ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧೀ ಚಿತ್ರದ ನೋಟು…

ಉದಯ ಗಾಂವಕಾರ

ನಮ್ಮ ಕರೆನ್ಸಿ ನೋಟುಗಳ ಮೇಲೆ ಗಾಂಧೀಜಿಯವರ ಚಿತ್ರ ಕಾಣಿಸಿಕೊಂಡದ್ದು ಸಾವಿರದೊಂಬೈನೂರಾ ಎಂಬತ್ತೇಳರಲ್ಲಿ. ನಗುಮೊಗದ ಬಾಪೂ ಚಿತ್ರ ಭಾರತೀಯ ಕರೆನ್ಸಿಯ ಮೇಲೆ ಮೊದಲು ಅಚ್ಚಾದದ್ದು ಐನೂರರ ನೋಟುಗಳ ಮೇಲೆ. ಆನಂತರ ನಿಮಗೆ ಗೊತ್ತೇ ಇದೆ- ಐದು, ಹತ್ತು, ಇಪ್ಪತ್ತು, ಐವತ್ತು, ನೂರು, ಐನೂರು, ಸಾವಿರ ಮತ್ತು ಈಗ ಎರಡು ಸಾವಿರ ರೂಪಾಯಿ ನೋಟಿಗಳ ಮೇಲೂ ಗಾಂಧಿ ಚಿತ್ರವಿದೆ.

ಕಲಾವಿದನೊಬ್ಬ ಸಪೂರ ತುದಿಯ ಪೆನ್ನಿನಿಂದ ರಚಿಸಿದ ಹಾಗೆ ಕಾಣುವ ಈ ಚಿತ್ರ ವಾಸ್ತವದಲ್ಲಿ ಅನಾಮಿಕ ಛಾಯಾಗ್ರಾಹಕನೊಬ್ಬನ ಲೆನ್ಸಿನಲ್ಲಿ ಕಂಡದ್ದು. ಈ ಚಿತ್ರಕ್ಕೂ ಚೆಂದದ ಕತೆ ಇದೆ.

ಲೇಬರ್ ಪಾರ್ಟಿಯ ಲಾರ್ಡ್ ಫ್ರೆಡ್ರಿಕ್ ಪೆಥಿಕ್ ಲಾರೆನ್ಸ್ ರವರು ಬ್ರಿಟನ್ ಸರ್ಕಾರದ ಕಾರ್ಯದರ್ಶಿಯಾಗಿ ಆಗ ಭಾರತದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಲಾರ್ಡ್ ಲಾರೆನ್ಸರಿಗೆ ಗಾಂಧೀಜಿಯೆಂದರೆ ಅಭಿಮಾನ. ಇದರಿಂದಾಗಿಯೇ ಅವರು ಭಾರತಕ್ಕೆ ಸ್ವಾತಂತ್ರ ನೀಡುವಲ್ಲಿ ಬ್ರಿಟನ್ ಸರ್ಕಾರ ಮತ್ತು ಭಾರತೀಯರ ನಡುವೆಯ ಸೇತುವೆಯಂತಾಗಿದ್ದರು.

ಅದು ಸಾವಿರದ ಒಂಬೈನೂರಾ ನಲವತ್ತಾರನೇ ಇಸವಿ. ಎಪ್ರಿಲ್ ಹದಿನೆಂಟನೆಯ ತಾರೀಕು. ಈಗಿನ ರಾಷ್ಟ್ರಪತಿ ಭವನ ಆಗ ವೈಸ್ ರಾಯ್ ಹೌಸ್ ಆಗಿತ್ತು. ಲಾರ್ಡ್ ಫ್ರೆಡ್ರಿಕ್ ಪೆಥಿಕ್ ಲಾರೆನ್ಸ್ ಮತ್ತು ಗಾಂಧೀಜಿ ವೈಸರಾಯ್ ಹೌಸಿನಿಂದ ಜೊತೆಯಾಗಿ ಹೊರಬರುತ್ತಿರುವಾಗ ಛಾಯಾಗ್ರಾಹಕನೊಬ್ಬ ಅವರಿಬ್ಬರ ಚಿತ್ರ ತೆಗೆದ. ಆ ಚಿತ್ರವನ್ನೇ ಕ್ರಾಪ್ ಮಾಡಿ ಕರೆನ್ಸಿ ನೋಟಿನ ಮೇಲೆ ಬಳಸಲಾಯಿತು.
ವಿಕೇಂದ್ರಿಕೃತ ಆರ್ಥಿಕ ವ್ಯವಸ್ಥೆಯನ್ನು ಪ್ರತಿಪಾದಿಸಿದ ಗಾಂಧೀಜಿ, ಹೀಗೆ ನೋಟಿನ ಮೇಲೆ ಅಚ್ಚಾದರು.

‍ಲೇಖಕರು Admin

16 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading