ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಳನಾಯಕ ಕೀಚಕ ಈಗ ನಾಯಕ

ಶ್ಶ್ ಶ್!!! ಖಳ ಕೀಚಕ ನಾಯಕನಾಗುತ್ತಿದಾನೆ

ವಿದ್ಯಾಶಂಕರ್ ಹರಪನಹಳ್ಳಿ


ಕಳೆದ ಶುಕ್ರವಾರ ಬೆಳಿಗ್ಗೆಯಿಂದಲೇ ಕೀಚಕ ಕಾಡತೊಡಗಿದ್ದ. ಹದಿನೈದು ದಿನ ಮುಂಚೆ ನನಗೆ ಫೇಸ್ಬುಕ್-ನಲ್ಲಿ ಆಹ್ವಾನ ಬಂದಿತ್ತು. ನಾಟಕಕ್ಕೆ ಹೊಗಲೇಬೇಕೆಂದು ನಿರ್ಧಾರ ಮಾಡಿಯಾಗಿತ್ತು. ಭೀಮಬಲದಿಂದ ಮುಗಿಯದ ಕೆಲಸವೆಂಬ ಬೆಟ್ಟವನ್ನು ಕೊರೆದು ಸಂಜೆ ಬೇಗನೆ ಎಲೇಕ್ಟಾನಿಕ್ ಸಿಟಿಯಿಂದ ಹೊರಟೆ.
ಬಸ್ಸಲ್ಲಿ ಫೇಸ್ಬುಕಲ್ಲಿ ಕಣ್ಣಾಡಿಸಿದರೆ ‘ಢುಂಢಿ’ ಪುಸ್ತಕದ ಗಲಾಟೆ. ಲೇಖಕನ ಬಂಧನ ಮತ್ತು ಬಿಡುಗಡೆಯ ಬ್ರೇಕಿಂಗ್ ನ್ಯೂಸ್ ಬರ್ತಾಯಿತ್ತು. ಪುಸ್ತಕವನ್ನೆ ಓದದೆ ಟೀಕಿಸುವುದು ತಪ್ಪೆಂದು ಕೆಲವರು, ಪುಸ್ತಕ ಕೇವಲ ೧೫೦ ಪ್ರತಿ ಪ್ರಿಂಟ್ ಹಾಕಿಸಿದ್ದಾರೆ ಓದೋಣ ಅಂದ್ರೆ ಸಿಕ್ತಾಯಿಲ್ಲಲ್ರಿ ಎಂದು ಕೆಲವರು ಹಲಬುತ್ತಿದರು, ಹಿಂದು ಧರ್ಮವನ್ನು ಯಾರುಬೇಕಾದರು ಟೀಕಿಸಿ ದಕ್ಕಿಸಿಕೊಳ್ಳಬಹುದು ಎಂದು ಇನ್ನೂ ಕೆಲವರು, ಲೇಖಕನ ಚರ್ಚೆಗೆ ಕರಿರೀ ಅಂತ ಇನ್ನೊಬ್ಬರು, ಇನ್ಯಾರೋ ಯೋಗಿಶ್ ಮಾಸ್ಟರ್-ನ ಕೆಲವು ಚಿತ್ರ-ವಿಚಿತ್ರ ಹಾವಭಾವದ ಫೊಟಗಳನ್ನ ಹಾಕಿ ಕೃತಿಯ ಬಗ್ಗೆ, ಲೇಖಕನ ಚಾರಿತ್ರ್ಯದ ಬಗ್ಗೆ ನಿರ್ಣಾಯಕವಾಗಿ ಪೊಸ್ಟ್ ಹಾಕಿದ್ದರು. ಹೀಗೆ…

ಫೇಸ್ಬುಕ್ ಕ್ಲೋಸ್ ಮಾಡಿ ಹೊಸಗಾಳಿಯಲಿ ನಿರೀಕ್ಷೆಯಲಿ ಬಸ್ಸಿನ ಕಿಟಕಿಯ ತೆರೆದೆ, ಬರಿ ಧೂಳು, ಹೊಗೆ…
ಆಗ ಕೈಲಾಸ್ಂ ನೆನಪಾದರು. ಟಿ.ಪಿ. ಕೈಲಾಸಂನ ಯಾವುದೊ ಸಭೆಗೆ ಕರಿಸಿದ್ದರಂತೆ, ಅಲ್ಲಿ ಸಭೆಯ ನಿರ್ವಾಹಕರು ಕೈಲಾಸಂ ಜೀವನ ಶೈಲಿ ಬಗ್ಗೆ, ಸೀಗರೇಟಿನ ನಂಟಿನ ಬಗ್ಗೆ ಯದ್ವಾತದ್ವಾ ಮಾತಡತೊಡಗಿದರಂತೆ. ಆಗ ಕೈಲಾಸಂ “ರಾಜsss ಕೃತಿ ಬಗ್ಗೆ ಮಾತಾಡಬೇಕು, ವಿಮರ್ಶೆ ಮಾಡಬೇಕು ಕೃತಿಕಾರನ ಅಲ್ಲ…” ಅಂತ ತಮ್ಮ ಎಂದಿನ ಶೈಲಿಯಲ್ಲಿ ತಪಾರಕಿ ಕೊಟ್ಟರಂತೆ.
ಕೈಲಾಸಂ ನೆನಪಾದೊಡನೆ ಎಲ್ಲಾ ವಿಷಯಗಳನ್ನ ಮನಸ್ಸಿನಿಂದ ದೂರ ತಳ್ಳಿ. ನಾಟಕದ ಬಗ್ಗೆ ಯೊಚಿಸಿದ ತೊಡಗಿದೆ. ಚಿಕ್ಕವನಿದ್ದಾಗ ನಮ್ಮಪ್ಪನಿಂದ ಈ ನಾಟಕದ ಬಗ್ಗೆ ಕೇಳಿದ್ದೆ. ಮೃತ್ಯುಬಂಧ ಬಗ್ಗೆ ಕೇಳಿದ್ದೆ. ಭೀಮಾ ಕೀಚಕನಿಗೆ ಮೃತ್ಯುಬಂಧನ ಬಿಗಿದಾಗ ಕೀಚಕ ಹೇಳುವ ವಿಷಾದಮಯ ಡೈಲಾಗು ನನ್ನ ಅಂತರಂಗದಲ್ಲಿ ಕೇಳತೊಡಗಿತು. ಉತ್ಸಾಹದಿಂದ ನಾಟಕಕ್ಕಾಗಿ ಎದುರು ನೋಡತೊಡಗಿದೆ.ನಮ್ಮಪ್ಪ ಬೇರೆ ನನ್ನ ಜೊತೆ ನಾಟಕಕ್ಕೆ ಜೊತೆಯಾಗುವರಿದ್ದರು. ಹಾಗಾಗಿ ಬಾಲ್ಯದ ನೆನಪುಗಳು ಗರಿಗೆದರಿದವು.

***

ನಾಟಕ ಶುರುವಾಗಿದ್ದೆ ವಿಘ್ನನಿವಾರಕ ಗಣೇಶನ ಸ್ತುತಿಯೊಂದಿಗೆ, ಯಾಕೋ ಯೋಗೇಶ ಮಾಸ್ಟರ್ ನೆನಪಾದ. ಸಾಮಾನ್ಯವಾಗಿ ನಾವೆಲ್ಲಾ ಓದಿರುವಂತೆ, ಕೇಳಿರುವಂತೆ ಸುಧೇಷ್ಣೆಯ ಅಣ್ಣ ಕೀಚಕ ಅಜ್ಞಾತವಾಸದಲ್ಲಿದ್ದ ದ್ರೌಪದಿಯ ಕಾಡಿದ ಖಳನಂತೆ, ರಾಕ್ಷಸನಂತೆ ಚಿತ್ರಿಸಿರುವುದೆ ಜಾಸ್ತಿ. ಆದರೆ ಕೈಲಾಸಂ ಅವನಲ್ಲಿ ಒಬ್ಬ ದುರಂತ ನಾಯಕನನ್ನು ಕಂಡಿದ್ದಾರೆ. ಕೈಲಾಸಂ ಹೇಳಿದ, ಅರ್ಧ ಬರೆದ ನಾಟಕವನ್ನ ಜಿ.ಪಿ. ರಾಜರತ್ನಂ ಮುಂದುವರಿಸಿ, ಬರೆದ ನಾಟಕ “ಕೀಚಕ”.
ಕೈಲಾಸಂ ಕೀಚಕನನ್ನು ದುರಂತ ನಾಯಕನ್ನಾಗಿ, ಭಾವುಕನನ್ನಾಗಿ ರೂಪಿಸಿದ್ದಾರೆ. ಕೊಂಚ ಕೀಚಕನ ಪರವಾಗಿ ಹೊಸದೊಂದು ದೃಷ್ಟಿಕೋನ ಕೊಟ್ಟಿದ್ದಾರೆ.
ಸುಧೇಷ್ಣೆಯ ಅಣ್ಣ ಕೀಚಕ ವಿರಾಟನಗರದ ಸೇನಾಧಿಪತಿ, ಮಹಾಬಲಶಾಲಿ. ಹಾಗೆ ನೋಡಿದರೆ ಕೀಚಕ ಸಾಮನ್ಯನಾದವನಲ್ಲ. ಬಲರಾಮನ ಶಿಷ್ಯ. ಬಲರಾಮನ ಹತ್ತಿರ ಮಲ್ಲವಿದ್ಯೆಯನ್ನು ಕಲಿತ ಐವರಲ್ಲಿ ಒಬ್ಬ (ಉಳಿದವರು ಭೀಮ, ದುರ್ಯೋಧನ, ಜರಾಸಂಧ ಮತ್ತು ಸಾತ್ಯಕಿ).
ಸಂಚಾರಿ ನಾಟಕ ತಂಡ ಕಳೆದ ಶುಕ್ರವಾರ “ಕೀಚಕ” ನಾಟಕವನ್ನು ರಂಗಕ್ಕೆ ಅಳವಡಿಸಿದ್ದರು.
ನಿರ್ದೇಶನ ರಾಮನಾಥ್ ರಂಗಾಯಾಣ. ಕೀಚಕನ ಪಾತ್ರಧಾರಿ (ಗಣಪ) ಕೀಚಕನ ಪಾತ್ರವೇ ತಾನಾಗಿ ನಟಿಸಿದ್ದ. ಅಜ್ಞಾತವೇಷದಲ್ಲಿ, ವಿಷಾದವೇ ತನಾದ ಭೀಮ, ದ್ರೌಪದಿ. ಅಣ್ಣನ ಮುದ್ಧಿನ ತಂಗಿ ಸುಧೇಷ್ಣೆ ಪಾತ್ರಧಾರಿಗಳು ತಮ್ಮ ಅಮೋಘ ಅಭಿನಯದಿಂದ ನಾಟಕಕ್ಕೆ ಕಳೆ ತಂದರು.
ನಾಟಕದಲ್ಲಿ ಒಂದೇ ಒಂದು ಹಾಡಿದ್ದರು, ಅದನ್ನು ಬೇರೆ ಬೇರೆ ಭಾವದಲ್ಲಿ ಬಳಸಿದ್ದು ವಿಶೇಷ. ಕೀಚಕನನ್ನು ವಿರಾಟನಗರಕ್ಕೆ ಬರ ಮಾಡಿಕೊಳ್ಳುವಾಗ, ಸಂಭ್ರಮದ ನೃತ್ಯ, ಅಣ್ಣ-ತಂಗಿ ಕೀಚಕ-ಸುಧೇಷ್ಣೆರ ಸಂಭಾಷಣೆ ಗಮನ ಸೆಳೆದವು.

ನಾಟಕದಲ್ಲಿ ನನಗೆ ಕಂಡ ಒಂದೇ ಒಂದು ದೋಷವೆಂದರೆ ದ್ರೌಪದಿಯ ತುಂಡು ತಲೆ ಕೂದಲು. ಊದ್ದ ಜಡೆ ಇದ್ದಿದ್ದರೆ ಕೊಂಚ ಚೆನ್ನಾಗಿತ್ತೇನೋ?! ನಾನು ಮಹಾಭಾರತ ಓದಿ ಕಲ್ಪಿಸಿಕೊಂಡಿದ್ದೆ ಹಾಗೆ.
ರಂಗಕ್ಕೆ ನಾಟಕವನ್ನು ಯಶಸ್ವಿಯಾಗಿ ಅಳವಡಿಸಿದ ‘ಸಂಚಾರಿ ನಾಟಕ ತಂಡಕ್ಕೆ’ ಅಭಿನಂದನೆಗಳು. ಅವಕಾಶ ಸಿಕ್ಕರೆ ಖಂಡಿತ ಈ ನಾಟಕವನ್ನು ಖಂಡಿತ ನೋಡಿ.
 

‍ಲೇಖಕರು G

7 September, 2013

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Mahesh

    ಖಳನಾಯಕ ಪಾತ್ರಗಳಲ್ಲಿ ದುರಂತ ನಾಯಕನನ್ನು ಕಾಣುವುದು ನಮ್ಮ ಯಕ್ಷಗಾನಗಳಲ್ಲಿ ಹಾಸುಹೊಕ್ಕಾಗಿದೆ. ಖಳನಾಯಕ ಅಥವಾ ದುರಂತ ನಾಯಕ ಪಾತ್ರಗಳನ್ನು ಮಾಡುವ ಕಲಾವಿದರೇ ಯಕ್ಷಗಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರಾದವರು. ನಾಟಕಗಳಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿರುವುದು ಅಭಿನಂದನಾರ್ಹ

    • vividyashankar harapanahalli

      ಆಸಕ್ತಿಕರ ಒಳನೋಟ ಥ್ಯಾಂಕ್ಸ್ ಮಹೇಶ್

  2. samyuktha

    :)Next time miss madalla

  3. Sharadhi

    Interesting!, however, Jarasandha can’t be a student of Balarama, because, Balarama is a grandson of Jarasandha.

    • vividyashankar harapanahalli

      i had a same question. Tried to refer the mahabharat books that i have, but could find definite answer… hence had relay on what i heard in drama. Appreciate if one could throw light on this.

  4. Hariprasada . A

    ಚಂದ ಬರೆದಿದ್ದೀರಿ. ಜೊತೆಗೆ ಚಿತ್ರಗಳು ನಾಟಕವನ್ನು ನೋಡುವಂತೆ ಪ್ರೇರೇಪಿಸುತ್ತಿವೆ. ಖಂಡಿತ ನೋಡಬೇಕು. ಆದರೆ ಜರಾಸಂಧ ಬಲರಾಮನ ವಿದ್ಯಾರ್ಥಿಯಲ್ಲ.

  5. vageesh

    ಯಕ್ಷಗಾನದಲ್ಲಿ ಇಂತಹ ಪ್ರಯೋಗ ಸಾಮಾನ್ಯ. ಅದರಲ್ಲೂ ತಾಳಮದ್ದಳೆಯಲ್ಲಿ ಶೇಣಿಯಂತಹವರು ರಾಮನಿಗಿಂತ ರಾವಣ, ರಾಮನಿಗಿಂತ ವಾಲಿ, ಪಾಂಡವರಿಗಿಂತ ದುರ್ಯೋದನ ಶ್ರೇಷ್ಠ ಹೀಗೆ ಸಾಲು ಸಾಲಾಗಿ ತಮ್ಮ ಮಾತಿನ ಮಂಟಪದಿಂದ ತಾರ್ಕಿಕವಾಗಿ ಪ್ರತಿಪಾದಿಸಿ ಜನ-ಮನ ಗೆದ್ದಿದ್ದರು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading