-ಪ್ರಕಾಶ್ ಶ್ರೀನಿವಾಸ್
ನಮಗೆಲ್ಲ ತುಂಬಾ ಇಷ್ಟ ಆಗೋದು ಯಾವಾಗಲೂ ಗೆಳೆಯರೇ!
ಸಂಬಂಧಿಕರು ಯಾರಿಗೂ ಅಷ್ಟು ಬೇಗ ಇಷ್ಟ ಆಗುವುದಿಲ್ಲ….
ಕಾರಣ ಸ್ನೇಹಿತರಲ್ಲಿ ಆಯ್ಕೆಯ ಸ್ವತಂತ್ರ ಇದೆ..
ನಮ್ಮ ವಿಷಯವನ್ನು ನಮಗೆ ಆಗದ ಗೆಳೆಯರು ಸ್ವಲ್ಪ ಜನಕ್ಕೆಮಾತ್ರ ಹೇಳುವುದಕ್ಕೆ ಸಧ್ಯ ಅದೇ
ಸಂಬಂಧಿಕರು ನಮಗೆ ಗೊತ್ತಿರೋ ಎಲ್ಲ ಸಂಬಂಧಿಕರೂ ಅವರಿಗೆಗೊತ್ತಿರುತ್ತೆ ನಮ್ಮ ಬಗ್ಗೆ ಇಲ್ಲದ ಸಲ್ಲದ ಮಾತೆಲ್ಲ ಎಲ್ಲರಿಗೂ ಹೇಳಿರುತ್ತಾರೆ ….
ಇದು ಸಹ ತುಂಬಾ ಜನಕ್ಕೆ ಸಂಬಂಧಿಕರನ್ನ ದೂರ ಇಡಲು ಒಂದು ಕಾರಣ .
ನಮಗೆ ಒಬ್ಬ ಗೆಳೆಯ ಇಷ್ಟಆಗಲಿಲ್ಲ ಅಂದರೆ ಅವನ್ನು ನಾವು ನಮ್ಮೆಲ್ಲ ವಿಷಯದಿಂದಲೂ ದೂರ ಮಾಡಬಹುದು,
ಅದೇ ಸಂಬಂಧಿಕರನ್ನಹಾಗೆ ಮಾಡಲು ಆಗುವುದಿಲ್ಲ ‘
ಯಾವುದೋ ಮದುವೆ ಅತವ ಯಾವುದೋ ಸಮಾರಂಭದಲ್ಲಿ ನೋಡಲೇ ಬೇಕೇ.
ನನ್ನ ಕೆಲವು ಗೆಳೆಯರನ್ನು ಕೇಳಿದ್ದೀನಿ ನಿಮಗೆ ತುಂಬಾ ಇಷ್ಯವಾದ ಸಂಬಂಧಿಕರುಯಾರು ಅಂತ ಅವರು ನನ್ನ ಮಾಮ ಇಷ್ಟ..ನನ್ನ ಚಿಕ್ಕಪ್ಪ ಇಷ್ಟ ಅಂತಾರೆ ಯಾಕೆ ಅಂತ ಕೇಳಿದರೆ
ಅವನು ತುಂಬಾ FRIENDLY ಆಗಿರ್ತಾರೆ!!
ಚೆನ್ನಾಗಿ ಮಾತನಾಡಿಸುತ್ತಾರೆಅನ್ನೋದು ಅವರ ಉತ್ತರ!
ಇನ್ನೂ ಕೆಲವರಿಗೆ ಕೇಳಿದ್ದೀನಿ ನಿಮಗೆ ಯಾಕೆ ಗೆಳೆಯರು ಇಷ್ಟ ಅಂತ ಅವರು
ನನಗೆ ಏನಾದರೂ ಒಂದು ಸಣ್ಣ ತೊಂದರೆ ಅಂದರೂ ಅವರು ಬಂದು ಸಹಾಯ ಮಾಡುತ್ತಾರೆ..
ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು …
ಸಂಬಂಧಿಕರೊಳಗೆ ಇಷ್ಟ ಆಗೋ ಹಾಗೆ ಒಬ್ಬ ‘ಗೆಳೆಯ’ ಇದ್ದರೆ ನಮಗೆ ಇಷ್ಟಆಗುತ್ತೆ !
ಗೆಳೆಯರ ಒಳಗೆ ನಮಗೆ ಸಹಾಯ ಮಾಡುವ ಹಾಗೆ ಒಬ್ಬ ‘ಸಂಬಂಧಿಕ’ ಇದ್ದರೆ ನಮಗೆ ಇಷ್ಟಆಗುತ್ತೆ!
ನಾವು ಎಷ್ಟೇ ಸಂಬಂಧಿಕರನ್ನು ದೂರ ಮಾಡಿ ಬಿಡುತ್ತೇವೆ ಕಾರಣ
ಸಣ್ಣದೆ ಇದ್ದರೂ ಮತ್ತೆ ಹೋಗಿ ಮಾತಾಡಿಸಕ್ಕೆ ನಮ್ಮ EGO ಬಿಡಲ್ಲ ..
ನಾನು ನನ್ನ ಒಬ್ಬ ಫ್ರೆಂಡ್ ಹತ್ರ ಕೇಳಿದ ಯಾಕೋ ನಿಮಗೂ ನಿಮ್ಮ ದೊಡ್ದಪ್ಪಗೂ ಆಗಲ್ಲ ಅಂತ ?
ಅವನು ಅದೆಲ್ಲ ನನಗೆ ಗೊತ್ತಿಲ್ಲ ನಮ್ಮ ಅಪ್ಪ ಹೇಳಿದ್ದಾರೆ 20ವರುಷದಿಂದ ಅವರಿಗೂನಮಗೂ ಆಗಲ್ಲ ಅಂತ ಅದಕ್ಕೆ ನಾವು ಅವರ ಜೊತೆ ಮಾತಾಡಲ್ಲ ಅಂತಾನೆ …
ಕಾರಣ ಏನು ಅಂತಾನೆ ಗೊತ್ತಿಲ್ಲ !!
ಇದು ಹೀಗ ತಲೆ ತಲೆ ಮಾರಿಗೆ ಮುಂದುವರೆಯುತ್ತೆ …
ಸಣ್ಣ ಸಣ್ಣ ಕಾರಣಕೆಲ್ಲ ದೂರ ಆಗಿರೋ ಸಂಬಂಧಗಳನ್ನ ನೋಡಿದ್ದೀನಿ
ಲಗ್ನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ, ಮದುವೆಯಲ್ಲಿ ಮೊದಲಪಂದಿಯಲ್ಲೇ ಊಟ ಹಾಕಿಲ್ಲ ಅಂತೆಲ್ಲ..
ಹೋದ ವರುಷ ಮಂಡ್ಯದಲ್ಲಿ
ಬಾಡೂಟದಲ್ಲಿ ಯಾರಿಗೂಸರಿಗೆ ಮಾಂಸ ಹಾಕಿಲ್ಲ ಅಂತ
ಎರಡು ಮನೆಯವರು ರಕ್ತ ಬರುವ ಹಾಗೆ ಹೊಡೆದಾಡಿ ಪೇಪರ್ ನಲ್ಲಿ ಎಲ್ಲ ಬಂತು.
ಅಂದು ಅದೆಲ್ಲ ದೊಡ್ಡ ಘಟನೆಗಳು ಅನಿಸುತ್ತದ ಕಾಲ ಕಳೆದ ಹಾಗೆ ಅದೆಲ್ಲ ನಗುತರಿಸುವ ಒಂದು
ವಿಷಯವಾಗುತ್ತೆ!…
ಸಣ್ಣ ಪುಟ್ಟ ಜಗಳದಿಂದ ದೂರ ಆದ ಸಂಬಂಧಿಕರನ್ನು ನಾವೇ ನಮ್ಮ EGO ಬಿಟ್ಟು ಮದುವೆಯಲ್ಲೋಇನ್ಯಾವುದೋ ಸಮಾರಂಭದಲ್ಲೋ ಮಾತಾಡಿಸೋಣ .
ಸಂಬಂಧಿಕರನ್ನ ನಿಭಾಯಿಸಿದೋ ಸಹ ಒಂದು ಕಲೆ ಅದನ್ನ ತಿಳಿದರೆ
ನಾಳೆ ಗೆಳೆಯರನ್ನ ಇನ್ನೂ ಸುಲಭವಾಗಿ ನಿಭಾಯಿಸಬಹುದು!
]]>



nice writeup
hi Prakash..
true facts u exposed in urs article… very good article.. and urs others poems and small wording s r really good…. all the best for urs literature journey……
Thumba Chenagide……..
Nanage Thumba Ista Aythu……
Lekhana tumba chennagi moodi bandide, kelavondu vele appa ammana attira elikollodikkagadiro vishayavannu snehitara hattira hanchikondu samadana, santvana padedukollutteve, your right think about friendship,,,,,,,,,,!
ಪ್ರಕಾಶ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ!
ಬದುಕಿನಲ್ಲಿ ಗೆಳೆಯರು ಸಂಬಂಧಿಕರು ಇಬ್ಬರೂ ಸಹ ಎರಡು ಕಣ್ಣುಗಳ ಹಾಗೆ ಅನ್ನೋದನ್ನ ವಿವರಿಸಿದ್ದಿರ ಸುಂದರ! ಶುಭವಾಗಲಿ!
ಪ್ರಕಾಶ್ ನಿಮ್ಮ “ಗೆಳೆಯರು & ಸಂಬಂದಿಕರು” ಲೇಖನ ಅರ್ಥ ಪೂರ್ಣವಾಗಿ ಮೂಡಿಬಂದಿದೆ … ಮೊದಲ ಬಾಲಿನಲ್ಲೇ ಸಿಕ್ಸರ್ ಬಾರಿಸಿದ್ದೀರಿ, ಸ್ನೇಹಿತರ ಗುಣಲಕ್ಷಣ ವಿರುವ ಸಂಬಂಧಿಕರು ಇಷ್ಟವಾಗುತ್ತಾರೆ ಎಂಬ ಸತ್ಯವನ್ನು ನಿಮ್ಮ ಲೇಖನದಲ್ಲಿ ತಿಳಿಸಿದ್ದೀರಿ ಅದು ಸತ್ಯ ಕೂಡ ಹಾಗು ನನ್ನ ಸ್ವಂತ ಅನುಭವವೂ ಹಾಗಿದೆ, ಧನ್ಯವಾದಗಳು ಶುಭವಾಗಲಿ,
TUMBAA OLLETA VICHARA PRAKASH “ಸಣ್ಣ ಪುಟ್ಟ ಜಗಳದಿಂದ ದೂರ ಆದ ಸಂಬಂಧಿಕರನ್ನು ನಾವೇ ನಮ್ಮ EGO ಬಿಟ್ಟು ಮದುವೆಯಲ್ಲೋಇನ್ಯಾವುದೋ ಸಮಾರಂಭದಲ್ಲೋ ಮಾತಾಡಿಸೋಣ .ಸಂಬಂಧಿಕರನ್ನ ನಿಭಾಯಿಸಿದೋ ಸಹ ಒಂದು ಕಲೆ ಅದನ್ನ ತಿಳಿದರೆ…ನಾಳೆ ಗೆಳೆಯರನ್ನ ಇನ್ನೂ ಸುಲಭವಾಗಿ ನಿಭಾಯಿಸಬಹುದು!””” EE MAATU NIBHAAYISUVANTADDE
ಒಳ್ಳೆಯ ಲೇಖನ ಇಷ್ಟ ಆಯಿತು!
sir very nc lines dear so i think sambanda annodu karalu ida hage ondu vele kanno hariyadi idru karalu hariuthi bt snehu annodu stars ida hage yavude chanda marutha bandru haluagadalal so freinds fr ever…………………….
ಮತ್ತಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿ!
ಅಭಿನಂದನೆಗಳು ಸುಂದರವಾದ ಲೇಖನ ಮನಸಿಗೆ ಹಿಡಿಸಿತು!
ಎಲ್ಲರೂ ನಮ್ಮವರೇ ಅಂತ ನೋಡಿದರೆ ಯಾವುದು ಕಷ್ಟ ಆಗಲ್ಲ!
ಇಷ್ಟ ಆಯಿತು ಪ್ರಕಾಶ್ ಅವಧಿಯಲ್ಲಿ ನಿಮ್ಮ ಮೊದಲ ಲೇಖನ ತುಂಬಾ ಚೆನ್ನಾಗಿದೆ ಮುಡಿ ಬಂದಿದೆ!
hi prakash, gud artical. wish unall the best.
hi prakash gud artical
wish u all the best
ನಾವು ಮತ್ತು ನಮ್ಮವರು ಅನ್ನುವ ಮಧ್ಯೆ ಇರುವ ಮನಸ್ಸಿನ ಅಂತರವನ್ನು ಸ್ಪಷ್ಥವಾಗಿ ತೆರೆದಿಟ್ಟಿದೆ. ಈ ಲೇಖನ ತುಂಬಾ ಚೆನ್ನಾಗಿದೆ. ಹೊಗಳುವುದು ಅಲ್ಲ, ಹೀಗೆ ಬರೆಯಲು ಯಾವುದೇ ಹೆಸರು ಪಡೆದ ಬರಹಗಾರ, ಸಾಹಿತಿ,ವಿಚಾರವ೦ತರಿಗೂ ನಿಲುಕದ ಮಾತು ಅಂತ ಅನ್ನಿಸಿತು. ಈ ಬಗ್ಗೆ ಬೇಕಾದಷ್ಟು ಕಾದಂಬರಿ ,ಕಥೆ ,ಕವಿತೆ ,ಲೇಖನಗಳು, ವಿಚಾರ ಸಂಕಿರಣಗಳು, ಅಸಮಾನ್ಯರೆನ್ನುವವರ ಭಾಷಣಗಳು ಸಾಮಾನ್ಯರ ಅರ್ಥಕ್ಕೆ ನಿಲುಕದ ಮಾತುಗಳನ್ನು ಹೇಳಿದ್ದವು. ಈ ಲೇಖನ ನಮ್ಮೊಂದಿಗೆ ಮಾತಾಡಿದಂತೆ ಮಾತಾಡುತ್ತಿದೆ. ಹಂಚಿಕೊಂಡಿದ್ದಕ್ಕೆ ಅವಧಿಗೆ ನಮನಗಳು. ಬರಹ ಹೀಗೆ ನೇರವಾಗಿರಬೇಕು. ನೇರವಾಗಿ ಮನಸ್ಸಿಗೆ ನುಗ್ಗುತ್ತದೆ.
ಪ್ರಕಾಶ್ ತುಂಬಾ ಇಷ್ಟವಾಯಿತು ನಿಮ್ಮ ಈ ಲೇಖನ…..ಇಂದಿನ ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಗೆ ತುಂಬಾ ಹತ್ತಿರವಾಗಿದೆ……….ಶುಭವಾಗಲಿ.!!!!
yes…,very true 🙂
good artical.all the best.
ನನ್ನ ಮೊದಲ ಲೇಖನಕ್ಕೆ
ನಿಮ್ಮೆಲ್ಲರ ಮೆಚ್ಚುಗೆಯ ನುಡಿಗಳನ್ನು ಕೇಳಿದ ಮೇಲೆ
ನನಗೆ ಮತ್ತಷ್ಟು ಬರೆಯುವ ಸ್ಫೂರ್ತಿ ಸಿಕ್ಕಿದೆ ಧನ್ಯವಾದಗಳು ಗೆಳೆಯರೇ!
ಅವಧಿಗೆ ಮನದಾಳದ ವಂದನೆಗಳು ನನ್ನ ಲೇಖನವನ್ನು ಪ್ರಕಟಿಸಿರುವುದಕ್ಕೆ!
ನಿಜ ಪ್ರಕಾಶ ನಿಮ್ಮ ಲೇಕನ ನೀವು ಬರದಷ್ಟೆ ಸತ್ಯ
ಎಲರಲ್ಲು ನಾವು ಸ್ನೆಹವನ್ನೆ ಹುಡುಕುವುದು ಸ್ನೇಹ ಒಂದು ಅಂತಹ ಸಂಬಂಧ ಅದಕ್ಕೆ ಯಾವ ಅಡೆ ತಡೆಗಳು ಇಲ್ಲ ನಿಮ್ಮ ಮನಸ್ಸಿನ ಎಲ್ಲ ಭಾವ ಎಲ್ಲ ನೋವು ಹಂಚಿಕೊಳ್ಳಬಹುದು ಅದನ್ನೆ ನಾವು ಸಂಬಂಧಗಳಲ್ಲಿ ನೋಡಿದಾಗ ಅಮ್ಮ ಸ್ನೆಹಿತಳಾದರೆ ಮಕ್ಕಳ ದಾರಿ ತಪ್ಪುವುದಿಲ್ಲ ಅಪ್ಪ ಸ್ನೆಹಿತರಾದರೆ ಒಳ್ಳೆ ಮಾರ್ಗದರ್ಶನ
ತಂಗಿ ಸ್ನೆಹಿತಳಾದರೆ ಒಳ್ಳೆ ಒಡನಾಟ , ಅಣ್ಣ ತಮ್ಮಂದಿರು ಸ್ನೆಹಿತರಾದರೆ ನಮ್ಮ ಜೀವನದಲ್ಲಿ ಪ್ರತಿ ಹೆಜ್ಜೆಗೂ ನಮಗೆ ಅವರೆ ನಮ್ಮ ಕಾವಲು ನಮ್ಮ ಹಿತೈಶಿ
ಹೀಗೆ ಸ್ನೆಹವಿದ್ದರೆ ಮಾತ್ರ ಅ ಸಂಬಂದಕ್ಕೆ ಒಂದು ಒಳ ನಂಟು ಬೆಳೆಯುವುದು ,
ಗಂಡ ಹೆಂಡತಿಯ ವಿಷಯಕ್ಕೆ ಬಂದರೆ ಇಬ್ಬರಲ್ಲೂ ಸ್ನೇಹವಿದ್ದರೆ ಇಂದು ಪ್ರತಿಶತ 60~80 ವಿಚ್ಚೆಧನ ನ್ಯಾಯಾಲಯದಲ್ಲಿ ಕಡತಗಳು ಆಗುತಿರಲಿಲ್ಲ
ಸ್ನೇಹಕ್ಕೆ ಯಾಕೆ ಇಷ್ಟು ಶಕ್ತಿ ಅಂದರೆ ಅದರಲ್ಲಿ ಭಾವನೆಗಳ ಹಂಚಿಕಿಯಲಿ ಅಂಜಿಕೆ ಇರುವುದಿಲ್ಲ ಮುಕ್ತವಾಗಿ ಮಾತನಾಡಬಹುದು ಕೆಟ್ಟದ್ದು ಒಳ್ಳೇದು
ಅರ್ಥವಾಗದ್ದು ಅಪನಂಬಿಕೆ , ದ್ವೇಶ ಅಸೂಯ್ಯೆ ಮಾತ್ಸರ್ಯ ಯಾವುದಕ್ಕೂ ಎಡೆ ಇರುವುದಿಲ್ಲ ಒಂದು ನಿರ್ಮಲ್ ಸ್ನೇಹ ಭಾವ ಸಾಕು ನಮ್ಮ ಜೀವನದ ಸಾರ್ಥಕತೆಗೆ , ಸ್ನೆಹದಲ್ಲು ತೊಡಕುಗಳು ಉಂಟು ಕೆಲೊವೊಮ್ಮೆ ಆದರೆ ಮುಕ್ತಾ ಚರ್ಚೆ ಕೆಲೊವೊಮ್ಮೆ ತಪ್ಪು ಅಂದಾಜು ತಪ್ಪು ಆಯ್ಕೆಗಳು ಬರುತ್ತವೆ
ನಿಮ್ಮ ಲೆಕನ ಓಡಿ ನನ್ನೊಳಗಿದ್ದ ಇಷ್ಟು ವಿಚಾರ ಹೊರಗೆ ಬಿತ್ತು ಧನ್ಯವಾದಗಳು
ಪ್ರಕಾಶ್ ತುಂಬಾ ಇಷ್ಟವಾಯಿತು ನಿಮ್ಮ ಈ ಲೇಖನ…..ಇಂದಿನ ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳಿಗೆ ತುಂಬಾ ಹತ್ತಿರವಾಗಿದೆ……….ಶುಭವಾಗಲಿ.!!
ಬಹಳ ಚೆನ್ನಾಗಿದೆ ನಿಮ್ಮ ಬರಹ…. Wish u all d best ಗೆಳೆಯ
Super Putta
ಎಲ್ಲಾ ಸಂಬಂಧಗಳು ಏನನ್ನಾದರೂ ಬೇಡುತ್ತವೆ ..ಆದರೆ ಸ್ನೇಹವೇ ಒಂದು ಸಂಬಂಧ ವಿಶಿಷ್ಟ ವಾದುದು.
ಆದರೆ ನೀವು ಹೇಳಿದ್ದು.ನಿಜ ..EGO ದಿಂದ ಸಂಬಂಧವನ್ನು ದೂರ ಮಾಡದೆ EGO ಬಿಟ್ಟು ಸಂಬಂಧವನ್ನು ನಿಭಾಯಿಸುವುದೇ ಉತ್ತಮ
ತುಂಬಾ ಚೆನ್ನಾಗಿದೆ ನಿಮ್ಮ ಲೇಖನ ..ನಿಮಗೆ ಶುಭವಾಗಲಿ ಪ್ರಕಾಶ್….
So gently narrated nice lines imparting the values of a friends and relatives. you always rocks with spledid writings. Am very pround and lucky to have you as my pet friend.
Nice………….wish u all the best………..
hwodu sambandakkintha gelethana hecchu
gelethana sambandada yella mahatwagalannu meerisutte
gelethanadalli thammella noovu nalivugalannu mukthavaagi hanchikollabahudu
kelavomme paraspara pathi pathni yarallu helikollalagada vichaaragalannu gelethana snehadalli hanchikoluvaru
gelethana sneha eambudu sambandavannu meerisiddu………..
nice prakash nimma kavana channagide.
ಗೆಳೆಯ ಲೇಖನ ತುಂಭಾ ಚೆನ್ನಾಗಿದೆ…ಗೆಳೆಯರು ಮತ್ತು ಸಂಬಂಧಿಕರ ನಡುವಿನ ವಿಶ್ಲೇಷಣೆ ತುಂಭಾ ಚೆನ್ನಾಗಿ ಮೂಡಿ ಬಂದಿದೆ.
thumba chennagi bardidheera prakash…ista aithu …wish u all the best bro …
ನಿಮ್ಮ ಬರವಣಿಗೆಯ ತಾಕತ್ತು ನಿಮ್ಮನ್ನು ಎತ್ತರೆತ್ತರಕ್ಕೆ ಕೊಂಡೊಯ್ಯುವದು.ಅದ್ಭುತ ಸಂವೇದನೆಯ ಲೇಖನವನ್ನು ಉಣಬಡಿಸಿದಿರಿ.ಶುಭವಾಗಲಿ ಗೆಳೆಯ.ಬರವಣಿಗೆ ನಿರಂತರವಾಗಿ ಸಾಗಲಿ.
Well said Prakash.. If we expect a change, First we need to change! 🙂