ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ
ಹರಿವ ನೀರಿಗೆ ಬೆಳಕಿನ ನೆರಳು
ಹರಿವ ನೀರಲಿ ತೇಲುತಿದೆ ದೀಪವೊಂದು
ಗಾಳಿಯ ಆರ್ಭಟದಲಿ, ಅಲೆಗಳ ಏರಿಳಿತದಲಿ
ಆತ್ಮವೊಂದು ಸಿಲುಕಿ ಪ್ರಶಾಂತವಾಗಿ ಚಲಿಸುತಿದೆ
ದೀಪವದು, ಬರೀ ದೀಪವಲ್ಲ, ಬರೀ ಆತ್ಮವೂ ಅಲ್ಲ
ದೀಪದ ಬೆಳಕೇ ಜ್ಞಾನ, ಪ್ರಜ್ವಲವೇ ಪ್ರಭಾವಳಿ
ಉರಿವ ಜ್ವಾಲೆಯ ಬೆಳಕಿನಲಿ
ಜೀವಿಗಳ ಬದುಕಿನ ತಲ್ಲಣಗಳು
ನಿಸರ್ಗದ ಪಿಸುದನಿಗೆ ಹರಿಗೋಲಾಗಿ
ಉಟ್ಟು ಹಾಕುತ್ತಿವೆ, ದೀಪ ಬೆಳಗುತ್ತಲೇ ಸಾಗುತ್ತಿದೆ
ಆತ್ಮದ ನೆರಳೊಂದು ದೀಪದ ಜ್ವಾಲೆಯಲಿ
ಅಚ್ಚಾಗಿ ಬೆಚ್ಚಗಿನ ಹೊದಿಕೆಯಲ್ಲಿ, ಮಂಜಹನಿಯ ಸ್ಪರ್ಶದಲಿದ್ದರೂ
ದೀಪ, ತೇಲುತ್ತಲೇ ಸಾಗುತ್ತಿದೆ, ಬೆಳಗುತ್ತಿದೆ
ಕತ್ತಲೆಯ ಬೆಳಕಲ್ಲೇ ದೀಪ ಹಕ್ಕಿಗುಬ್ಬಚ್ಚಿಗಳ
ಚಿಲಿಪಿಲಿ ಸದ್ದಿನಲ್ಲಿ ಸೇರಿ, ಹೊಸತನದ
ಸೃಷ್ಟಿಯಲ್ಲಿ ಸಮ್ಮಿಳನಗೊಳ್ಳಲಿದೆ
ದೀಪವು ಶಾಶ್ವತ, ಅದರ ಬೆಳಕು – ಪ್ರಖರತೆ ಅಶಾಶ್ವತ
ದೀಪಕ್ಕೆ ಪರ್ಯಾಯವಿಲ್ಲ, ದೀಪವು ನಂದಾದೀಪ





0 Comments