ಗೌರಿ ಲಂಕೇಶ್ ಹುತಾತ್ಮರಾದ ದಿನವಾದ ಇಂದು ಬೆಳಗ್ಗೆ ಪ್ರಗತಿಪರ ಚಿಂತಕರು ಅವರ ಸಮಾಧಿಗೆ ತೆರಳಿ ಸ್ಮರಣಾ ಸಭೆಯನ್ನು ನಡೆಸಿದರು.
ಕನ್ನಯ್ಯ ಕುಮಾರ್ ಹಿರಿಯರಾದ ಹೆಚ್ ಎಸ್ ದೊರೆಸ್ವಾಮಿ ಬರಗೂರು ರಾಮಚಂದ್ರಪ್ಪ, ಕವಿತಾ ಲಂಕೇಶ್ ಸೇರಿದಂತೆ ಹಲವು ಮುಖ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೆ ಸಂದರ್ಭದಲ್ಲಿ ಗೌರಿ ಟ್ರಸ್ಟ್ ಸ್ಥಾಪಿಸರುವ ಪ್ರಶಸ್ತಿಯನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಗೌರಿ ಟ್ರಸ್ಟ್ ಪ್ರಕಟಣೆ ಹೊರಡಿಸಿ ಗೌರಿ ಕೊಲೆ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
“ಹಿರಿಯ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯಾಗಿ ಇಂದಿಗೆ ಎರಡು ವರ್ಷಗಳಾಗುತ್ತದೆ. ಈ ಭೀಕರ ಹತ್ಯೆ ದೇಶ ವಿದೇಶಗಳಲ್ಲಿ ತಲ್ಲಣ ಸೃಷ್ಟಿಸಿತಲ್ಲದೆ, ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣತೆ, ವ್ಯಕ್ತಿ ಸ್ವಾತಂತ್ರ‍್ಯದ ಮೇಲಿನ ದಾಳಿಯನ್ನು ಯಾವ ಅನುಮಾನವೂ ಇಲ್ಲದಂತೆ ದೃಢೀಕರಿಸಿತು. ಗೌರಿ ಹತ್ಯೆಯನ್ನು ಕುರಿತು ವಿಚಾರಣೆ ನಡೆಸಿರುವ ವಿಶೇಷ ತನಿಖಾ ದಳ ಹಿಂದೂ ಮೂಲಭೂತವಾದಿ ಸಂಘಟನೆಯಾದ ‘ಸನಾತನ ಸಂಸ್ಥೆ’ಯ ಜತೆ ನಂಟಿರುವ ಹಲವಾರು ಮಂದಿಯನ್ನು ಆರೋಪಿಗಳನ್ನಾಗಿಸಿದೆ. ಅಲ್ಲದೆ ಇವರಿಗೂ ಮತ್ತು ಪ್ರೊ.ಕಲಬುರ್ಗಿ, ಗೋವಿಂದ ಪಾನ್ಸರೆ ಹಾಗೂ ಡಾ.ನರೇಂದ್ರ ಧಾಬೊಲ್ಕರ್ ಅವರ ಕೊಲೆಗೂ ಸಂಬಂಧವಿದೆ ಎಂಬ ಆಘಾತಕಾರಿ ಸುದ್ದಿಯನ್ನು ಹೊರಹಾಕಿದೆ…
…ಇದು ಸೆಕ್ಯುಲರ್ ಹಾಗೂ ವಿಚಾರವಾದದ ಮೇಲೆ ಮೂಲಭೂತವಾದಿಗಳು ನಡೆಸಿರುವ ವ್ಯವಸ್ಥಿತ ಸಂಚು ಎಂದು ತನಿಖೆ ಎತ್ತಿಹಿಡಿದಿದೆ; ಅಲ್ಲದೆ ಭಾರತ ಫ್ಯಾಸಿಸಂ ಕಡೆ ವಾಲುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆ ಒಂದು ತಾರ್ಕಿಕ ಘಟ್ಟವನ್ನು ಆದಷ್ಟು ಬೇಗ ತಲುಪಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಗೌರಿ ಸ್ಮಾರಕ ಟ್ರಸ್ಟ್ ಈ ಸಂದರ್ಭದಲ್ಲಿ ಒತ್ತಾಯಿಸುತ್ತದೆ”.
0 Comments