ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಟ್ಟು ಹೇಳುವ ಶಾಯಿ!

24sun5.jpgಭ್ರೂಣ ಹತ್ಯೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೆಲ್ತ್ ಡಿಪಾರ್ಟ್ಮೆಂಟಿನ ಕೆಲವು ಮೀಟಿಂಗುಗಳಲ್ಲಿ ಪಾಲ್ಗೊಳ್ಳೋ ಅವಕಾಶ ಸಿಕ್ಕಿತ್ತು. ಆಗ ಆರೋಗ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ ವೇಳೆ ನನಗೆ ಗೊತ್ತಾದ ಸಂಗತಿಗಳು ನಿಜಕ್ಕೂ ಗಾಬರಿ ಹುಟ್ಟಿಸಿದವು. ಭ್ರೂಣದ ಲಿಂಗ ಪತ್ತೆ ಹಚ್ಚೋದು ಬಹಳ ಸುಲಭ. ಇದಕ್ಕಿಂತ ಸುಲಭ ಏನೆಂದರೆ, ಭ್ರೂಣ ಹೆಣ್ಣೊ ಗಂಡೊ ಅನ್ನೋದನ್ನ ಸಂಬಂಧಪಟ್ಟ ಫ್ಯಾಮಿಲಿಗೆ ತಿಳೀಸೋ ವಿಧಾನ. ಅಂಥ ಒಂದು ವಿಧಾನವೆಂದರೆ, ವೈದ್ಯರು ಪ್ರಿಸ್ಕ್ರಿಪ್ಷನ್ ಬರೆಯೋವಲ್ಲಿನ ಚಮತ್ಕಾರ. ಭ್ರೂಣ ಹೆಣ್ಣಾಗಿದ್ರೆ ಕೆಂಪು ಇಂಕಿನಲ್ಲಿ ಬರೆಯೋದು. ಗಂಡಾಗಿದ್ದರೆ, ಹಸಿರು ಇಂಕಿನಲ್ಲಿ ಬರೆಯೋದು. ನೋಡುವವರಿಗೆ ಮಾತ್ರ ಎಲ್ಲ ಪ್ರಿಸ್ಕ್ರಿಪ್ಷನ್ನುಗಳ ಹಾಗೆ ಇದೂ ಒಂದು.

ಇನ್ನೂ ಒಂದು ವಿಧಾನ ಇದೆ. ಭ್ರೂಣ ಹೆಣ್ಣಾಗಿದ್ರೆ ತಾಯಿಗೆ ಡಾಕ್ಟ್ರನ್ನ ಭಾನುವಾರ ಭೇಟಿಯಾಗೋಕ್ಕೆ ಹೇಳೋದು. ಇಲ್ಲಾಂದ್ರೆ ಸೋಮವಾರ.

ಈ ಒಂದಂಶ ಗಮನಿಸಿದರೇ ಗೊತ್ತಾಗುತ್ತೆ, ಇದು ಕಾನೂನು ಅಥವಾ ನಿಯಮಗಳಿಂದ ಬಗೆಹರಿಯೋ ಅನಿಷ್ಠ ಅಲ್ಲ ಅಂತಾ.

ಶ್ರೀ

‍ಲೇಖಕರು avadhi

7 August, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading