ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ- ಬಿಟ್ಟುಕೊಡುವುದರಿಂದ'

ಮುಖಾಮುಖಿ

ಕೆ ವಿ ತಿರುಮಲೇಶ್

1

ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ

ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು

ಹಠಾತ್ತನೆ ನಿಂತಿತ್ತು. ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು.

ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ

ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ.

ತುಸು ಸಮಧಾನದಿಂದ ನನ್ನ ಕಡೆ ನೋಡಿತು

ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು

ಮುಖ ತಿರುಗಿಸುವುದು ಎಂಬ ಒಂದು ವಿಧದ

ಅಘೋಷಿತ ಯುದ್ದದಲ್ಲಿ ಇಬ್ಬರೂ ತೋಡಗಿದೆವು.

ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ

ಎಂದು ನನಗೆ ಗೂತ್ತಿರಲಿಲ್ಲ.

 

2

ಸೆಟೆದ ಬಾಲ, ನಿಮಿರಿದ ಕೂದಲು, ಕಾಲುಗುರು-

ಒಟ್ಟಾರೆ ಹೂಡಿದ ಬಿಲ್ಲಿನಂತಿರುವ ಬೆಕ್ಕು

ಆಕ್ರಮಿಸಿತ್ತೀಗ ನನ್ನ ಇಡೀ ದೃಷ್ಟಿ ಪರಿದಿಯನ್ನು-

ದಾರಿ ತಪ್ಪಿದಂತೆ ನಾನು ಚರಿತ್ರಪೂರ್ವ ಭೂಖಂಡಗಳಲ್ಲಿ

ಬಿದ್ದಂತೆ ಅಪರಿಚಿತ ಸಮುದ್ರಗಳಲ್ಲಿ.ಆದರೂ

ಎವೆಯಿಕ್ಕಲಿಲ್ಲ ನಾನು. ಎವೆಯಿಕ್ಕಲಿಲ್ಲ ಬೆಕ್ಕು.

ಮನುಷ್ಯ ಮತ್ತು ಮೃಗಕ್ಕೆ ಮೂಲಭೂತವಾದ

ಯಾವುದೋ ಸ್ಥಿತಿ ವಿಶೇಷದಲ್ಲಿ ನಿಂತಿತ್ತು ನನ್ನೆದುರು

ಬೆಕ್ಕಿಗೆ ಬೆಕ್ಕೇ ಛಲವಾಗಿ.

ಒಂದು ಬೆಕ್ಕಿನ ಕಣ್ಣುಗಳು ಇಷ್ಟು ಅನಾಥವಾಗಿರುತ್ತದೆ

ಎಂದು ನನಗೆ ಗೂತ್ತಿರಲಿಲ್ಲ.

 

3

ಕೂನೆಗೂ ಸೋತದ್ದು ಮೃಗವೆ. ಅಥವಾ ಹಾಗೆಂದುಕೂಂಡುದು

ನಾನು. ಆ ಸೆಟೆದ ಮೈ ಕ್ರಮೇಣ ನುಸುಲಾಗಿ

ಹೊರಟು ಹೋಯಿತು ಬೆಕ್ಕು ಬೆಕ್ಕಿನ ಗತಿಯಲ್ಲಿ .

ಹೀಗೆ ನನ್ನ ದೃಷ್ಟಿ ಒಮ್ಮಲೆ ಖಾಲಿಯಾದಾಗ

ಅನ್ನಿಸಿತು ನನಗೆ-ಒಪ್ಪಿಕೂಳ್ಳಬಹುದಿತ್ತು ನಾನು

ಬೆಕ್ಕಿಗೆ ಬೆಕ್ಕನ ಸ್ವಾಭಿಮಾನ. ಅಷ್ಟಕ್ಕೂ ನಾನು ಗಳಿಸಿದ್ದೇನು?

ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ –

ಬಿಟ್ಟುಕೊಡುವುದರಿಂದ.

 

ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ

ಎಂದು ನನಗೆ ಗೂತ್ತಿರಲಿಲ್ಲ.

‍ಲೇಖಕರು Admin

18 December, 2015

16 Comments

  1. shanthi k.a.

    super super super sir…

  2. Sushrutha Dodderi

    Whatte kavithe marayare idu maathra..

  3. SunilHH

    ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ –
    ಬಿಟ್ಟು ಕೂಡುವುದರಿಂದ.

    Brilliant 🙂

  4. anu pavanje

    ಅದ್ಭುತ….!!!

  5. manorama hejmadi

    adbhuta sir

  6. ಚಂದಿನ

    ನನ್ನನ್ನು ಬಹಳ ಕಾಡುವ ಕವನ…

  7. sunil rao

    This is wowwow

  8. Ramakrishna

    “ಬಿಟ್ಟು ಕೂಡುವುದರಿಂದ” – “ಬಿಟ್ಟುಕೊಡುವುದರಿಂದ” ಇರಬೇಕಿತ್ತು ಅಲ್ಲವೆ?

    • G

      thanks, carried the correction

  9. Kajooru sathish

    nice..

  10. bharathi b v

    Eduru setedu ninthavaru soloppi hinde saridaaga vishadavonde uliyuvudu.. ..

  11. Prabhakar Nimbargi

    Bittukoduvdarinda geluvu saadhisidare, geluvu saadhisutteve emba utsahaveke?

  12. ಎನ್ವೀ ವೈದ್ಯಹೆಗ್ಗಾರ್

    chennagide.

  13. mmshaik

    nice..

  14. ahalyaballal

    ಅಬ್ಬಬ್ಬಾ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading