ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಂಡಿತಾ ಬನ್ನಿ: ಹಂಸಾನಂದಿ ಪತ್ರ

ನನ್ನ ಕಡೆಯಿಂದ ಒಂದು ಒಳ್ಳೇ ಸಮಾಚಾರವಿತ್ತು. ಅದಕ್ಕೆಂದ ಈ ಮಿಂಚಂಚೆ.

ಬರುವ ಶನಿವಾರ, ಜುಲೈ ಹದಿನಾರರಂದು ಬೆಳಗ್ಗೆ ಹತ್ತುಗಂಟೆಗೆ ನನ್ನ ಮೊದಲ ಸಂಸ್ಕೃತ ಸುಭಾಷಿತಗಳ ಕನ್ನಡ ಅನುವಾದದ ಸಂಗ್ರಹ ಹಂಸನಾದ ಬಿಡುಗಡೆ ಆಗುತ್ತಿದೆ. ಅದರ ಜೊತೆಯಲ್ಲೇ, ನನ್ನ ಮಡದಿ ಪೂರ್ಣಿಮಾಳ ಚೊಚ್ಚಲ ಕಥಾ ಸಂಕಲನ ಅಕ್ಟೋಬರ್ ೧೦ ಕೂಡ ಬಿಡುಗಡೆ ಆಗುತ್ತಿದೆ.

ಈ ಸವಿಗಳಿಗೆಯಲ್ಲಿ ನಮ್ಮೊಂದಿಗೆ ಮೈಸೂರು ಆಕಾಶವಾಣಿ ನಿಲಯದ ನಿರ್ದೇಶಕಿ ಶ್ರೀಮತಿ ವಿಜಯಾ ಹರನ್, ಬಹುಭಾಷಾ ವಿದ್ವಾಂಸ ಶ್ರೀ ರಾಮಚಂದ್ರ ಶರ್ಮ ತ್ಯಾಗಲಿ, ಪ್ರಸಿದ್ಧ ಕಿರುತೆರೆ ಕಲಾವಿದೆ ಶ್ರೀಮತಿ ಜಯಲಕ್ಷ್ಮೀ ಪಾಟೀಲ್, ಮತ್ತು ಚಿತ್ರದುರ್ಗದ ಸಂಸತ್ ಸದಸ್ಯ ಶ್ರೀ ಜನಾರ್ಧನ ಸ್ವಾಮಿ ಇವರು ಇರುತ್ತಾರೆ. ಈ ಸಂತಸದ ಕ್ಷಣಗಳಲ್ಲಿ ನಮ್ಮ ಜೊತೆ ಪಾಲ್ಗೊಂಡು ನಮ್ಮ ಸಂತಸವನ್ನು ಹೆಚ್ಚಿಸಲು ನೀವು ಬಿಡುವು ಮಾಡಿಕೊಂಡು ಈ ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ.

ನಿಮ್ಮನ್ನು ಕಾಣಲು, ನಿಮ್ಮೊಡನೆ ಮಾತನಾಡಲು ನಾನು ಕಾತರನಾಗಿದ್ದೇನೆ.

ಸ್ಥಳ:ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಿ ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು

ವೇಳೆ: ಬೆಳಗ್ಗೆ ಹತ್ತರಿಂದ ಹತ್ತೂವರೆ ಉಪಹಾರ; ಹತ್ತೂವರೆಯಿಂದ ಹನ್ನೆರಡು ಗಂಟೆಯವರೆಗೆ ಪುಸ್ತಕ ಬಿಡುಗಡೆ ಸಮಾರಂಭ

ಬರುತ್ತೀರಲ್ಲ?

ನಿಮ್ಮ ವಿಶ್ವಾಸಿ

-ಹಂಸಾನಂದಿ

ಹರಿದಾಸ ಸಂಪದ: http://www.haridasa.in/

 

‍ಲೇಖಕರು G

10 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading