ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು.
ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ ಹಾಗೂ ಬಿ.ಸಿ.ಎ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಇವರ ಹಲವು ಕತೆ,ಕವಿತೆಗಳನ್ನು ಬೆಂಗಳೂರಿನ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪೂರಕ ಪಠ್ಯಗಳಾಗಿ ಬಳಸಿಕೊಂಡಿದೆ.
ಇದೆ ಅವಧಿಯಲ್ಲಿ ಪ್ರಸಾರವಾದ ‘ಸೊಳ್ಳೆ ಫ್ತೆಂಡು ಒಳ್ಳೆ ಫ್ರೆಂಡು’ ಕೃತಿಗೆ ಜಿ.ಬಿ ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, ಕಲಬುರಗಿ ಯ ಕನ್ನಡ ನಾಡು ಓದುಗರ ಹಾಗೂ ಲೇಖಕರ ಸರಕಾರಿ ಸಂಘದ’ ಉತ್ತಮಕಾದಂಬರಿ ಪ್ರಶಸ್ತಿ ದೊರಕಿದೆ.
ಪೆಣ್ಣತ್ತ ಖುಷಿಗೆ ಕಸಾಪದ ಕುಂಭಾಸ ಹಾಸ್ಯ ಸಾಹಿತ್ಯ ದತ್ತಿ ಗೌರವ, ಚಾರ್ಲಿ ಚಾರ್ಲಿ ವೇರ್ ಆರ್ ಯೂ ಕೃತಿಗೆ ಜನಸಿರಿ ಸಾಹಿತ್ಯ ಪ್ರಶಸ್ತಿ ದೊರಕಿದೆ. ಹಲವು ಪತ್ರಿಕೆಗಳಲ್ಲಿ ಇವರ ಕತೆ, ಕವಿತೆ, ನಾಟಕ, ಪ್ರಬಂಧ, ಹಾಸ್ಯ ಬರೆಹಗಳು ಪ್ರಕಟವಾಗಿವೆ.
ಭಾಗ – ೬
ಮರುದಿನ ಹೋಲಿ ಸ್ಕೂಲ್ ತಂಡದೊ೦ದಿಗೆ ನಮ್ಮ ಪಂದ್ಯ. ಟಾಸ್ ಗೆದ್ದು ಬ್ಯಾಂಟಿ೦ಗ್‌ನ್ನು ನಮ್ಮ ತಂಡದ ನಾಯಕ ರಾಮು ಆಯ್ಕೆ ಮಾಡಿಕೊಂಡ. ಬೌಲಿಂಗ್ ಪಿಚ್ ನಲ್ಲಿ ಬ್ಯಾಟಿಂಗ ಆಯ್ಕೆ ತಪ್ಪು ಎನ್ನುವುದು ಮೂರು ಓವರ್ ಗಳಲ್ಲಿ ಐದು ವಿಕೆಟ್ ಹೋದಾಗ ಅನಿಸಿತು. ಪಿ.ಟಿ ಸರ್ “ಪಂದ್ಯ ನಿನ್ನ ಆಟದ ಮೇಲೆ ನಿಂತಿದೆ. ನೀನು ಮೊನ್ನೆ ಆಡಿದ ಹಾಗೆ ಆಡಬೇಕು” ಎಂದು ಹುರುದುಂಬಿಸಿ ಕಳಿಸಿದರು. ನಾನು ಪಿಚ್‌ಗೆ ಬಂದಾಗ ನನಗೆ ಯಾರು ಸಪೋರ್ಟ ಮಾಡಲಿಲ್ಲ. ಒಳ್ಳೆಯ ಬ್ಯಾಟರ್‌ಗಳೆಲ್ಲ ಔಟಾಗಿದ್ದರು. ಸೋಲು ಖಚಿತ ಎನ್ನುವಂತಹ ಸ್ಥಿತಿ ಇತ್ತು. ನಾನು ರಕ್ಷಣಾತ್ಮಕವಾಗಿ ಆಡತೊಡಗಿದೆ. ಒಂದು ಓವರ್ ಆಡಿ ಒಂದು ರನ್ ಆಡಲು ಸಾಧ್ಯವಾಯಿತು. ಮತ್ತೊಂದು ಓವರ್ ನಲ್ಲಿ ಮತ್ತೆ ಎರಡು ವಿಕೆಟ್ ಬಿತ್ತು. ನನ್ನ ಸರದಿ ಬಂದಾಗ ೨೩ ರನ್ನ ಗಳಿಸಿದ್ದ ನನ್ನ ತಂಡದ ಸ್ಕೋರನ್ನು ನೂರರ ಗಡಿದಾಟಿಸಬೇಕೆಂದು ನಿರ್ಧರಿಸಿದೆ. ಸ್ಪಿನ್ ಬಾಲಿಗೆ ನಾಲ್ಕು ವಿಕೆಟ್ ಉರುಳಿಸಿದ್ದ ಎದುರಾಳಿ ತಂಡದ ಬೌಲರ್ ಬೌಲಿಂಗ್‌ನಲ್ಲಿ ಬೌಂಡರಿ ಆಚೆಗೆ ಅಟ್ಟಿದೆ. ಆಟ ಆರಂಭಿಸಿದ್ದೆ ಅಷ್ಟೆ ನಿರಂತರ ಫೋರ್ ಸಿಕ್ಸರ್ ಗಳಿಂದ ಹತ್ತು ಓವರ್ ನಲ್ಲಿ ನೂರಾ ಮೂರು ರನ್ ಗಳು ಬಂದವು. ನಾನು ಕೊನೆಗೂ ಅಜೇಯನಾಗಿ ಉಳಿದು ಪಿ.ಟಿ ಸರ್ ಅವರ ವಿಶ್ವಾಸಕ್ಕೆ ಪಾತ್ರನಾದೆ.
ಅವರ ಬ್ಯಾಟಿಂಗ್ ಸರದಿ ಬಂದಾಗ ಎದುರಾಳಿ ತಂಡ ನಮ್ಮ ಬೌಲರ್‌ಗಳನ್ನು ಚಚ್ಚಿ ಮೂರು ಓವರ್ ನಲ್ಲಿ ಐವತ್ತು ರನ್ ಮಾಡಿ ಬೀಗುತ್ತಿತ್ತು. ಏಳು ಓವರ್‌ಗೆ ಆಗಲೇ ಎಂಬತೈದು ರನ್ ಗಳಾಗಿದ್ದವು. ಎಂಟನೇ ಓವರ್ ಹಾಕಲು ನನಗೆ ಕೊಟ್ಟರು. ಮೊದಲ ಓವರ್ ನ ಮೊದಲ ಬಾಲನ್ನೆ ಸಿಕ್ಸ್ ಎತ್ತಿದ. ನನ್ನ ಜಂಗಾಬಲ ಉಡಗಿತು. ಪಿ.ಟಿ ಸರ್ “ಡೋಂಟ್‌ವರಿ ಯಾರ್ಕರ್ ಮಾಡು” ಎಂದು ಸೂಚಿಸಿದರು. ಮುಂದಿನ ಬಾಲ್‌ಗಳಿಗೆ ರನ್ ಕೊಡದೆ ಎರಡು ವಿಕೆಟ್ ತೆಗೆದೆ. ಒಂಬತ್ತನೇ ನನ್ನ ಟೀಮ್‌ನ ವೇಗದ ಬೌಲರ್ ಓವರ್ನಲ್ಲಿ ಎಂಟು ರನ್ ಕೊಟ್ಟಾಗ ಒಂದು ಓವರ್ ನಲ್ಲಿ ಗೆಲ್ಲಲೂ ಐದು ರನ್ ಬೇಕಿತ್ತು. ನನ್ನ ನಾಯಕ ತಪ್ಪನ್ನು ನನ್ನ ಮೇಲೆ ಹೋರಿಸಲು ಮುಂದಾಗಿದ್ದ. ಹಾಕಿದ ಮೊದಲ ಬಾಲ್ ವೈಡ್ ಆಯಿತು. ಭಯ ಹೆಚ್ಚಾಗ ತೊಡಗಿತು. ನಂತರದ ನಾಲ್ಕು ಬೌಲ್ ಗಳು ವಿಕೆಟ್ ಕಿತ್ತಿದ್ದವು…
ಎರೆಡು ಬಾಲುಗಳು ನಾಕು ರನ್. ಐದನೇ ಬಾಲು ವೈಡ್ ಆಯಿತು… ಮತ್ತೆ ಆತಂಕ. ಮತ್ತೊಂದು ಬಾಲ್ ಡಕ್ ಆಯಿತು.. ಈಗ ಜಯ ಅರ್ಧ ಅರ್ಧ ಇತ್ತು. ಕೊನೆಗೆ ಹಾಕಿದ ಬೌಲಿಂಗ್ ಬೌಂಡ್ರಿಯತ್ತ ಹೊಡೆದ ಹೋಯಿತು ಪಂದ್ಯ ಅನ್ನುವಷ್ಟರಲ್ಲಿ ಅಲ್ಲಿ ನಿಂತಿದ್ದ ಗೆಳೆಯ ರಫಿ ಹಿಡಿದು ಪಂದ್ಯ ಗೆಲ್ಲಿಸಿದ. ಆ ಓವರ್ ನಲ್ಲಂತೂ ಜೀವವೇ ಕೈಗೆ ಬಂದ ಹಾಗಾಗಿತ್ತು. ನಾನೇ ಪಂದ್ಯ ಪುರುಷೋತ್ತಮನಾದೆ. ನನ್ನ ತಂಡ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದು ಖುಷಿಕೊಟ್ಟಿತ್ತು. ಕೆಲವರು ನನ್ನ ಬಗ್ಗೆ ಅಸೂಯೆನು ಪಟ್ಟಿದ್ದರು.
ಸಂಜೆ ಓಡಿಹೋಗಿ ಮನೆಗೆ ಬಂದು ಮಿ.ಕೈಟ್ ಗೆ ಹೇಳಲು ಬಂದಾಗ ಅದು ಎಲ್ಲಾ ಕಾಮಿಟ್ರಿ ತಾನೇ ಹೇಳಿತು. ಹಾಗಾದರೆ ಇವತ್ತಿನ ಗೆಲವಿಗೆ ಕಾರಣ….
“ತಮ್ಮ ಶ್ರಮ” ಎಂದಿತು.
“ನಿನ್ನದೇನು ಕೈವಾಡವಿಲ್ಲವೇ?” ಎಂದಾಗ
ನನ್ನದೇನು ಇಲ್ಲ ಆದರೆ ನಾಳೆ ನಿನ್ನನ್ನು ಪಿ.ಟಿ. ಸರ್ ನಾಯಕನನ್ನಾಗಿ ಮಾಡುತ್ತಾರೆ. ಹಾಗಾಗಿ ನಿನಗೆ ತೊಂದರೆ ಇದೆ.
“ ಹೌದಾ . . . ? ನನ್ನನ್ನೇಕೆ ನಾಯಕನನ್ನಾಗಿ ಮಾಡುತ್ತಾರೆ?” ಎಂದೆ ಗಾಭರಿಯಾದೆ.
“ನಿನ್ನ ಆಟದಿಂದ ಪಿ.ಟಿ ಸರ್ ರನ್ನು ಇಪ್ರೆಸ್ ಮಾಡಿದ್ದೀಯಾ” ಎಂದು ನುಲಿಯಿತು.
“ಹುಡುಗಿಯರು ಮಾಡಿದಂಗೆ ಯಾಕ ನುಲಿತಿಯಾ? ನೇರವಾಗಿ ಹೇಳು” ಎಂದೆ.
“ನಿಜ, ನನ್ನ ಮಾತು ಸತ್ಯ. ನಾಳೆ ಫೈನಲ್ ಪಂದ್ಯಕ್ಕೆ ನೀನೆ ನಾಯಕನಾಗತೀಯಾ”
“ಖುಷಿಯಿಂದ “ಹೌದಾ . . . ತ್ಯಾಂಕ್ಯೂ ಕೈಟ್. ಬರಿ ಕನಸೆ ಕಾಣುತ್ತಿದ್ದೆ. ಎಲ್ಲವೂ ನನಸಾಗುತ್ತಿವೆ”
“ಖುಷಿ ಪಡಬೇಡಪ. ಅತಿಯಾದ ಖುಷಿ ಸದಾ ಮುಳ್ಳಿನ ಹಾಸಿಗೆ”
“ಅಂದ್ರೆ . . .” ಎಂದೆ
“ನಿನ್ನ ಆಟ ನೋಡಿ ಇವತ್ತು ಉರಿದುಕೊಂಡಿದ್ದಾರೆ. ನಿನ್ನ ನಾಯಕತ್ವದಲ್ಲಿ ಆಡುತ್ತಾರೆ ಎಂದುಕೊ೦ಡಿದ್ದಿಯಾ?”
“ಆಡಬೇಕಲ್ಲ ಶಾಲೆಗಾಗಿ?”
“ನಾಳೆ ನಿನ್ನ ಹೆಸರಿಗೆ ಮಸಿ ಬಡಿಯಲು. ನಿಮ್ಮ ಪಿ.ಟಿ ಸರ್ ನಿರ್ಧಾರ ತಪ್ಪು ಎಂದು ಸಾಬಿತು ಪಡಿಸಲು ಯಾರೂ ಆಡುವುದಿಲ್ಲ”
“ಹಾಂಗಾ೦ತೀಯಾ?”
“ಹಾ೦ಗೆ ಅನ್ನೊದಲ್ಲ . . . ನಾಳೆ ಹೀಗೆ ಆಗೋದು”
“ಭಯಬಂದ೦ತಾಗಿ “ಹಾಗಾದರೆ ನಾನೇನು ಮಾಡಲಿ. ನೀನೇ ಕಾಪಾಡಬೇಕು”
“ಅದಕ್ಕೆ ಹೇಳಿದ್ದು ನಾನು ಕರಿಯದಿದ್ದರೂ ಬರವೆ ಎಂದು”
“ಇವತ್ತು ಬರಲಿಲ್ಲ”
“ನೀನು ಕರಿಯಲಿಲ್ಲ”
“ತಪ್ಪಾಯ್ತು ಫ್ರೆಂಡು. ದಾರಿ ತೋರು. ಏನು ಮಾಡಲಿ?”
“ನೀನು ಏನೂ ಮಾಡಬೇಡ. ನಿನ್ನ ನಾಯಕತ್ವ ಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವವರಿಗೆ ಬುದ್ಧಿ ಕಲಿಸುತ್ತೇನೆ” ಎಂದಿತು…
“ನನಗೆ ಭಯವಾಗುತ್ತಿದೆ ಕೈಟ್” ಎಂದೆ…
“ಡೋಂಟ್ ವರಿ… ನಾನಿದ್ದೇನೆ”É ಎಂದು ಅಭಯಕೊಟ್ಟಿತು..
ಮರುದಿನ ಮ್ಯಾಚ್ ಆರಂಭವಾಗುವುದಕ್ಕೆ ಮುಂಚಿತವಾಗಿ ಎಲ್ಲರನ್ನು ಸೇರಿಸಿದ ಪಿ.ಟಿ ಸರ್ ಫೈನಲ್ ಮ್ಯಾಚ್ ಇದು. ಮಹತ್ವದ್ದು. ಹಾಗಾಗಿ ಈ ಮ್ಯಾಚಗೆ ದಿನಕರನೇ ನಾಯಕನಾಗಲಿ. ನೀವು ಎಲ್ಲ ಸಹಕಾರ ಕೊಡಬೇಕು ಎಂದರು. ಕೈಟ್ ಹೇಳಿದಂತೆ ನಡೆದಿತ್ತು. ಬಹಳ ವರ್ಷದಿಂದ ನಾಯಕನಾಗಿ ಮುನ್ನಡೆಸಿದ್ದ ರಾಮುವಿಗೆ ಎಲ್ಲಿಲ್ಲದ ಕೋಪ ಬಂದಿತು. ಉಪನಾಯಕ ರಾಕೇಶಗೂ ಅದೆ ಸ್ಥಿತಿ. ಉಳಿದವರು ಎಲ್ಲರೂ ತಿಂದುಬಿಡುವ ಹಾಗೆ ದುರುಗುಟ್ಟಿ ನೋಡುವವರೇ ಆಗಿದ್ದರು. ನಾನು “ಬೇಡ ಸರ್, ನನಗೆ ಅನುಭವ ಇಲ್ಲ, ರಾಮುವೇ ನಾಯಕನಿರಲಿ” ಎಂದೆ. ರಾಮುವಿನ ಮುಖ ಅರಳಿತು ಆದರೆ ಮರುಕ್ಷಣದಲ್ಲಿ “ಯರ‍್ಯಾರನ್ನು ಯಾವ ಯಾವ ಟೈಮಲ್ಲಿ ಆಡಿಸಬೇಕು ಎಂಬುದು ಗೊತ್ತಿದೆ. ಆರ್ಡರ್ ಅಂದ್ರೆ ಆರ್ಡರ. ನೀನೆ ಲಿಡರ್, ಎಲ್ಲರೂ ಅವನ ಮಾತು ಕೇಳಬೇಕು ಅಷ್ಟೆ” ಎಂದು ಆರ್ಡರ್ ಮಾಡಿದರು. “ಸರ್. . . ಅದು ಹಾಗಲ್ಲ. ತಂಡ ಗೆಲ್ಲುವುದು ಮುಖ್ಯ. ಎಲ್ಲರೂ ಕೂಡಿ ಯತ್ನಿಸುತ್ತೇವೆ” ಎಂದರೂ ಕೇಳದಾದರು. “ಬೇಗ ರೆಡಿ ಆಗಿ ಹೊತ್ತಾಯಿತು. ಪ್ಲಾನ್ ಮಾಡಿಕೊಳ್ಳಿ. ಗೆಟ್ ಅಪ್ ಗೆಟ್ ಅಪ್” ಎಂದು ಅದೇಶ ನೀಡಿದರು.
ಡ್ರಸಿಂಗ್ ರೂಮಿಗೆ ಬಂದಾಗ “ನಾನು ಇಷ್ಟವಲ್ಲದ ಕೆಲಸವನ್ನು ಪಿ.ಟಿ ಸರ್ ನೀಡಿದ್ದಾರೆ. ನನಗೆ ಈಗಲೂ ಇಷ್ಟವಿಲ್ಲ. ಆದರೆ ಅವರು ಬಿಡುತ್ತಿಲ್ಲ. ನೀವೆಲ್ಲರೂ ನಾಯಕರೆ ಎಮದು ತಿಳಿದುಕೊಳ್ಳಿ. ಈ ಪಂದ್ಯ ಗೆಲ್ಲೋಣ” ಎಂದು ವಿನಂತಿಸಿದೆ.
“ಹೋ. . . ಬನ್ನಿ ಕ್ಯಾಪ್ಟ್ನ್ ಸಾಹೇಬರೆ ಬನ್ನಿ, ಹೋ . . . ಏನೋ ಅಂದ್ರಿ, ಎಲ್ಲರೂ ನಾಯಕರಲ್ವೇ? ನಿನ್ನ ಆಯ್ಕೆ ಮಾಡಿದ್ದಕ್ಕಾಗಿಯೇ ನಿನ್ನೆ ಮುದ್ದಾಂ ನಾವು ಕಾಟಾಚಾರದ ಆಟ ಆಡಿದ್ವಿ. ನಿನ್ನೆ ಸೋತಿದ್ರೆ ನಮ್ಮ ದೊಡ್ಡ ಮೊತ್ತ, ಪಾರ್ಟಿ ಸಿಗುತ್ತಿತ್ತು. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ವಿ. ನಿನ್ನ ಆಯ್ಕೆ ತಪ್ಪು ಎಂದು ಪಿ.ಟಿ ಸರ್‌ಗೆ ತೋರಿಸಬೇಕಿತ್ತು. ಮತ್ತೆ ನಾವು ಲಾಭ ಮಾಡಿಕೊಳ್ಳಬೇಕೆಂದು ಬಯಸಿದ್ರೆ ನೀನು ಬೌಲಿಂಗ್, ಬ್ಯಾಟಿಂಗ್‌ನಲ್ಲೂ ಮಿಂಚಿದಿ. ಹೇಗಾದರೂ ಫೈನಲ್ ಬಂದಿವಿ ಚೆನ್ನಾಗಿ ಆಡೋಣ ಅಂತ ಅಂದುಕೊ೦ಡ್ರೆ. ನಿನಗೆ ಪಿ.ಟಿ ಸರ್ ಪಟ್ಟಕಟ್ಟಿದ್ದಾರೆ. ಇಷ್ಟುದಿನ ಶಾಲೆಗಾಗಿ ಮಾಡಿದ ಸೇವೆ ವ್ಯರ್ಥ ಆಯ್ತು. ಆಯ್ತಪ ಗೆಲ್ಲು ಹೇಗೆ ಗೆಲ್ತಿ ಗೆಲ್ಲು. ಇವತ್ತು ಮತ್ತೆ ಮ್ಯಾಚ್ ಫಿಕ್ಸ್ಂಗ್ ಮಾಡಿಕೊಳುತೀವಿ. ನಾವು ಎಲ್ಲರೂ ಜಿರೋ ಔಟ್ ಆಗೋರಾ, ರ‍್ರಾಬರ‍್ರಿ ಬೌಲಿಂಗ್ ಮಾಡೋರಾ, ನಿನ್ನ ಪಿ.ಟಿ ಮಾಸ್ತರರ ಮರ್ಯಾದೆ ಕಳೆಯೋರಾ” ಎಂದ ರಾಮು. “ಹುಂ . . . ಒಂದು ಮಾತು ಅಪ್ಪಿ ತಪ್ಪಿ ಈ ವಿಷಯನ್ನ ಪಿ.ಟಿ ಸರ್ ಗೆ ತಿಳಿಸಿದೆಯೋ. ನಿನ್ನ ಕತಿ ಅಷ್ಟ” ಎಂದು ಕಣ್ಣು ತಿರುವಿದ ರಾಕೇಶ. ರಾಮು ನನ್ನನ್ನು ದೂಕಿಕೊಂಡು ಹೊರ ನಡೆದ. ನನ್ನ ವಿನಂತಿಯನ್ನು ಲೆಕ್ಕಿಸದೆ ಆಟಕ್ಕೆ ಸಿದ್ದವಾಗ ತೊಡಗಿದರು.
ಮತ್ತೊಮ್ಮೆ ನಾನು ಪಿ.ಟಿ. ಸರ್ ನ್ನು ಭೇಟಿಯಾಗಿ “ಸರ್ ಈಗಲೂ ಕಾಲ ಮಿಂಚಿಲ್ಲ. ನಾನು ನೀವು ಸೂಚಿಸಿದಂತೆ ಆಡುವೆ. ಆದರೆ ನಾಯಕತ್ವ ನನಗೆ ಬೇಡ. ತಂಡದ ಗೆಲವು ಮುಖ್ಯ” ಎಂದು ನನ್ನ ನೋವನ್ನು ತೊಡಿಕೊಂಡೆ. ಅವರು ಹಟಕ್ಕೆ ಬಿದ್ದವರಂತೆ “ನೋ ಚಾನ್ಸ್. ನಿನ್ನ ಮೇಲೆ ಅಪಾರವಾದ ನಂಬಿಕೆ ನನಗಿದೆ. ನೀನೇನು ಯೋಚಿಸಬೇಡ” ಎಂದು ಮತ್ತೊಮ್ಮೆ ಎಲ್ಲರನ್ನು ಕರೆದು “ನೀವೆಲ್ಲಾ ಸಪೋರ್ಟ ಮಾಡಬೇಕು, ಮಾಡ್ತೀರಿ, ಅಷ್ಟೆ” ಎಂದು ಅವರಿಂದ ಒತ್ತಾಯಪೂರ್ವಕವಾಗಿ ‘ಎಸ್’ ಅನಿಸಿದರು.
ನನಗೆ ಎದೆಯಲ್ಲಿ ನಡುಕ. ನಾನು ರಫಿ ಇಬ್ಬರೆ ಶಾಲೆಯ ಗೌರವದ ಬಗ್ಗೆ ಚಿಂತೆ ಮಾಡುತ್ತ ಉಳಿದವರು. ಎಲ್ಲರೂ ಮ್ಯಾಚ್ ಸೋಲ ಬೇಕು, ಪಿ.ಟಿ ಸರ್ ಅವರಿಗೆ ಕೆಟ್ಟದ್ದು ಆಗಬೇಕು, ನಮಗೆ ಅಪವಾದ ತಲೆಕಟ್ಟಬೇಕೆಂದಿದ್ದವರು. ಎಲ್ಲರಿಗೂ ರಿಕ್ವೆಸ್ಟ್ ಮಾಡಿಕೊಂಡು ಗೆಲ್ಲೋಣ. ಇಲ್ಲಿ ಎಲ್ಲರೂ ನಾಯಕರೇ ಎಂದು ವಿನಂತಿಸಿಕೊ೦ಡೆ. ಅವರೆಲ್ಲ ವ್ಯಂಗವಾಡಿದರು.
ಟಾಸ್ ಗೆದ್ದೆ ಪರಿಸ್ಥಿತಿ ಹೀಗಿತ್ತಲ್ಲ, ಹಾಗಾಗಿ ಬೌಲಿಂಗ್ ಆಯ್ದು ಕೊಂಡೆ. ಕೈಟ್‌ನ ನೆನಸಿಕೊಂಡು ಬೌಲಿಂಗ್ ಹಾಕಲು ಕೊಟ್ಟೆ.
ಫಾಸ್ಟ್ ಬೌಲರ್ ಯದ್ವಾ ತದ್ವಾ ಬಾಲಿಂಗ್ ಮಾಡ ಹತ್ತಿದರು. ಒಂದು ಓವರ್ ನಲ್ಲಿ ನಾಲ್ಕು ವೈಡ್ ಮಾಡಿದರು. ಹದಿನೈದು ರನ್ ಕೊಟ್ಟರು. ಎರಡು ಓವರ್ ಹೀಗೆ ರಿಪಿಟ್ ಆದವು. ಭಯ ಹೆಚ್ಚಾಯಿತು. ಕೈಟ್ ನ ನೆನೆಸಿಕೊಂಡೆ. “ಬಾರೋ ಕರುಣೆ ತೋರೊ” ಎಂದು ಮನದಲ್ಲಿ ಅಂದುಕೊAಡೆ. ಅಷ್ಟೆ. ಮುಂದಿನ ಓವರ್ ಮಾಡಲು ಬಂದ ರಾಮು ಮೂವತ್ತ ರನ್ ಕೊಡಲೇ ಬೇಕು ಎಂದು ರ‍್ರಾಬರ‍್ರಿ ಬೌಲಿಂಗ್ ಮಾಡಿದ. ಸರಳವಾಗಿ ಬೌಲಿಂಗ್ ಮಾಡಿದರು ರನ್ ಹೊಡೆಯಲೇ ಇಲ್ಲ. ಕೊನೆಯ ಎರಡು ಬಾಲಗಳನ್ನು ಕಾಟಾಚಾರಕ್ಕೆ ಹಾಕಿದರೂ ಎರಡು ವಿಕೆಟ್ ಬಿದ್ದವು. ರಾಮುವಿಗೆ ಆಶ್ಚರ್ಯ. ರಾಕೇಶನÀ ಬೌಲಿಂಗ್ ನಲ್ಲೂ ಹಾಗೆ ಆಯಿತು. ಸರಳವಾಗಿ ಹೊಡೆಯಲು ಈಜಿ ಬಾಲ್ ಹಾಕಿದ. ಆ ಓವರ್ ನಲ್ಲಿ ಎರಡು ಕ್ಯಾಚ್‌ಗಳನ್ನು ರಫಿ ಹಿಡಿದು ಸಂಭ್ರಮಿಸಿದ. ನನ್ನ ಬೌಲಿಂಗ್ ನಲ್ಲಿ ಕೇವಲ ಒಂದು ವಿಕೇಟ್ ತೆಗೆಯಲು ಸಾಧ್ಯವಾಯಿತು ಆದರೆ ಉಳಿದವರೆಲ್ಲ ಕೂಡಿ ಅರವತ್ತು ರನ್ನಿಗೆ ಕಟ್ಟಿ ಹಾಕಿದ್ದರು. ವಿರಾಮದ ಅವಧಿಯಲ್ಲಿ ಎದುರಾಳಿ ತಂಡದವರು ರಾಮುವಿನೊಂದಿಗೆ ಜಗಳ ತೆಗೆದಿದ್ದರು. “ನನಗೂ ಗೊತ್ತಾಗುತ್ತಿಲ್ಲ, ನಾವು ಮಾತನಾಡಿಕೊಂಡಿದ್ದು ಒಂದು ಆಗುತ್ತಿರುವುದು ಒಂದು” ಎಂದು ರಾಮು ಹೇಳುತ್ತಿದ್ದ. “ಇಲ್ಲ ಇಲ್ಲ, ಎಷ್ಟಾದರೂ ಒಂದೆ ಶಾಲೆಯವರು. ಪಂದ್ಯ ಹೇಗೆ ಬಿಟ್ಟು ಕೊಡುತ್ತೀರಾ? ನಮಗೆ ಮೊಸ ಮಾಡಿದ್ದೀಯಾ. ನಮಗೆ ನಮ್ಮ ದುಡ್ಡು ವಾಪಾಸ್ ಕೊಡು” ಎಂದು ವಾದಿಸುತ್ತಿದ್ದರು. “ಕಾಯಿರೊ, ಈಗ ನೋಡು ಹೇಗಾದರೂ ಬ್ಯಾಟಿಂಗ್ ಇದೆಯಲ್ಲ, ಹೇಗೆ ಔಟಾಗುತ್ತೇವೆ. ನೀವು ನೇರವಾಗಿ ಸ್ಟಂಪ್‌ಗೆ ಬೌಲ್ ಮಾಡಿ. ನಾವು ಟಚ್ ಮಾಡುವುದಿಲ್ಲ. ಹಾಗೆ ಔಟಾಗಿ ಪೆವಲಿಯನ್‌ಗೆ ಹೋಗುತೀವಿ” ಎಂದು ಹೇಳುತ್ತಿದ್ದ. ಗದ್ದಲ ನಡೆಯುತ್ತಿರುವುದನ್ನು ನೋಡಿ “ಏನೋ ಅವರೊಂದಿಗೆ ಮಾತು, ಬನ್ನಿ ಈ ಕಡೆ” ಎಂದು ಪಿ.ಟಿ ಸರ್ ಕರೆದು ಬೈದರು. ಇವರು ಮತ್ತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಖಾತ್ರಿಯಾಯಿತು.

ಎದುರಾಳಿ ತಂಡದ ಇನಿಂಗ್ಸ್ ಆರಂಭವಾಯಿತು. ರಾಮು ತನ್ನ ಎಲ್ಲಾ ಗ್ಯಾಂಗ್‌ನ್ನು ಪ್ರತ್ಯೇಕ ಕರೆದು “ಅವರು ಹಾಕುವ ಬಾಲ್ ನ್ನು ಯಾರು ಟಚ್ ಮಾಡುವಂಗಿಲ್ಲ. ಒಂದು ವೇಳೆ ಟಚ್ ಮಾಡುವ ಸಂದರ್ಭ ಬಂದರೆ ಡಕ್ ಮಾಡಬೇಕಷ್ಟೆ. ಇದು ನನ್ನ ಆರ್ಡರ್” ಎಂದ. “ಆದರೂ ಇಂದು ಗೆಲ್ಲುವ ಮ್ಯಾಚ್ ಅದ. ಇಷ್ಟು ವರ್ಷ ಈ ಟ್ರೋಫಿನ ನಮ್ಮ ಶಾಲೆಯವರು ಗೆದ್ದೆ ಇಲ್ಲ. ಗೆಲ್ಲೋನ” ಎಂದು ಕಿರಣ್ ಹೇಳಿದ. “ನೀನು ಕ್ಲೀನ್ ಬೋಲ್ಡ್ ಆಗಲೇ ಬೇಕು. ರನ್ ಹೊಡದ್ರೆ, ನೀನು ಸ್ಟೇಡಿಯಂ ದಾಟಲು ಆಗೊಲ್ಲ” ಎಂದು ರಾಮು ಆವಾಜ್ ಹಾಕಿದ. ಕಿರಣ್ ಗಪ್ಪಾದ. ಪಿ.ಟಿ ಸರ್, ನನ್ನ ಮೇಲಿನ ಸಿಟ್ಟಿನ ಮೇಲೆ ರಾಮು ಓಪನರ್ ಆಗಿ ಬ್ಯಾಟಿಂಗ್ ಮಾಡಲು ಹೋದ. ಮುದ್ದಾಂ ಔಟ್ ಆಗಲು ಬಂದವ. ಆದರೆ ಎದುರಾಳಿ ತಂಡದವರು ಹಾಕಿದ ಬೌಲನ್ನು ಸ್ವೀಪ್ ನಲ್ಲಿ ಕ್ಯಾಚ್ ಕೊಡಲು ಟಚ್ ಮಾಡಿದ. ಅದು ಎಡ್ಜ್ಗೆ ಟಚ್ ಆಗಿ ಸಿಕ್ಸ್ ಹೋಯಿತು. ಅವನಿಗೂ ಆಶ್ಚರ್ಯ. ಇನ್ನೊಂದು ಬಾಲನ್ನು ಜಸ್ಟ್ ಟಚ್ ಮಾಡಿದ. ಅದು ಫೋರ್ ಹೋಗಿ ಅವನಿಗೆ ಗಾಭರಿ ಮೂಡಿಸಿತು. ಹೀಗೆ ಹಾಗೆ ರನ್ ಮಾಡಬೇಡವೆಂದರೂ ಇಪ್ಪತ್ತು ರನ್ ಹೊಡೆದು ಔಟ್ ಆದ. ರಾಕೇಶನೂ ಟಚ್ ಮಾಡಿದರೂ ಸಿಕ್ಸ್,ಫೊರ್ ಹೊರಟವು. ಸ್ಟೆಪ್ ಇಟ್ಟು ಹೊಡೆಯಲು ಬೇಕಂತಲೆ ಹೋಗಿ ಸ್ಟಂಪ್ ಔಟ್ ಆದ. ನಾಗನ ಸೂಚನೆಯಂತೆ ನಡೆದುಕೊಂಡ. ‘ಜಿರೋಕ್ಕೆ ಔಟಾಗುತ್ತನೆಂದಿದ ರಾಮು, ರಾಕೇಶ ಹೊಡೆದಾದ ಮೇಲೆ ನಾನ್ಯಾಕೆ ಬಿಡಬೇಕು’ ಎಂದು ಕಿರಣ ಚೆನ್ನಾಗಿ ಆಡುತ್ತಿದ್ದ. ರಾಮುವಿನ ಸೂಚನೆಯ ಮೇರೆಗೆ ದಿನೇಶ ಅವನನ್ನು ರನ್‌ವೌಟ್ ಆಗುವ ಹಾಗೆ ಮಾಡಿದ. ನಂತರ ದಿನೇಶನೂ ಬೇಕಂತಲೆ ಸರಿದು ನಿಂತು ಬೋಲ್ಡ್ ಔಟ್ ಆದ.
ನಂತರ ಬಂದವರು ಬೇಗ ಔಟ್ ಆಗಲು ಶುರುಮಾಡಿದಾಗ ಭಯವಾಯಿತು, ಸಾಲಾಗಿ ವಿಕೆಟ್‌ಗಳು ಉರುಳಿದಾಗ ಪಂದ್ಯ ಕೈ ತಪ್ಪುವ ಲಕ್ಷಣ ಗೋಚರಿಸತೊಡಗಿತು. ನಾನು ಮಿ.ಕೈಟ್ ಏನೊ ನಿನ್ನಾ ಆಟ ಎಂದು ಮನಸ್ಸನಲ್ಲಿ ಅಂದು ಕೊಂಡೆ. ‘ಮಿ.ಕೈಟ್, ಮಿ.ಕೈಟ್, ವಾಟ ಆರ್ ಯೂ ಡುಯಿಂಗ್’ ಎಂದಾಗ ಮಿ.ಕೈಟ್ ‘ಓಹೊ ಸ್ವಾರಿ. ಮಲಗಿ ಬಿಟ್ಟದ್ದೆ ಡೋಂಟ್‌ವರಿ, ನಿನ್ನ ಬ್ಯಾಟಿಂಗ್ ಇದೆಯಲ್ಲ ನಾನಿರುವೆ ಬಾರಿಸು”ಎಂದಿತು. ನಾನು ವಿಕೆಟ್ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದುದರಿಂದ ದೊಡ್ಡ ಹೊಡೆತಕ್ಕೆ ಕೈ ಹಾಕಲಿಲ್ಲ. ಬೌಲರ್ ರಫಿ ಒಬ್ಬ ಉಳಿದ. ಅವನನ್ನು ಯಾರು ಲೆಕ್ಕ ಇಟ್ಟಿರಲಿಲ್ಲ. ನಾನು “ಶೈನ್ ಆಗಲು ಇದು ಒಳ್ಳೆ ಅವಕಾಶ. ಎಲ್ಲಾ ಕಾಲಕ್ಕೂ ಸಮಯ ನಮ್ಮದಾಗಿರುವುದಿಲ್ಲ. ಸದುಪಯೋಗ ಮಾಡಿಕೊ, ಆಲ್‌ರೌಂಡರ್ ಆಗಿ ಇಂದು ಹೊರಹೊಮ್ಮಬೇಕು. ನಿನ್ನ ಪಾಳಿ ಬಂದಾಗ ಒಂದು ರನ್ ಮಾಡಿ ಬಾ. ನನಗೆ ಸ್ಟೆçöÊಕ್ ಬಿಟ್ಟುಕೊಡು. ಬಾಲ್ ವ್ಯರ್ಥ ಮಾಡಬೇಡ ” ಎಂದೆ. ರಫಿ ‘ಎಸ್’ ಎಂದರೂ ನನಗೆ ನಂಬಿಕೆ ಇರಲಿಲ್ಲ. ಅವನೊಬ್ಬ ಬೌಲರ್ ಮಾತ್ರ. ಬ್ಯಾಟು ಹಿಡಿಯಲು ಬರುತ್ತಿರಲಿಲ್ಲ. ಒಣ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಏನಾಯಿತೊ, ಕೈಟ್‌ನ ಕರಾಮತ್ತೊ, ಅವಕಾಶ ಸಿಕ್ಕಾಗ ಚೆನ್ನಾಗಿ ಬಾರಿಸಿ, ಭರ್ಜರಿ ಇಪ್ಪತೈದು ರನ್ ಹೊಡೆದು ಪಂದ್ಯದ ಗೆಲುವಿಗೆ ಕಾರಣನಾದ. ಪಂದ್ಯಮುಗಿದ ಮೇಲೆ ರಫಿಯನ್ನು ಎತ್ತಿಕೊಂಡು ಕುಣಿದಾಡಿದೆ. ರಾಮುವಿನ ಗ್ಯಾಂಗ್ ಇಂಗು ತಿಂದ ಮಂಗನ೦ತಾಗಿತ್ತು. ರಾಮು, ರಾಕೇಶ ಬಂದು ‘ದಯವಿಟ್ಟು ಪಿ.ಟಿ ಸರ್ ಗೆ ಹೇಳಬೇಡ. ಮುಂದೆ ಸರ್ ನಮಗೆ ಕ್ರಿಕೆಟ್ ಭವಿಷ್ಯ ಇಲ್ಲದ ಹಾಗೆ ಮಾಡುತ್ತಾರೆ’ ಎಂದು ಬೇಡಿಕೊಂಡರು. ಸೊಕ್ಕಿನಿಂದ ಮೆರೆಯುತ್ತಿದ್ದವರು ಬದಲಾದದ್ದು ನೋಡಿ ಖುಷಿಯಾಯಿತು, ಪಶ್ಚಾತ್ತಾಪದ ಭಾವ ಮುಖದಲ್ಲಿ ಕಾಣುತ್ತಿತ್ತು.
ಅಂದು ನಾನು ಮತ್ತು ರಫಿ ಎಲ್ಲರಿಗೂ ಹಿರೋ ಆಗಿ ಕಂಡೆವು. ಪಿ.ಟಿ ಸರ್‌ಗೆ ಆದ ಖುಷಿ ಅಷ್ಟಿಷ್ಟಲ್ಲ. ದಶಕಗಳಿಂದ ಗೆಲ್ಲಲಾಗದ ಟೂರ್ನಿಯನ್ನು ಈ ಸಲ ಗೆದ್ದಿದ್ದು ಹೆಮ್ಮೆಗೆ ಕಾರಣವಾಗಿತ್ತು. ನನ್ನ ಮಾತು ಬಂದಾಗ ತಂಡದ ಶ್ರಮ, ಎಲ್ಲರೂ ಮಾಡಿದ ಪ್ರಯತ್ನ ರಾಮು, ರಾಕೇಶ ಮಾಡಿದ ಮಾರ್ಗದರ್ಶನದ ಬಗ್ಗೆ ಹೊಗಳಿದೆ. ಅವರಿಗೆ ಇರಿಸು ಮುರುಸಾದರು ನನ್ನ ಬಗ್ಗೆ ಗೌರವ ಮೂಡಿದಂತೆ ಕಾಣಲಿಲ್ಲ.
ಮನೆಗೆ ಬಂದ ಮೇಲೆ ಮಗ ಒಳ್ಳೆಯ ಕ್ರಿಕೇಟರ್ ಆಗಿದ್ದನ್ನು ನೋಡಿ ಖುಷಿಯಾಗಿತ್ತು. ಮನೆಯಲ್ಲಿ ಆಡುವಾಗ ಬಯ್ಯುತ್ತಿದ್ದ ಅಮ್ಮ ಕೂಡಾ ಆನಂದ ಬಾಷ್ಟಗಳನ್ನು ಉದರಿಸಿದಳು, ದೃಷ್ಟಿ ತೆಗೆದು ಆರತಿ ಮಾಡಿದಳು.
ರೂಮಿಗೆ ಬಂದು ನಾನು ಮಿ.ಕೈಟ್ ಜೊತೆ ಮಾತಾಡಲು ತೊಡಗಿದೆ. ‘ತ್ಯಾಂಕ್ಯೂ ದೋಸ್ತ್’ ಎಂದು ಹೇಳಿದೆ. “ನೀನು ನನಗೆ ಮಾಡಿದ ಸಹಾಯದ ಮುಂದೆ ಇವು ಏನೂ ಅಲ್ಲ”
“ಎಂತಹ ಗುಣ ನಿನ್ನದು. ಮಾಡಿದ ಒಂದು ಸಣ್ಣ ಸಹಾಯವನ್ನು ದೊಡ್ಡದಾಗಿ ಹೇಳಿಕೊಳ್ಳುವವರ ಮುಂದೆ ನಿನ್ನ ವಿಶಾಲತೆಗೆ ಹ್ಯಾಟ್ಸ್ಆಫ್ ಫ್ರೆಂಡು” ಎಂದೆ.
“ನೀನೇನು ಕಡಿಮಿನಾ, ರಾಮು,ರಾಕೇಶ್ ಅವನ ಗ್ಯಾಂಗ್ ನಿನಗೆ ಕೈ ಕೊಟ್ಟರೂ ಅವರ ವಿಷಯ ಪಿ.ಟಿ ಸರ್ ಗೆ ಹೇಳದೆ, ಕ್ಷಮಿಸಿದಿಯಲ್ಲ”
“ಅವರು ಮಾಡುತ್ತಾರಂತೆ ನಾನು ಮಾಡಿದರೆ ಏನು ಸ್ವಾರಸ್ಯ ಉಳಿಯುತ್ತದೆ ಹೇಳು. ದ್ವೇಷ ಬೆಳೆಯುತ್ತದಷ್ಟೆ. ಕ್ಷಮಿಸಿದಷ್ಟು ಪ್ರೀತಿ ಬೆಳೆÉಯುತ್ತದೆ” ಎಂದೆ.
“ಒ೦ದು ಕೆಲಸ ಮಾಡು” ಎಂದಿತು ಕೈಟ್.
“ಕುತೂಹಲದಿಂದ ಏನು?” ಎಂದೆ.
“ಇಷ್ಟು ಚಂದ ಉಪದೇಶದ ಮಾತು ಹೇಳುವಂಗಿದ್ರ ಮಠಕ್ಕ ಸೇರಿ ಬಿಡು. ಒಳ್ಳೆಯ ಸ್ವಾಮಿ ಆಗುತಿದಿ” ಎಂದು ನಕ್ಕಿತು.
“ನನ್ನ ಸನ್ಯಾಸಿ ಮಾಡಬೇಕು ಅಂತ ಮಾಡಿಯೇನು? ನಾನು ಏನೇನೋ ಕನಸು ಇಟ್ಟಕೊಂಡಿನಿ”
“ಹೋ, ಸಾಹೇಬ್ರೂ . . . ಕನಸು ಇಟ್ಟುಕೊಂಡಿದ್ದಾರೊ? ಗುಡ್ ಗುಡ್, ಖುಷಿ, ಏನೂ ಅಂತಹ ಕನಸು. ದೊಡ್ಡ ಕ್ರಿಕೆಟರ್ ಆಗಬೇಕು ಅಂತಾನೋ, ಸೈಂಟಿಸ್ಟ್ ಆಗಬೇಕು ಅಂತಾನೋ, ದೊಡ್ಡ ಐ.ಎ.ಎಸ್ ಅಥವಾ ದೊಡ್ಡ ಐ.ಪಿ.ಎಸ್ ಆಗಬೇಕು ಅಂತಾನೋ? ಅಥವಾ . . .”
“ಅಂತಹಾದ್ದೇನೂ ಇಲ್ಲ”
“ಅಯ್ಯೊ! ಇದು ಒಳ್ಳೆಯ ಕತೆ ಆಯ್ತಲ್ಲ. ವಿದ್ಯಾರ್ಥಿ ಜೀವನದಲ್ಲಿ ಇಟ್ಟುಕೊಳ್ಳಬೇಕಾದದ್ದು ಇಂತಹ ಕನಸುಗಳೆ ಅಲ್ವಾ” ಎಂದಿತು.
“ಏನೂ ಕೈಟು, ಅವೆಲ್ಲ ಮುಂದೆ ಇದ್ದಿದ್ದಾ, ಅದಲ್ಲ ಇದು”
“ಹೊ . . . ಹೊ . . . ಗೊತ್ತಾಯ್ತು ಗೊತ್ತಾಯ್ತು ಸಾಹೇಬ್ರು. ಇಷ್ಟೆಲ್ಲ ಮಾಡುತ್ತಿರುವುದು ಯಾರನ್ನೊ ಇಂಪ್ರೆಸ್ ಮಾಡೋಕೆ ಅಂತ” ಎಂದಿತು.
“ಎಲಾ ಇವನಾ. ಎಂತಹ ಬೆರಿಕಿ ಇದ್ದಿಯೋ ನೀನು. ಪೂರ್ತಿ ಒಳಗಿನದು ಗೊತ್ತಾಯ್ತಾ?”
“ನನಗ ಹೊಸತಾಗಿ ಕೇಳ್ತಿಯೇನು?”
“ಅಲ್ಲ, ನನ್ನ ಮನಸ್ಸಿನಾಗಿಂದು ಗೊತ್ತಾದ ಮೇಲೆ, ಬೇರೆ ಯಾಕೆ ಮಾತನಾಡಿದಿ. ಸರಿ ಮಾಡಬೇಕಿಲ್ಲ”
“ಮೂರ್ಖ ಮೂರ್ಖ ಇದ್ದಿಯಾ ನೀನು. ವಾಟ್ ಯೂ ಥಿಂಕ್ ಅಬೌಟ್ ಯೂ” ಎಂದು ಕೋಪಗೊಂಡಿತು.
ಮಿ.ಕೈಟ್ ಹೀಗೆ ಒಮ್ಮಿಂದೊಮ್ಮೆಲೆ ಕೋಪಗೊಂಡಿದ್ದು ನನಗೆ ಸಮಾಧಾನ ತರಲಿಲ್ಲ. ಎಷ್ಟು ಮಾತಾಡಿದ್ರೂ ಮಾತನಾಡಲೇ ಇಲ್ಲ. ಮರುದಿನ ಮಾತನಾಡಿದ್ರಾಯಿತು ಅಂತ ಮಲಗಿದೆ ಆದರೆ ನಿದ್ದೆ ಹತ್ತಲಿಲ್ಲ.






0 Comments