ಗಜಲ್
ಶ್ರೀಮತಿ ರೇಣುಕಾ ಎ ಕಠಾರಿ
ಕೂಡಿಟ್ಟ ಭಾವನೆಯ ಮೊಗ್ಗುಗಳು ಹೂವಾಗುವ ಹೊತ್ತು
ನವಿಲುಗರಿಒಂದೊಂದೆ ಬಣ್ಣ ಬಿಚ್ಚಿ ನಾಟ್ಯವಾಗುವ ಹೊತ್ತು
ಗಗನವೇ ಬಾಗಿ ತೋಳು ಸವರಿ ನನ್ನನೆ ಬಿಗಿಯುತಿದೆ
ಮಗುವಾಗಿದೆ ಮನಸು ಅವನ ಹಠ ಹಿಡಿದೆ ನಗುವಾಗುವ ಹೊತ್ತು

ಬಿಳಿಸೂರ್ಯನ ಬರುವಿಗೆಕಾತರಿಸುತಿವೆ ಕಣ್ಣುಗಳುಕ್ಷಣಕ್ಷಣ
ತುಟಿ ವೀಣೆಯತುಂಬ ಮೌನದ ಹಾಡೊಂದುರಾಗವಾಗುವ ಹೊತ್ತು
ಜಪ ಹಿಡಿದ ಭಾವಒಗುರಾದರು ಮಧುರ ನೆರಳಾಗಿದೆ
ಸಾವಿರದ ಮೌನದೊಳಗಿನ ಮಾತುಗಳು ಚಂದ್ರನೆದುರು ನಾಚುವ ಹೊತ್ತು
ಅಮಲು ಹಿಡಿದಿದೆ ಬೆನ್ನು ಬಿಡದೆ ನನ್ನವನ ಮಾತು ಅನು ದಿನ
ಹಾಕಿದರಂಗೋಲಿಯು ನಿನ್ನ ನೆನಪಾಗಿ ಕಾಡುವ ಹೊತ್ತು





very nice..
super…
ಅವಧಿ ಓದಿದೆ ತುಂಬಾ ಖುಷಿಯಾಯ್ತು. ಮತ್ತೆ ಮತ್ತೆ ಓದ್ತಾ ಇರ್ತೀನಿ.
ರೇಣುಕಾ ಕಠಾರಿಯವರ ಗಜಲ್ ತುಂಬಾ ಚೆನ್ನಾಗಿದೆ
ನಮಸ್ತೆ ಮೇಡಮ್ ನಿಮ್ಮ ಗಜಲ್ ತುಂಬಾ ಚೆನ್ನಾಗಿದೆ. ಆದರೆ ನಿಮ್ಮ ಗಜಲ್ನಲ್ಲಿ ಮಕ್ತಾ ಇಲ್ಲವಲ್ಲ ಆದಷ್ಟು ನಿಮ್ಮ ಕಾವ್ಯನಾಮವಾಗಿ ಮಕ್ತಾ ಬಳಸಿ ಗಜಲ್ ರಚನೆ ಮಾಡಿದ್ದೆ ಆದರೆ ಗಜಲ್ ಇನ್ನೂ ಚೆನ್ನಾಗಿ ಮೂಡಿಬರಬಹುದಿತ್ತು ಎಂದು ನನ್ನ ಗ್ರಹಿಕೆ. ನಿಮ್ಮ ಗಜಲ್ ಬರಹ ಹೀಗೆ ಮುಂದುವರೆಯಲಿ
ಅ್ತ
ತುಂಬಾ ಚೆನ್ಙಾಗಿದೆ