರುವಾಗಿನಿಂದ ನನ್ನ ಆತ್ಮಿಯರಾಗಿದ್ದಾರೆ. ಅವರ ಬರಹ ಚಿಂತನೆ ಹಾಗು ಪ್ರೀತಿಯ ಮೂಲಕ ..






Beautiful
nice
🙂 very nice Ravi Varma’ravare
ಇವೆಲ್ಲ ಸಾರ್ವಕಾಲಿಕ ಹಾಡುಗಳು. ಅಂಕದ ಪರದೆ ಇದೆಯಲ್ಲ ಆ ಹಾಡು ಯಾವ ಕವಿತೆಗಿಂತ ಕಡಿಮೆ ಹೇಳಿ.