ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಸ್ಯಾಂಕಿ ಕೆರೆಯ ಅಂಚಿಗೆ..

   naveen-soraba

ನವೀನ ಸೊರಬ

ಸ್ಯಾಂಕಿ ಕೆರೆಯ ಅಂಚಿಗೆ
ಬೆಂಕಿ ಹಚ್ಚುವುದೇ ಬೇಡ
click-aytu-kavite7ದಿನಾ ಸಂಜೆ ಸೂರ್ಯನೆ
ಗೀರುತ್ತಾನೆ ಬೆಂಕಿಕಡ್ಡಿ
ಕೆರಳುತ್ತದೆ ಕೆಂಪು ಮೋಡ
ಗಾಳಿ ಬೀಸುತ್ತದೆ
ಅಲೆಗಳಿಗೆ ಶಕ್ತಿ ಬರುತ್ತದೆ
ನನ್ನ ಕಾಗದದ ದೋಣಿ
ಚಲಿಸುತ್ತದೆ
ಚೂರು ಚಲಿಸಿದ್ದೇ ತಡ
ಹಸಿಯಾಗುತ್ತದೆ ಬುಡ

ಕಿಡಿಗೇಡಿ ಸೂರ್ಯ
ಕಿಡಿತಾಕಿಸಿದ್ದಾನೆ ತುದಿಗೆ
ಉರಿಯಬೇಕೋ;ಮುಳುಗಬೇಕೋ
ಎಂಬ ಗೊಂದಲ ದೋಣಿಗೆ

ಎಷ್ಟು ಶುದ್ಧ ಬೆಂಕಿಯ ಕೆನ್ನಾಲಿಗೆ
ತಿಂದಷ್ಟು ಹಸಿವು ನೀರಿನ ಅಲೆಗೆ

ಎರಡರಲ್ಲೂ
ಸಾವು ಕೊನೆಗೆ

 

‍ಲೇಖಕರು Admin

29 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading