ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ಇಲ್ಲಿಗೂ ಬಂದರು..

`ಗಾಂಧಿ ಬಂದ ‘ ಮೊದಲ ಪ್ರತಿ ಗೌರವ …

ಕೆ ಅಕ್ಷತಾ

. ಭದ್ರಾವತಿ ಎಂಬ ಕೈಗಾರಿಕಾ ನಗರಿಯ ವಾಸಿಗಳಾದ ಒಬ್ಬ ಹುಡುಗ -ಒಬ್ಬ ಹುಡುಗಿ ಪರಸ್ಪರ ಇಷ್ಟ ಪಟ್ಟು ಮದುವೆಯಾಗಲು ನಿರ್ಧರಿಸಿದರು. ಆದರೆ ಅದು ಅಷ್ಟು ಸುಲಭ ಇರಲಿಲ್ಲ. ಏಕೆಂದರೆ ಹುಡುಗ ಮುಸ್ಲಿಂ, ಹುಡುಗಿ ಹಿಂದೂ ಧರ್ಮದ ಒಂದು ಜಾತಿ… ಆದರೆ ಅವರ ನಿರ್ಧಾರ ಅಚಲವಾಗಿತ್ತು. ಬಿ .ಕೃಷ್ಣಪ್ಪನವರಂಥಹ ಸಹೃದಯಿ ಮನುಷ್ಯರು ಇವರ ಬೆನ್ನಿಗಿದ್ದರು. ಇವರ ಮದುವೆ ನಡೆಯುತ್ತಿರುವ ಹೊತ್ತಲ್ಲಿ ಒಂದಿಷ್ಟು ಧರ್ಮ ಸಂರಕ್ಷಕರ ಪೋಷಾಕು ತೊಟ್ಟು ಮೆರೆಯುವ ಮಂದಿ ಮುತ್ತಿಗೆ ಹಾಕಿ ಮದುಮಗಳನ್ನು ಪ್ರಶ್ನಿಸಿಯೇ ಬಿಟ್ಟರು …`ನೀನು ಹಿಂದೂ … ಮುಸ್ಲಿಮನನ್ನು ಮದುವೆ ಆಗುತಿದ್ದೀಯ …ನಮಗೆ ಉತ್ತರ ಕೊಡು ಮದುವೆ ಆದ ಮೇಲೆ ಮಂದಿರಕ್ಕೆ ಹೋಗ್ತೀಯ ? ಮಸೀದಿಗೆ ಹೋಗ್ತೀಯ ? ನಮಗೆ ಉತ್ತರ ಬೇಕು…ಈಗಲೇ ಉತ್ತರ ಬೇಕು… ‘ ಅವರ ಅರಚಾಟದಲ್ಲಿ ಹುಡುಗಿ ತಣ್ಣಗೆ ಉತ್ತರಿಸಿದಳು `ನಾವು ಮದುವೆ ಮಾಡಿಕೊಂಡು ಮಂದಿರಕ್ಕೂ ಹೋಗೋಲ್ಲ ಮಸೀದಿಗೂ ಹೋಗೋಲ್ಲ … ಹನಿಮೂನಿಗೆ ಹೋಗ್ತೀವಿ .’

ಹಾಗೆ ಉತ್ತರಿಸಿದ್ದು ಮನೋರಮಾ ಮೇಡಂ. ಅವರ ಗಂಡ ನಿಸಾರ್ ಅಹ್ಮದ್ ಸರ್. ಅವರ ಮದುವೆ ನಡೆದು ಸುಮಾರು ೩೦ ವರುಷವಾಗಿದೆ . ಈ ಘಟನೆಯನ್ನು ಸಭೆಯೊಂದರಲ್ಲಿ ನೆನಪಿಸಿಕೊಂಡವರು ಖ್ಯಾತ ವಕೀಲರಾದ ರವಿವರ್ಮಕುಮಾರ್. ಇವರುಗಳ ಮದುವೆ ಮಾಡಿಸಿದವರೇ ಅವರಂತೆ . ಇಂಥ ನಿಸಾರ್ ಸರ್ ಮತ್ತು ಮನೋರಮಾ ಮೇಡಂ ಇವತ್ತಿಗೂ ತಮ್ಮ ಪ್ರೀತಿ, ವಿಶ್ವಾಸ ದ ತಳಹದಿಯ ಮೇಲಿನ ಜನಪರ ನಿಲುವನ್ನು ಬಿಟ್ಟುಕೊಡದೆ ಬದುಕಿದ್ದಾರೆ…. ಅವರಿಬ್ಬರನ್ನು ಮೊನ್ನೆ ಅಹರ್ನಿಶಿಯ ` ಗಾಂಧಿಬಂದ ‘ ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆದು` ಗಾಂಧಿ ಬಂದ ‘ ಕೃತಿಯ ಮೊದಲ ಪ್ರತಿಯನ್ನು ಅವರಿಗೆ ಕೊಡಿಸಿದಾಗ ಗಾಂಧಿ ನಮ್ಮನ್ನು ಎಸ್ಟೆಲ್ಲ ಮನುಷ್ಯರ ಮೂಲಕ ಅವರಿಸಿಕೊಳ್ಳುತಾನಲ್ಲ ಎಂದು ಅಚ್ಚರಿ ಆಯಿತು! ವೇದಿಕೆಗೆ ಜೊತೆಯಾಗಿ ಬಂದು ಪುಸ್ತಕ ಸ್ವೀಕರಿಸುವ ಹೊತ್ತಲ್ಲಿ ಮನೋರಮಾ-ನಿಸಾರ್ ಅವರು ಸಂಕೋಚದಿಂದ ಹಿಡಿಯಾಗಿದ್ದರೆ … ಇಡಿ ಸಭಾಂಗಣದ ಪ್ರೇಕ್ಷಕರು ಭಾವುಕರಾದೆವು …. ದೇವನೂರು ಸುಮ್ಮನೆ ಹೇಳಿದ್ದಾರೆಯೇ ಮತ್ತೆ `ಸಂಬಂಜ ಅನ್ನೋದು ದೊಡ್ಡದು ಕಣಾ ‘ ಎಂದು….

‍ಲೇಖಕರು G

18 December, 2011

2 Comments

  1. ರಾಮಸ್ವಾಮಿ ಹುಲಕೋಡು

    ಅಕ್ಷತಾ ಮೇಡಂ,
    ಒಳ್ಳೆಯ ಕೆಲಸ ಮಾಡಿದ್ದೀರಿ, ನಿಸಾರ್ ಸರ್ ನೋಡಿ ತುಂಬಾ ಖುಷಿಯಾಯಿತು.
    ನಾನು ಅಲ್ಲಿರಬೇಕಿತ್ತು. ಛೆ….
    -ರಾಮಸ್ವಾಮಿ

  2. shiju pasha

    sorry…naanu kuda hogodu miss maadkonde….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading