ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಪ್ರತಿ ಕ್ಲಿಕ್ ನೊಂದಿಗೆ..

kamala-devangamata

ಕಮಲಾ ದೇವಾಂಗ ನಾರಾಯಣ 

ನಿನ್ನ  ಜಾದೂ ಪಿಠಾರದಿ
ಸರಿದ ಕಾಲದ ಅದೆಷ್ಟು
ಸಿಹಿ ಕಹಿ ಕ್ಷಣಗಳ
ಲೆಕ್ಕವಿದೆಯೋ
ಹೇಳು ಗೆಳೆಯಾ..
ಕೊನೆಯದಾಗಿ ಕ್ಲಿಕ್ಕಿಸಿದ
ಮಧುರ ಕ್ಷಣವಾವುದದು…

cameraಅಮ್ಮನ ಪ್ರೀತಿಯ
ಕೈತುತ್ತಿನ ಸವಿಯೋ,
ಸಾಗರದಲೆಗಳ ಉಪ್ಪಿನ
ರುಚಿಯೋ, ಪುಟ್ಟ ಕಂದನ
ಪುಟ್ಟ ಪುಟ್ಟ ಹೆಜ್ಜೆಯ
ಗುರುತೊ ,ಪ್ರೇಮಿಗಳ
ಪಿಸು ಮಾತಿನ ದನಿಯೋ,
ಬಾನಂಗಳದಿ ಹಾರುವ
ಹಕ್ಕಿಯ ವಿಸ್ತಾರವೋ,
ಕಾಮನ ಬಿಲ್ಲಿನ ಬಣ್ಣದ
ಸೊಬಗೋ, ಸುಂದರಿ ಹೆಣ್ಣ
ಕಣ್ಣ ಕೋಲ್ಮಿಂಚಿನ ಸಂಚೋ….

ಪ್ರತಿ ಕ್ಲಿಕ್ ನೊಂದಿಗೆ
ಅದ್ಭುತ ಕ್ಷಣಗಳ
ಚಿತ್ರಪಟದಿ ಸೆರೆಯಾಗಿಸಿ
ಸುಂದರಗೊಳಿಸಿ
ನಾಳಿನ ಮೆಲುಕುಗಳಿಗೆ
ಸಾಕ್ಷಿಯಾದ ನಿನ್ನ ಸೇವೆ
ಅನನ್ಯ , ಅಪೂರ್ವ…

ಹೊಸ ಅವಿಷ್ಕಾರಗಳ
ಅನಾವರಣದಿಂದ ನೀ
ನೇಪಥ್ಯಕ್ಕೆ ಸರಿದರೂ
ಮೊದಲ ಪ್ರೀತಿಯ
ಸಿಹಿ ಅನುಭವವ
ಮರೆಯಲಾಗದು ಗೆಳೆಯಾ…..

‍ಲೇಖಕರು Admin

23 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading